ಕೃಷಿ ವಿಶ್ವವಿದ್ಯಾಲಯವು ವಿಷಯ ತಜ್ಞರು ಕೃಷಿ ಹವಾಮಾನ ವೀಕ್ಷಕ ಹುದ್ದೆಗಳಿಗೆ ನೇರ ಸಂದರ್ಶನ..

0
117

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕೃಷಿ ವಿಶ್ವವಿದ್ಯಾಲಯವು ವಿಷಯ ತಜ್ಞರು (ಕೃಷಿ ಹವಾಮಾನ ಶಾಸ್ತ್ರ) ಮತ್ತು ಕೃಷಿ ಹವಾಮಾನ ವೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ವೆಬ್‌ಸೈಟ್ http://www.uasd.edu/ ನಲ್ಲಿ ಪ್ರಕಟಣೆ ಹೊರಡಿಸಿದೆ ಆಸಕ್ತರು ಅಧಿಕೃತ ವೆಬ್‌ಸೈಟ್‌-ನಲ್ಲಿ ಮಾಹಿತಿ ನೋಡಿ ಸೆಪ್ಟೆಂಬರ್ 4ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

Also read: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಹುದ್ದೆಗಳನ್ನು ಭರ್ತಿಮಾಡಲು ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ವಿಷಯ ತಜ್ಞರು (ಕೃಷಿ ಹವಾಮಾನ ಶಾಸ್ತ್ರ) ಮತ್ತು ಕೃಷಿ ಹವಾಮಾನ ವೀಕ್ಷಕ

ಸಂಸ್ಥೆ (Organisation): ಕೃಷಿ ವಿಶ್ವವಿದ್ಯಾಲಯ

ವಿದ್ಯಾರ್ಹತೆ (Educational Qualification): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪೋಸ್ಟ್ ಗ್ರಾಜುಯೇಟ್ ಮತ್ತು 10+2 ವಿದ್ಯಾರ್ಹತೆಯನ್ನು ಹೊಂದಿರಬೇಕು.

ಉದ್ಯೋಗ ಸ್ಥಳ (Job Location): ಧಾರವಾಡ (ಕರ್ನಾಟಕ)

ವಯೋಮಿತಿ: ಕೃಷಿ ವಿಶ್ವವಿದ್ಯಾಲಯದ ನೇಮಕಾತಿಯ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ವೇತನದ ವಿವರ: ವಿಷಯ ತಜ್ಞರು (ಕೃಷಿ ಹವಾಮಾನ ಶಾಸ್ತ್ರ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,600/- ರಿಂದ 39,100/-ರೂ ಮತ್ತು ಕೃಷಿ
ಹವಾಮಾನ ವೀಕ್ಷಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 5,200/- ರಿಂದ 20,200/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ

ಸಂದರ್ಶನದ ವಿವರ: ಈ ಹುದ್ದೆಗಳಿಗೆ ಸೇರ ಬಯಸುವ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಧಾರವಾಡ ಕಚೇರಿಯಲ್ಲಿ ಸೆಪ್ಟೆಂಬರ್ 4,2019 ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಕಚೇರಿಯ ವಿಳಾಸ: ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾಲಯ, ಧಾರವಾಡ-05

ಹೆಚ್ಚಿನ ಮಾಹಿತಿಗಾಗಿ: http://www.uasd.edu/ ಕ್ಲಿಕ್ ಮಾಡಿ.