ಕರ್ನಾಟಕದ ಮೊದಲ ನ್ಯೂಸ್ ವಾಹಿನಿ ಉದಯ ನ್ಯೂಸ್ ಇನ್ನು ನೆನಪು ಮಾತ್ರ..!

0
1082

ಸನ್‌ ಟಿವಿ ನೆಟ್‌ವರ್ಕ್‌ ಸಂಸ್ಥೆಯು ಕನ್ನಡದ ಅತ್ಯಂತ ಹಳೆಯ ಸುದ್ದಿ ವಾಹಿನಿ ‘ಉದಯ ನ್ಯೂಸ್’ ಮುಚ್ಚಲು ನಿರ್ಧರಿಸಿದೆ. ಅಕ್ಟೋಬರ್‌ 24 ರಿಂದ ಉದಯ ನ್ಯೂಸ್‌ ಅನ್ನು ಮುಚ್ಚಲಾಗುವುದು ಎಂದು ಸನ್‌ ಟಿವಿ ಉಪಾಧ್ಯಕ್ಷ ಎಸ್.ಡಿ. ಜವಾಹರ್‌ ಮೈಕಲ್‌ ಪ್ರಕಟಣೆ ಹೊರಡಿಸಿದ್ದಾರೆ. ಈ ಸಂಬಂಧ ಕಾರ್ಮಿಕ ಇಲಾಖೆಗೆ ಪತ್ರ ಬರೆಯಲಾಗಿದೆ.

ಅಕ್ಟೋಬರ್‌ 24 ರಿಂದ ಉದಯ ನ್ಯೂಸ್‌ ಅನ್ನು ಮುಚ್ಚಲಾಗುವುದು ಎಂದು ಸನ್‌ ಟಿವಿ ಉಪಾಧ್ಯಕ್ಷ ಎಸ್.ಡಿ. ಜವಾಹರ್‌ ಮೈಕಲ್‌ ಪ್ರಕಟಣೆ ಹೊರಡಿಸಿದ್ದಾರೆ. ಈ ಸಂಬಂಧ ಕಾರ್ಮಿಕ ಇಲಾಖೆಗೆ ಪತ್ರ ಬರೆಯಲಾಗಿದೆ.

ಕಳೆದ 19 ವರ್ಷಗಳಿಂದ ಪ್ರಸಾರವಾಗುತ್ತಿರುವ ಉದಯ ಸುದ್ದಿವಾಹಿನಿಯಲ್ಲಿ ಸದ್ಯ 73 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಉದಯ ನ್ಯೂಸ್ ಬಂದ್ ಆಗುತ್ತಿದ್ದಂತೆ ಎಲ್ಲರೂ ಕೆಲಸ ಕಳೆದುಕೊಳ್ಳಲಿದ್ದಾರೆ.

ಸುದ್ದಿ ವಾಹಿನಿಯ ವೀಕ್ಷಕರ ಸಂಖ್ಯೆ ಕಡಿಮೆ ಕಡಿಮೆಯಾಗುತ್ತಿದ್ದು, ಈ ಸುದ್ದಿ ವಾಹಿನಿ ನಿರೀಕ್ಷಿತ ಮಟ್ಟದಲ್ಲಿ ಆದಾಯ ಗಳಿಸುವಲ್ಲಿ ವಿಫಲವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೂ ಕಳೆದ ಕೆಲವು ವರ್ಷಗಳಿಂದ ನಷ್ಟ ಅನುಭವಿಸುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ, ಸನ್ ನೆಟ್ವರ್ಕ್ ಒಡೆತನದ 33ಕ್ಕೂ ಅಧಿಕ ಟಿವಿ ಚಾನೆಲ್ ಗಳು ಹಾಗೂ 45ಕ್ಕೂ ಅಧಿಕ ಎಫ್ ಎಂ ಚಾನೆಲ್, ಸೂರ್ಯನ್ ಎಫ್ ಎಂ ಹಾಗೂ ರೆಡ್ ಎಫ್ ಎಂ ಎಲ್ಲವೂ ಪ್ರಸಾರ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿತ್ತು. ಈಗ ಉದಯ ನ್ಯೂಸ್ ವಾಹಿನಿ ಸಮಯವಾಗಿದೆ.