ರಾಜ್ಯ ಸರ್ಕಾರದ ಉದ್ಯೋಗಿನಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಲಕ್ಷಾಂತರ ರುಪಾಯಿ ಸಾಲ ಸಿಗುತ್ತಿದೆ, ಅದನ್ನು ಹೇಗೆ ಪಡೆದುಕೊಳ್ಳಬೇಕು ಅಂತ ಮುಂದೆ ಓದಿ…

1
2223

ರಾಜ್ಯ ಸರ್ಕಾರವು ತನ್ನ 5 ವರ್ಷದ ಕಾರ್ಯಸಾಧನೆಯಲ್ಲಿ ಕೃಷಿ ಕ್ಷೆತ್ರದಲ್ಲಿ, ಕೈಗಾರಿಕ್ಕೆ ಕ್ಷೇತ್ರದಲ್ಲಿ, ಆರ್ಥಿಕ ಅಭಿವೃದ್ಧಿಗೋಸ್ಕರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವುದು ತಮ್ಮಗೆಲ್ಲ ತಿಳಿದಿರುವ ವಿಷಯವಾಗಿದೆ. ಸಾಮಾನ್ಯ ಜನರಿಗೆ ವಾರ್ಷಿಕ ಆದಾಯದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಯೊಂದಿರುವಂತಹ ವ್ಯಕ್ತಿಗಳಿಗೆ ರಾಜ್ಯ ಸರ್ಕಾರವು “ಅನ್ಯ ಭಾಗ್ಯ ಯೋಜನೆ” ನೀಡಿರುವುದರ ಜೊತೆಗೆ ಬಡಕುಟುಂಬದವರಿಗೆ “ಶಾದಿ ಭಾಗ್ಯ” ಕೈತರಿಗಾಗಿ “ಹನಿನೀರಾವರಿ ಯೋಜನೆ” ಮತ್ತು ಸುವರ್ಣ ಭೂಮಿ ಯೋಜನೆ, ಕ್ಷಿರಭಗ್ಯ ಯೋಜನೆ,ಯಶಶ್ವಿನಿ ಯೋಜನೇ, ಸಂಧ್ಯಾ ಸುರಕ್ಷತಾ ಯೋಜನೆ,ಭಾಗ್ಯಲಕ್ಷ್ಮಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವಿಕಲ ಪಿಂಚಣಿ ಯೋಜನೆ,ಈ ಎಲ್ಲ ಯೋಜನೆಗಳಲ್ಲಿ ಬಹು ಮುಖ್ಯವಾದ ಒಂದು ಯೋಜನೆಯೆಂದರೆ ರಾಜ್ಯ ಸರ್ಕಾರ “ಉದ್ಯೋಗಿನಿ” ಯೋಜನೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿದೆ.

ಮಹಿಳೆಯರ ಸಬಲೀಕರಣ ಹೋಗಲಾಡಿಸುವುದಕೊಸ್ಕರ ಮತ್ತು ಮಹಿಳೆಯರಿಗೆ ಆರ್ಥಿಕ ಅಭಿವೃದಿಗೆ ರಾಜ್ಯ ಸರ್ಕಾರವು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಉದ್ಯೋಗಿನಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟ ಸರ್ಕಾರದ ಪ್ರಮುಖ ನವೀನ ಯೋಜನೆಗಳಲ್ಲಿ ಇದು ಒಂದು. ಮಹಿಳೆಯರಿಗಾಗಿ ಪ್ರತ್ಯೇಕವಾದ ಸ್ಕಿಮ್ ಮತ್ತು ವಿವಿಧ ಸಾಲ ಸೌಲಭ್ಯ ಯೋಜನೆ ಇದೆ.

ಈ ಯೋಜನೆಯ ಮುಖ್ಯ ಉದ್ದೇಶ:

ಮಹಿಳೆಯರ ಸಬಲೀಕರಣ ಹೋಗಲಾಡಿಸುವುದಕ್ಕೆ, ರಾಜ್ಯ ಸರ್ಕಾರ ಉದ್ಯೋಗಿನಿ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಧೆಗಳ ಮೂಲಕ ಸಾಲಗಳನ್ನು ಒದಗಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಕರಿಸುತ್ತದೆ. ಇದು ವ್ಯಾಪಾರ ಚಾಟುವಟಿಕೆಗಳನ್ನು ಸೂಕ್ಷ್ಮ ಉದ್ಯಮವನ್ನು ಕೈಗೊಳ್ಳಲು ಸಬ್ಸಿಡಿಯನ್ನು ಸಹ ಒದಗಿಸುತದ್ದೆ. “ಉದ್ಯೋಗಿನಿ” ಯೋಜನೆಯು ಮಹಿಳೆಯರಿಗೆ ವಿಶೇಷವಾಗಿ ವ್ಯಾಪಾರ ಮಾಡಲು ಮತ್ತು ಸೇವಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಉದ್ಯೋಗದ ಮೂಲಕ ಸ್ವಯಂ ಅವಲಂಬನೆ ಪಡೆಯುವುದರಲ್ಲಿ ನೆರವಾಗುತ್ತದೆ.ಸಾಲವನ್ನು ಪಡೆದ ಮಹಿಳೆಯರಿಗೆ ಕಡಿಮೆ ಬಂಡವಾಳದಲ್ಲಿ ಪ್ಯಾಪಾರಿಗೆ ನೆರವಾಗಲೆಂದು ಇದರ ಉದ್ದೇಶವಾಗಿದೆ, ಮಹಿಳೆಯರು ಸಾಲ ಸೌಲಭ್ಯವನ್ನು ಪಡೆದು ಪ್ಯಾಪಾರಗಳನ್ನು ಆರಂಭಿಸಿದ ನಂತರ ಅವರಿಗೆ ರಾಜ್ಯದ ಮಹಿಳ ಅಭಿವೃಧಿ ನಿಗಮವು 90.ಸಾವಿರ ರೂಗಳನ್ನೂ ಸಪ್ಸಿಡಿ ರೂಪದಲ್ಲಿ ಬೀಡಲಾಗುತ್ತದೆ. ಕಡಮೆ ಬಂಡವಾಳದಲ್ಲಿ ನಡೆಸಬಹುದಾದ 10 ಬಿಸಿನೆಸ್ ಐಡಿಯಾ

ಯಾವ ಬ್ಯಾಂಕ್-ಗಳಲ್ಲಿ ಸಾಲ ಸಿಗುತ್ತೆ??

ವಾಣಿಜ್ಯ ಬ್ಯಾಂಕುಗಳು,ಜಿಲ್ಲೆಯ ಸಹಕಾರ ಬ್ಯಾಂಕುಗಳು ಮತ್ತು R.R.B.ಹಣಕಾಸು ಸಂಸ್ಧೆಗಳ ಮೂಲಕ ಸಾಲಗಳನ್ನು ಹೋದಗಿಸಲಾಗುತ್ತದೆ.ಮಹಿಳೆಯರು ವ್ಯಾಪಾರ ನಡೆಸಲು ಖಾಸಗಿ ಕಂಪನಿಗಳಿಗೆ ಮೊರೆಹೋಗುತ್ತಿದ್ದರು ಖಾಸಗಿ ಸಂಸ್ಧೆಗಳಲ್ಲಿ ಅಧಿಕ ಬಡ್ದಿದರವನ್ನು ವಿಧಿಸುತ್ತಿದ್ದರು.ಕೇಂದ್ರ ಸರ್ಕಾರ ಮಹಿಳ ಉದ್ಯಮಿಗಳನ್ನು ಸಹಕರಿಸಲು ಈ ಯೋಜನೆಯು ಬಹಳ ಪ್ರಯೋಜನಕಾರಿಯಾಗಿದೆ.

ಯಾರಿಗೆ ಎಷ್ಟು ಸಾಲ ಸಿಗುತ್ತೆ??

ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಆರಂಭಿಸಲ್ಪಟ್ಟ “ಉದ್ಯೋಗಿನಿ” ಯೋಜನೆಯಲ್ಲಿ ಸರ್ಕಾರ ಮಹತ್ತರ ಬದಲಾವಣೆ ತಂದಿದ್ದು ರೂ.3 ಲಕ್ಷಸಾಲ ಸೌಲಭ್ಯ ಒದಗಿಸಲಿದ್ದು,ರೂ.90,000 ಸಬ್ಸಿಡಿ ನೀಡಲಾಗುವುದು. ಮಹಿಳೆಯರನ್ನು ಆರ್ಥಿಕ ಮಟ್ಟದಲ್ಲಿ ಉದ್ಯೋಗಶೀಲರನಾಗಿ ಮಾಡಲು ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಮಾಡಲಾಗಿದು, ವಾರ್ಷಿಕರೂ 1.5 ಲಕ್ಷ ಆದಾಯ ಹೊಂದಿರುವ ಮಹಿಳೆಯರು ಮತ್ತು 55 ವರ್ಷದೊಳಗಿನ ಎಲ್ಲವರ್ಗದ ಮಹಿಳೆಯರಿಗೆ ಸಾಲ ನೀಡಲು ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.

ಯಾವ ಉದ್ಯಮಗಳಿಗೆ ಸಾಲ ಸಿಗುತ್ತೆ??

ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಅಗರಬತ್ತಿ, ಕಾಫಿ ಟೀ ಅಂಗಡಿ, ಟೈಲಾರಿಂಗ್ ಅಂಗಡಿ, STD ಬೂತ್, ಬ್ಯೂಟಿಪಾರ್ಲಾರ್, ಅಗರಬತ್ತಿ, ಕ್ಲಿನಿಕ್, ಜಿಮ್, ಮತ್ತು ಸಿಹಿ ಅಂಗಡಿ, ಹಿಟ್ಟಿನ ಗಿರಣಿ, ಪೋಟೋಸ್ಟುಡಿಯೊ, ಕಂಡಿಮೆಂಟ್ಸ್, ಚಪಲಿ, ಮಾರಾಟಮಳೆಗೆ ಸೇರಿದಂತೆ 88 ಕ್ಕೂ ಹೆಚ್ಚು ಸಣ್ಣ ಉದ್ಯಮಿ ಮಹಿಳೆಯರಿಗೆ ಸಾಲ ಸೌಲಭ್ಯ ಸಿಗಲಿದೆ.

ಸಾಲ ಪಡೆಯುವುದು ಹೇಗೆ?

ಎಲ್ಲಾ ಜಿಲ್ಲೆಯಲ್ಲಿರುವ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಯೋಜನಕಾರ್ಯಗತವಾಗಲಿದೆ.ತಾಲೂಕು, ಜಿಲ್ಲಾಕೇಂದ್ರದ ಮಹಿಳ ಮತ್ತು ಮಕ್ಕಳ ಇಲಾಖೆ ನಿಗಮದ ಮೂಲಕ ನಿರೀಕ್ಷಕರು ಅರ್ಜಿಗಳನ್ನು ಸ್ವಿಕರಿಸಲಾಗಿದೆ. ಇದರಲ್ಲಿ 90,000  ರೂ.ಗಳನ್ನು ರಾಜ್ಯ ಮಹಿಳ ಅಭಿವೃದ್ಧಿ ನಿಗಮ ಭರಿಸಿದೆ.ಈ ಹಿಂದೆ ಯೋಜನಾ ಫಲಾನುಭವಿಗಳ ವಯೋಮಿತಿಯನ್ನು 45ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಈಗ 55 ವರ್ಷಗಳಿಗೆ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಜನರು ವಾರ್ಷಿಕ ಆದಾಯದ ಮಿತಿಯನ್ನು 40 ಸಾವಿರದಿಂದ ರೂ.1.5 ಲಕ್ಷಗಳಿಗೆ ಏರಿಸಲಾಗಿದೆ.ಕಳೆದ 40 ವರ್ಷಗಳಿಂದ ಉದ್ಯೋಗಿನಿ ನಿಯಮಗಳು ಬದಲಾಗಿರಲಿಲ್ಲ.