ಏನೂ ಅರಿಯದ ಎರಡು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿ ರೈಲ್ವೆ ಕಂಬಿಯ ಮೇಲೆ ಎಸೆದು ಹೋದ ಕ್ರೂರರು!!

0
608

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ, ಇಂತಹ ಅತ್ಯಾಚಾರಕ್ಕೆ ಮಹಿಳೆಯರು, ಯುವತಿಯರು ಅಷ್ಟೇ ಅಲ್ಲದೆ ಏನು ಅರಿಯದ ಕಂದಮ್ಮಗಳೇ ಅತ್ಯಾಚಾರಕ್ಕೆ ಬಲಿಯಾಗುತ್ತಿವೆ. ಈ ಕೃತ್ಯಗಳು ಹೆಚ್ಚಾಗಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವುದು ಅಚ್ಚರಿ ಸಂಗತಿಯಾಗಿದೆ. ಮೂರು ದಿನಗಳ ಹಿಂದೆ ವ್ಯಕ್ತಿಯೊಬ್ಬ 2 ವರ್ಷದ ಹೆಣ್ಣು ಮಗುವನ್ನು ಅಪಹರಿಸಿ, ಅತ್ಯಾಚಾರ ಎಸಗಿ ನಂತರ ರೈಲ್ವೆ ಹಳಿಯಲ್ಲಿ ಎಸೆದು ಹೋಗಿದ್ದಾನೆ.


Also read: ತಮ್ಮ ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಸಿ.ಬಿ.ಐ.ಗೆ ನಿರ್ಬಂಧ ಹೇರಿದ್ರಾ ಚಂದ್ರಬಾಬು ನಾಯ್ಡು ಮತ್ತೆ ಮಮತಾ ಬ್ಯಾನರ್ಜಿ?

ಏನಿದು ಅತ್ಯಾಚಾರ?

ಶನಿವಾರ ರಾತ್ರಿ ದೆಹಲಿಯ ಕೊಟ್ವಾಲಿ ಪ್ರದೇಶದಲ್ಲಿ ತನ್ನ ಅಮ್ಮನ ಜೊತೆ ಫುಟ್​ಪಾತ್​ನಲ್ಲಿ ಮಲಗಿದ್ದ ಮಗುವನ್ನು ಮಾದಕ ವ್ಯಸನಿ ಅನಿಲ್​ (24) ಅಪಹರಿಸಿದ್ದಾನೆ. ಈ ವೇಳೆ ತಾಯಿಗೆ ಸುಮಾರು 2.30 ರ ಸಮಯದಲ್ಲಿ ಆ ತಾಯಿಗೆ ಎಚ್ಚರವಾಗಿದೆ. ಮಗು ಇಲ್ಲದ್ದನ್ನು ಕಂಡು ಗಾಬರಿಯಿಂದ 3 ತಾಸುಗಳ ಕಾಲ ಹುಡುಕಿದರೂ ಮಗುಪತ್ತೆಯಾಗದ ಹಿನ್ನೆಲೆಯಲ್ಲಿ ಕೊನೆಗೆ ಪೊಲೀಸರರಿಗೆ ತಿಳಿಸುತ್ತಾರೆ. ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಕೊಟ್ವಾಲಿ ಪೊಲೀಸ್​ ಠಾಣೆಯಲ್ಲಿ ಮಗುವಿನ ಅಪಹರಣ ಪ್ರಕರಣ ದಾಖಲಾಗಿದೆ. ಮಧ್ಯಾಹ್ನದ ನಂತರ ಮಗುವು ಕೊಟ್ವಾಲಿಯಿಂದ ಅಪಹರಣವಾಗಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದೆ ಎಂದು ಪೊಲೀಸರಿಗೆ ವಿಷಯ ತಿಳಿಯುತ್ತದೆ. ಆರೋಪಿಯು ಮಗುವನ್ನು ಅಪಹರಿಸಿ, ಅತ್ಯಾಚಾರ ಎಸಗಿ ರೈಲ್ವೆ ಹಳಿ ಬಳಿ ಬಿಟ್ಟು ಹೋಗಿರುತ್ತಾನೆ. ತದನಂತರ ಪೊಲೀಸ್​ ಸಿಬ್ಬಂದಿ ಮಗುವನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಯ ಮೂಲಕ ಆರೋಪಿಯನ್ನು ಪತ್ತೆಹಚ್ಚಿ, ಭಾನುವಾರ ಬೆಳಗ್ಗೆ ಅನಿಲ್​ನನ್ನು ಬಂಧಿಸಿದ್ದಾರೆ.


Also read: ವಿವಿಧ ಬೇಡಿಕೆಗೆ ರೈತರು ಮಾಡುತ್ತಿರುವ ಹೋರಾಟ ರಾಜಧಾನಿಗೆ ತಲುಪಿದ್ದು; ನೀಚಗೆಟ್ಟ, ನಾಚಿಗೆಟ್ಟ, ವಚನಭ್ರಷ್ಟ ಅವಿವೇಕಿ ಮುಖ್ಯಮಂತ್ರಿ ಎಂದ ಪ್ರತಿಭಟನಾಕಾರರು..

ದೆಹಲಿಯ ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ಭಯಾನಕ ಘಟಣೆ ಬಗ್ಗೆ ಟ್ವೀಟ್ ಮಾಡಿದ್ದು. ದೆಹಲಿಯಲ್ಲಿ 1.5 ವರ್ಷದ ಮಗುವಿನ ಮೇಲೆ ಅತ್ಯಾಚಾರವಾಗಿದೆ ಅವಳ ಸ್ಥಿತಿಯನ್ನು ವಿವರಿಸಲು ಆಗುವುದಿಲ್ಲ ಅಷ್ಟೊಂದು ಕ್ರೂರವಾಗಿ ಅತ್ಯಾಚಾರ ಮಾಡಿದ್ದಾರೆ. ಇಲ್ಲಿಯವರೆಗೆ ದೆಹಲಿಯಲ್ಲಿ ಅತ್ಯಾಚಾರಿಗಳಿಗೆ ಎಷ್ಟೊಂದು ಶಿಕ್ಷೆ ನೀಡಿದರು ಸ್ವಲ್ಪವೂ ಭಯ ವಿಲ್ಲದೆ ಅತ್ಯಾಚಾರ ಮಾಡುತ್ತಿದ್ದಾರೆ. ಇತ್ತಿಚೀಗೆ ದೆಹಲಿ ಪೋಲಿಸ್- ರು ಬಿಡುಗಡೆ ಮಾಡಿದ ಮಕ್ಕಳ ಅಪರಾಧ ಮಾಹಿತಿಯ ಪ್ರಕಾರ, ಪ್ರತಿದಿನವೂ ಸರಾಸರಿ ಇಬ್ಬರು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. 2019 ರ ಅಕ್ಟೋಬರ್ 15 ರವರೆಗೆ 739 ಪ್ರಕರಣಗಳಲ್ಲಿ ಮಕ್ಕಳ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2017 ರಲ್ಲಿ 921 ಪ್ರಕರಣಗಳು ವರದಿಯಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ತನ್ನ 2016 ರ ವರದಿಯಲ್ಲಿ “ಮಕ್ಕಳ ವಿರುದ್ಧದ ಅಪರಾಧವು ಕಳೆದ 3 ವರ್ಷಗಳಲ್ಲಿ 2016 ಕ್ಕಿಂತ (94,172) 2015 ರಲ್ಲಿ 13.6% (1,06,958) ನಷ್ಟು ಹೆಚ್ಚಳವಾಗಿದೆ. ಮಕ್ಕಳಲ್ಲಿ 52.3% ಪ್ರಕರಣಗಳು ದಾಖಲಾಗಿವೆ ಮತ್ತು ನಂತರ POCSO ಅಡಿಯಲ್ಲಿ ವರದಿ ಮಾಡಲಾದ ಪ್ರಕರಣಗಳು 34.4%. ” ಎಂದು ತಿಳಿಸಿದ್ದಾರೆ.

                    ದೆಹಲಿಯ ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್

Also read: ಉದ್ಯೋಗಸ್ಥ ಗರ್ಭಿಣಿ ಮಹಿಳೆಯರಿಗೆ ಇಲ್ಲಿದೆ ಸಿಹಿ ಸುದ್ದಿ; ಹೆರಿಗೆ ರಜೆಯ ವೇತನದ ಬಗ್ಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ..

ಇದಕೆಲ್ಲ ಕಾರಣ:

ದೆಹಲಿ ಪೊಲೀಸರು ಲೈಂಗಿಕ ದುರ್ಬಳಕೆಗೆ ಒಳಗಾದವರಿಗೆ ಸಂವಹನ ನಡೆಸಲು ಹಲವಾರು ತಂತ್ರಗಳನ್ನು ಬಳಸುತ್ತಿದ್ದಾರೆ. ಇದು ಅಮಾಯಕ ಬೀದಿ ಮಕ್ಕಳ ರಕ್ಷಣೆಗಾಗಿ ಹೆಚ್ಚಿನ ತಂತ್ರಗಳನ್ನು ಮಾಡಬೇಕಾಗಿದೆ. ಬೀದಿಯಲ್ಲಿ ಬದುಕುವ ಬಡವರಿಗೆ ಇರಲು ಮನೆ ಇಲ್ಲದ ಕಾರಣ ಬೀದಿಯಲಿ ಮಲಗುತ್ತಾರೆ ಇದರಿಂದ ಮಕ್ಕಳ ಮತ್ತು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.