ಉಡುಪಿಯ ನಿವೃತ್ತ ಶಿಕ್ಷಕ ಗಣಪತಿಗೆ ಮೋದಿ ಕೊಟ್ರು ಸಿದ್ದರಾಮಯ್ಯ ಕೊಡಲಿಲ್ಲ ರಸ್ತೆ ಭಾಗ್ಯ…!

0
785

ಹೌದು ನಮ್ಮ ರಾಜ್ಯ ಸರ್ಕಾರ ಏನು ಮಾಡುತಿದ್ದೆ ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ. ಯಾಕೆ ಅಂದ್ರೆ ಒಬ್ಬ 85 ವರ್ಷ ವಯಸ್ಸಿನ ಅಜ್ಜ ಬರೆದ ಪತ್ರಕ್ಕೆ ಮೋದಿ ಉತ್ತರಿಸಿದ್ದಾರೆ. ಆದ್ರೆ ಇದಕ್ಕೆ ನಮ್ಮ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರೆಯೆ ನೀಡಿಲ್ಲ. ಯಾವ ವಿಚಾರ ಏನ್ ಸುದ್ದಿ ಅನ್ನೋದು ಇಲ್ಲಿದೆ ನೋಡಿ.

Udupi Retired teacher Ganapathi-2
source:publictv

ಉಡುಪಿಯ ನಿವೃತ್ತ ಶಿಕ್ಷಕರೊಬ್ಬರು ತಮ್ಮ ಊರಿಗೆ ಒಂದು ರಸ್ತೆ ಬೇಕು ಅಂತ ಕಳೆದ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ರಾಜ್ಯ ಸರ್ಕಾರದ ಮೊರೆ ಹೋದ್ರೂ ಯಾವುದೇ ಪ್ರಯೋಜನವಾಗಿಲ್ಲ ಕೊನೆಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ನಿವೃತ್ತ ಶಿಕ್ಷಕರಾಗಿರೋ ಗಣಪತಿ ರಸ್ತೆಗಾಗಿ ಹೋರಾಡುತ್ತಿರುವವರು. ಉಡುಪಿಯ ಹೆಬ್ರಿ ಸಮೀಪದ ಕಳ್ತೂರಿನವರಾದ ಇವರಿಗೆ 85 ವರ್ಷ ವಯಸ್ಸು. ಊರುಗೋಲು ಹಿಡ್ಕೊಂಡು ತಿರುಗೋ ಇವರು ನಮಗೆ ಏನಾದ್ರೂ ಸೌಲಭ್ಯ ಕೊಡಿ ಅಂತಿಲ್ಲ. ಬದಲಾಗಿ ನಮ್ಮೂರಿಗೊಂದು ರಸ್ತೆ ಮಾಡಿಕೊಡಿ ಅಂತಿದ್ದಾರೆ. ಇದಕ್ಕಾಗಿ ಈ ಜೀವ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾ.ಪಂ ನಿಂದ ಹಿಡಿದು ರಾಜ್ಯ ಸರ್ಕಾರದವರೆಗೂ ಪತ್ರ ಬರೆದು ಬರೆದು ಸುಸ್ತಾದ್ರು. ಆದ್ರೂ ಕೆಲಸ ಆಗದಿದ್ದಾಗ ಇವರು ಮೋದಿಗೆ ಪತ್ರ ಬರೆದಿದ್ದರು.

Udupi Retired teacher Ganapathi-1
source:publictv

ಪ್ರಧಾನಿ ಕಚೇರಿಗೆ ಪತ್ರ ಬರೆದು 6 ತಿಂಗಳೊಳಗೆ ಅಲ್ಲಿಂದ ರಿಪ್ಲೈ ಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಪ್ರಧಾನಿ ಹೇಳಿ 6 ತಿಂಗಳು ಕಳೆದಿದೆ. ಆದ್ರೆ ರಾಜ್ಯ ಸರ್ಕಾರ ಅದರ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೆ ಆ ಪತ್ರಕ್ಕೆ ಯಾವುದೇ ಉತ್ತರವನ್ನು ನೀಡಿಲ್ಲ ಮತ್ತು ಆ ಊರಿಗೆ ರಸ್ತೆಯನ್ನು ಮಾಡಿಕೊಟ್ಟಿಲ್ಲ.

Udupi Retired teacher Ganapathi-3
source:publictv

ನೋಡಿ ಇಂತಹ ವಯಸ್ಸಿನಲ್ಲಿಯೂ ತಮ್ಮ ಊರಿಗೆ ಒಂದು ರಸ್ತೆ ಬೇಕು ಅಂತ ಈ ಅಜ್ಜ ಹೋರಾಡುತಿದ್ದರೆ ಆದ್ರೆ ನಮ್ಮ ರಾಜ್ಯಸರ್ಕಾರಕ್ಕೆ ಯಾವುದೇ ಕಿವಿ ಕಣ್ಣು ಏನು ಇಲ್ಲ ಅನ್ಸುತ್ತೆ ಯಾಕೆ ಅಂದ್ರೆ ಈ ವಿಚಾರದ ಬಗ್ಗೆ ಯಾರು ತೆಲೆಕೆಡಿಸಿಕೊಂಡಿಲ್ಲ.
ಮತ್ತು ಇಂತಹ ವಿಚಾರಗಳನ್ನು ಬಿಟ್ಟು ರಾಜ್ಯ ಸರ್ಕಾರ ಧರ್ಮ ಜಾತಿ ಅನ್ನೋ ವಿಚಾರದಲ್ಲಿ ಮುಳುಗಿದೆ.

Udupi Retired teacher Ganapathi-4