ಬೈಕ್ ಸವಾರರ ಹಾವಳಿಯಿಂದ ಪ್ರಾಣ ಭಯದಲ್ಲಿರುವ ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರು; ರಸ್ತೆಗಿಳಿದು ಜಾಗೃತಿ ಮೂಡಿಸಲು ಪಣ ತೊಟ್ಟ ವೃದ್ಧರು..

0
181

ಯಾವುದನ್ನು ಮಾಡಬೇಡಿ ಎಂದು ಹೇಳುತ್ತಾರೋ ಅದನ್ನೇ ಮಾಡಿ ತೀರುತ್ತೇನೆ ಎನ್ನತ್ತಾರೆ ನಮ್ಮ ಜನ, ಸದ್ಯ ಈ ಪರಿಸ್ಥಿತಿ ಇರುವುದು ರಸ್ತೆ ನಿಯಮದಲ್ಲಿ. ದೊಡ್ಡ ರಸ್ತೆ ವಾಹನಗಳಿಗೆ ಓಡಾಟಕ್ಕೆ ಮಾಡಿದರೆ ಪುಟ್ ಪಾತ್ ಪಾದಚಾರಿಗಳಿಗೆ ಈನುವ ನಿಯಮವನ್ನು ಮಾಡಿದ್ದಾರೆ ಆದರೆ. ಕಿಡಿಗೇಡಿ ಬೈಕ್ ಸವಾರರು ರಸ್ತೆ ಬಿಟ್ಟು ಪುಟ್ ಪಾತ್ ಮೇಲೆ ಸಂಚಾರ ನಡೆಸಿದ್ದಾರೆ. ಇದರಿಂದ ಈಗಾಗಲೇ ಹಲವು ಅಪಘಾತಗಳು ಕೂಡ ಆಗಿ ಪ್ರಾಣಹಾನಿ ಕೂಡ ನಡೆದಿವೆ. ಇಂತಹ ವ್ಯವಸ್ಥೆ ವಿರುಧ ಪೊಲೀಸರು ಎಷ್ಟೇ ಎಚ್ಚರವಹಿಸಿದರು ನಿಯಂತ್ರಣಕ್ಕೆ ಬರದೆ ಬೆಂಗಳೂರಿನ ಜನರು ಭಯದಲ್ಲಿ ನಡೆದಾಡುತ್ತಿದ್ದಾರೆ.

Also read: ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ನಿವೃತ್ತ ನೌಕರಿಗೆ ಅಮೆಜಾನ್-ನಿಂದ ಪಾರ್ಟ್ ಟೈಮ್ ಜಾಬ್; ದಿನದ 4 ಗಂಟೆಯಲ್ಲಿ 500 ರೂ ಗಳಿಸಬಹುದು..

ಹೌದು ಬೆಂಗಳೂರಿನಲ್ಲಿ ರಸ್ತೆಗಳು ತುಂಬಿ ವಾಹನಗಳು ಪುಟ್ ಪಾತ್ ಮೇಲೆ ಹರಿದಾಡುತ್ತಿವೆ. ಇದರಿಂದ ಮಕ್ಕಳು ಮತ್ತು ವೃದ್ಧರು ರಸ್ತೆಯಲ್ಲಿ ನಡೆದುಕೊಂಡು ಹೋಗುವುದೇ ಚಿಂತೆಯಾಗಿದ್ದು. ಇರುವ ಸ್ವಲ್ಪ ಪುಟ್ ಪಾತ್ ಜಗದಲ್ಲಿ ಯುವಕರು ಶರವೇಗದಲ್ಲಿ ಎದುರಿಗೆ ಬರೋದು ನೋಡಿ ಜನರು ರಸ್ತೆಗಿಳಿಯುವುದೇ ಬಿಟ್ಟಿದ್ದಾರೆ. ಹೀಗೆ ರಸ್ತೆಗಿಳಿಯದೆ ಮನೆಯಲ್ಲಿ ಎಷ್ಟು ದಿನ ಇರಬೇಕು ಎನ್ನುವ ವೃದ್ದರ ತಂಡ ರಸ್ತೆ ನಿಯಮವನ್ನು ಬ್ರೇಕ್ ಮಾಡುವರಿಗೆ ಅರಿವು ಮೂಡಿಸಲು ಉಪಾಯವನ್ನು ಮಾಡಿ ರಸ್ತೆ ಆಕ್ರಮಣವನ್ನು ತಡೆಯಲು ಪಣ ತೊಟ್ಟಿದ್ದಾರೆ.

@publictv.in

Also read: ಧ್ಯಾನ ಮಾಡುವುದರಿಂದ ಎಲ್ಲರಿಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎನ್ನುವುದು ಶೇ. 100 ಸುಳ್ಳು; ಯಾಕೆ ಅಂತ ಈ ಅಧ್ಯಯನ ಹೇಳುತ್ತೆ ನೋಡಿ..

ಹೌದು ಕೈಯಲ್ಲಿ ಜಾಗೃತಿ ಬೋರ್ಡ್ ಹಿಡಿದ ನಗರದ ಇಟ್ಟಮಡು ಜಂಕ್ಷನ್ ಬಳಿಯ ಅಕ್ಕಪಕ್ಕದ ಮನೆಯ ವೃದ್ಧರಾದ ಸುಬ್ರಮಣ್ಯಂ ಹಾಗೂ ಉಷಾ ಶ್ರೀಕಂಠನ್, ಇಬ್ಬರು ವೃದ್ಧರು ಕೈಯಲ್ಲಿ ಒಂದು ಬೋರ್ಡ್ ಹಿಡಿದು, ಫುಟ್ ಪಾತ್ ಮೇಲೆ ಬರೋ ಗಾಡಿ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಕೆಲವರು ಸರಿ ಎಂದು ಹೋದರೆ ಇನ್ನೂ ಕೆಲವರು ಇವರನ್ನು ಛೇಡಿಸಿ ಹೋಗುತ್ತಾರೆ. ಅದರೂ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ರಸ್ತೆ ಬದಿಯ ಫುಟ್ ಪಾತ್ ಮೇಲೆ ನಿಂತು ನಿಯಮ ಪಾಲನೆ ಮಾಡುವಂತೆ ಬೈಕ್ ಸವಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಈ ಕುರಿತು ಮಾತನಾಡಿದ ಅವರು ಇಲ್ಲಿನ ಫುಟ್ ಪಾತ್ ಮೇಲೆ ವಾಹನ ಚಾಲನೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಗಾಬರಿ ಒಳಗಾಗುತ್ತಿದ್ದರು. ಹೀಗಾಗಿ ಸವಾರರಿಗೆ ರೂಲ್ಸ್ ಬ್ರೇಕ್ ಮಾಡಿಬೇಡಿ ಎಂದು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದವೆ. ನಗರದಲ್ಲಿ ಫುಟ್ ಪಾತ್ ಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಎಲ್ಲರೂ ನೋಡಿದ್ದೀವಿ. ಫುಟ್ ಪಾತ್ ಮೇಲೆ ನಡೆಯೋದಕ್ಕಿಂತ ರೋಡಲ್ಲೇ ನಡೆದು ಹೋಗಬಹುದೇನೋ ಅನ್ನುವ ಮಟ್ಟಿಗೆ ಫುಟ್ ಪಾತ್ ಅನ್ನು ದ್ವಿಚಕ್ರ ವಾಹನ ಸವಾರರು ಆಕ್ರಮಿಸಿಕೊಂಡಿರುತ್ತಾರೆ. ಇದನ್ನು ಇಲ್ಲಿಗೆ ಬಿಡಬಾರದು ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನಿಸಿ “ಟೂ ವೀಲರ್ಸ್ ಪ್ಲೀಸ್ ಯೂಸ್ ರೋಡ್ ನೋ ಫುಟ್ ಪಾತ್ “ಅನ್ನೊ ಬೋರ್ಡ್ ಹಿಡಿದುಕೊಂಡು ಗಂಟೆಗಳ ಕಾಲ ನಿಂತು ವಾಹನ ಸವಾರರಿಗೆ ಬುದ್ಧಿಹೇಳಿ ಇದನ್ನು ತಡೆಯಲು ಪಣ ತೊಟ್ಟಿದ್ದೇವೆ. ನಮಗೆ ಅಲ್ಲದಿದರು ನಮ್ಮ ವಯಸ್ಸಿಗೆ ಗೌರವ ನೀಡಿ ನಮ್ಮನ್ನು ಸುರಕ್ಷಿತವಾಗಿ ನಡೆಯಲು ಬಿಟ್ಟು ತಾವು ಸುರಕ್ಷಿತವಾಗಿ ಸವಾರಿ ಮಾಡಿದರೆ ಸಾಕು.

publictv.in

Also read: ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ಎಂಥ ಪರಿಸ್ಥಿತಿ ಬಂದಿದೆ ಅಂದ್ರೆ, ಒಂದು ವಾರಕ್ಕೆ ಒಂದು ಕ್ರೆಡಿಟ್-ನಲ್ಲಿ ಇರುವಷ್ಟು ಪ್ಲಾಸ್ಟಿಕ್ ನಮ್ಮ ದೇಹ ಸೇರುತ್ತಿದೆ ಅಂತೆ!!

ನಮ್ಮವರೇ ಬೇರೆ ದೇಶಕ್ಕೆ ಹೋದರೆ ನಿಯಮ ಪಾಲನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಈ ರೀತಿ ಮಾಡಿಲ್ಲ ಎಂದರೆ ಅದು ನಮ್ಮ ದೇಶಕ್ಕೆ ನಾವು ಮಾಡೋ ಅವಮಾನ. ಇನ್ನೂ ಕೆಲ ದಿನಗಳಲ್ಲೇ ನಮ್ಮ ಈ ಫುಟ್ ಪಾತ್ ಅನ್ನು ವೆಹಿಕಲ್ ಫ್ರೀ ಮಾಡುತ್ತೇವೆ ಎಂದು ವೃದ್ಧರು ಭರವಸೆ ನೀಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದರೆ ಪಾದಚಾರಿಗಳಿಗೆ ಒಳಿತು ಮಾಡಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ. ಅಂತ ವಯಸ್ಸಾದ ವೃದ್ದರು ಈ ಜಾಗೃತಿ ಮೂಡಿಸಲು ರಸ್ತೆ ಇಳಿದಿದ್ದಾರೆ ಅಂದರೆ ತಪ್ಪು ಮಾಡುವ ಸವಾರರು ಸರಿದಾರಿಯಲ್ಲಿ ನಡೆದುಕೊಳ್ಳುವುದು ಮಾನವಿತೆ ಅನಿಸುತ್ತೆ.

ಮಾಹಿತಿ ಕೃಪೆ: Public tv