ಸರ್ಕಾರ ಮಠಗಳನ್ನು ಸ್ವಾಧೀನಗೊಳಿಸಿಕೊಳ್ಳಲು ಮುಂದಾದರೆ ಮಠ ತೊರೆಯುತ್ತೇನೆ, ನಾನು ಸರ್ಕಾರೀ ನೌಕರನಲ್ಲ ಎಂದ ಪೇಜಾವರ ಶ್ರೀಗಳು…!!

0
364

ಉಡುಪಿಯ ಪೇಜಾವರ ಶ್ರೀಗಳು ಯಾವಾಗಲೂ ಸಮಾಜದ ಒಳಿತಿಗಾಗಿ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಾರೆ. ವಯಸ್ಸು 86 ತುಂಬಿದ್ದರು ಇನ್ನು ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಹರೆಯದ ಉತ್ಸಾಹ. ಇಂತಹ ಸಮಾಜಮುಖಿ ಕೆಲಸ ಮಾಡುವ ಮಠವನ್ನು ಸರ್ಕಾರ ಸ್ವಾಧೀನಗೊಳಿಸಿಕೊಳ್ಳಲು ಮುಂದಾಗಿರುವುದು ಶ್ರೀಗಳ ಅಸಮಾಧಾನಕ್ಕೆ ಗುರಿಯಾಗಿದ್ದಾರೆ.

ರಾಜ್ಯ ಸರ್ಕಾರ, ಮಠಗಳನ್ನು ಮತ್ತು ದೇವಾಲಯಗಳನ್ನು ಸ್ವಾಧೀನಗೊಳಿಸಿಕೊಳ್ಳಲು ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಮತ್ತು ಸಲಹೆಗಳನ್ನು ನೀಡಿ ಎಂದು ಧಾರ್ಮಿಕ ದತ್ತಿ ಇಲಾಖೆ 15 ದಿನಗಳ ಕಾಲಾವಕಾಶ ಕೊಟ್ಟು, ಜನವರಿ 29 ರಂದು ಸಾರ್ವಜನಿಕ ಪ್ರಕಟಣೆ ಮಾಡಿದ್ದು, ಈ ಪ್ರಕಟಣೆ ಕಾಡ್ಗಿಚ್ಚಿನಂತೆ ಹರಡಿ, ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ರಾಜ್ಯ ಸರ್ಕಾರ ಇಂತಹ ವಿವಾದಾತ್ಮಹ ಆದೇಶಗಳನ್ನು ಮತ್ತು ಪ್ರಕಟಣೆಗಳನ್ನು ಹೊರಡಿಸಬಾರದು, ಸಾರ್ವಜನಿಕರ ಬಗ್ಗೆ ಆಲೋಚಿಸಬೇಕು, ಇಲ್ಲವಾದರೆ ಮುಂದಾಗುವ ಪರಿಣಾಮಕ್ಕೆ ಅವರೇ ಹೊಣೆಗಾರರು. ನಮ್ಮ ಸರ್ಕಾರ ಎಲ್ಲರನ್ನು ಸಮನಾಗಿ ನೋಡುತ್ತದೆ ಎನ್ನುವ ಸಿಎಂ ಬಹುಸಂಖ್ಯಾತ, ಅಲ್ಪಸಂಖ್ಯಾತರನ್ನು ಏಕೆ ಬೇರೆ-ಬೇರೆ ನೋಡುತ್ತಾರೆ ಎಂದು ಶ್ರೀಗಳು ಪ್ರಶ್ನಿಸಿದರು.

ಒಂದು ವೇಳೆ ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರ ಸ್ವಾಧೀನಗೊಳಿಸಿಕೊಳ್ಳಲು ಮುಂದಾಗಿದ್ದೆ ಆದರೆ ನಾನು ಮಠದಲ್ಲಿ ಉಳಿಯುವುದಿಲ್ಲ, ಮಠದಿಂದ ಹೊರಬರುತ್ತೇನೆ, ಮಠಗಳ ಮತ್ತು ಜನರ ಧಾರ್ಮಿಕ ವಿಷಯಗಳಲ್ಲಿ ಸರ್ಕಾರ ರಾಜಕೀಯ ಮಾಡುವುದು ಬೇಡ, ನನಗೆ ಸರಕಾರಿ ನೌಕರಣಾಗುವುದು ಇಷ್ಟವಿಲ್ಲ ಎಂದು ಗುಡುಗಿದರು.

ಇಷ್ಟೆಲ್ಲಾ ಚರ್ಚೆಯಾದ ನಂತರ ಸರ್ಕಾರದ ಕಡೆಯಿಂದ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ ಅಂತಹ ಯಾವುದೇ ಪ್ರಸ್ತಾವನೆಯೇ ಇಲ್ಲ, ನಾವು ನ್ಯಾಯಾಲಯದ ನಿರ್ದೇಶನದಂತೆ ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಮತ್ತು ಸಲಹೆಗಳನ್ನು ಕೇಳಿದ್ದೇವೆ ಅಷ್ಟೇ, ಅದನ್ನೇ ಬಿಜೆಪಿಯವರು ತಿರುಚಿ ಜನರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ಹೇಳಿದರು.