ಈ ಹೊಸ ನೋಟನ್ನು ನೋಡಿ ಇದನ್ನು ನಕಲು ಮಾಡಲು ಸಾಧ್ಯವೇ ಇಲ್ವಂತೆ….!!

0
660

ನೋಟ.. ಖೋಟಾ ನೋಟ.. ಎಲ್ಲರೂ ಕೇಳಿ ನಮ್ಮ ಮಾರುಕಟ್ಟೆಗೆ ಬಂದಿವೆಯಂತೆ ಖೋಟಾ ನೋಟ.. ನೀವು ನೋಟ ಪಡೆಯುವಾಗ ಒಮ್ಮೆ ಸರಿಯಾಗಿ ಪರಿಶಿಲಿಸಿ ಇಲ್ಲದೆ ಇದ್ರೆ ನೀವು ಸಹ ನನ್ನ ಹಾಗೇ ಮೋಸ ಹೋಗ್ತೀರಿ ಎಂದು ಸುರೇಶ್ ತನ್ನ ಸ್ನೇಹಿತರಿಗೆ ತಾನು ಮೋಸ ಹೋದ ಬಗ್ಗೆ ಎಳೆ ಎಳೆಯಾಗಿ ತಿಳಿಸುತ್ತಾನೆ.

source: financialexpress.com

ಅಲ್ಲಿದ್ದ ಹಲವು ಮಂದಿಯ ಮುಖದಲ್ಲಿ ಭಯ.. ತಾವು ಹೋಗಿ ತಮ್ಮ ಮನೆಯ ಡಬ್ಬಿಯಲ್ಲಿ ಗಾದೆಯ ಕೆಳಗೆ ಇಟ್ಟ ನೋಟಗಳನ್ನು ಒಮ್ಮೆ ಚೆಕ್ ಮಾಡಿಕೊಂಡು, ಅಬ್ಬಾ ನಮ್ಮ ಬಳಿ ಅಸಲಿ ನೋಟಗಳಿವೆ. ನಾವಂತು ಬಚಾವ್ ಎಂದು ಎದೆಯನ್ನು ಹಿಡಿದುಕೊಂಡು ಮತ್ತೆ ಊರಿನ ಪಂಚಾಯತ್ ಕಟ್ಟೆಯತ್ತ ಬರಲು, ಮತ್ತೇ ಆ ಕಟ್ಟೆಯಲ್ಲಿ ಖೋಟಾ ನೋಟ.. ಪದ ಕಿವಿಗಳಿಗೆ ಬೀಳುತ್ತದೆ. ಇದೇನಪ್ಪ ಮತ್ತೊಂದು ಬಂತಾ ಎಂದು ಗೆಳೆಯರ ಪಕ್ಕದಲ್ಲಿ ಹೋಗಿ ಕೂಡಲು, ಗೆಳೆಯ ರಾಘು ತಾನು ಇತ್ತೀಚಿಗೆ ಪತ್ರಿಕೆಯಲ್ಲಿ ಓದಿದ ಸುದ್ದಿಯನ್ನು ತಿಳಿಸುತ್ತಾನೆ. ಅಲ್ಲದೆ ಇಂಗ್ಲೆಂಡ್‍ನಲ್ಲಿ ತಯಾರದ ಹೊಸ ನೋಟಿನ ವಿವರಣೆ ನೀಡುತ್ತಾ ಇದನ್ನು ಖೋಟಾ ಮಾಡಲು ಸಾಧ್ಯನೇ ಇಲ್ಲ ಎಂದು ಹೇಳುತ್ತಾನೆ.

ಸ್ನೇಹಿತರೆ ಬ್ರಿಟನ್‍ನಲ್ಲಿ ಯಾರಿಗೂ ನಕಲು ಮಾಡಲು ಆಗದ ನೋಟನ್ನು ತಯಾರು ಮಾಡಿದ್ದಾರೆ. ಇದರ ವೇಶಿಷ್ಠಿಗಳು ಇಂತಿವೆ.

– ನೋಟಿನ ಮೇಲೆ ಖ್ಯಾತ ಕಾದಂಬರಿ ಕಾರ್ತಿ ಜೇನ್ ಅಸ್ಟಿನ್ ಚಿತ್ರವನ್ನು ಮುದ್ರಿಸಲಾಗಿದೆ.
– 10 ಹಾಗೂ 5 ಪೌಂಡ್ ಮೌಲ್ಯದ ಹೋಸ ನೋಟ್‍ನ್ನು ಹೊರ ತಂದಿದೆ.
– ಪಾಲಿಮರ್‍ನಿಂದ ಮಾಡಿದ ವಿಶೇಷ ನೋಟ ಇದಾಗಿದೆ.
– ಇದು ಪೇಪರ್‍ಗಿಂತಲೂ 2.5 ಪಟ್ಟು ಹೆಚ್ಚು ಬಾಳಿಕೆ
– ಎಡಬದಿಯ ಮೇಲ್ಬಾಗದಲ್ಲಿ ದೃಷ್ಠಿ ಹೀನರಿಗೆ ವಿಶೇಷ ಸ್ಪರ್ಷ
– ಇನ್ನು ನೋಟನ್ನು ಓರೆ ಹಿಡಿದು ನೋಡಿದಲ್ಲಿ ಪೌಂಡ್ಸ್ ಎಂದು ಗೋಚರಿಸುತ್ತದೆ
– 2ನೇ ರಾಣಿ ಎಲಿಜಬೆತ್ ಪಾರದರ್ಶಕ ಭಾವಚಿತ್ರ
– ಈ ಚಿತ್ರ ಮುಂಗಾದಲ್ಲಿ ಬಂಗಾರ, ಹಿಂಬಾಗದಲ್ಲಿ ಬೆಳ್ಳಿ ಲೇಪಿತವಾಗಿದೆ.
– ಇನ್ನೊಂದು ಈ ನೋಟಿನ ವಿಶೇಷತೆ ಅಂದ್ರೆ ಈ ನೋಟನ್ನು ಓರೆಯಾಗಿ ನೋಡಿದ್ರೆ ಇದರಲ್ಲಿನ ಹಕ್ಕಿಯ ಗರಿ ಬದಲಾಗುತ್ತದೆ.

ಅಬ್ಬಾ ರಾಘು ಹೀಗೆಲ್ಲಾ ಇದೇ ಏನಪ್ಪ ನೆಕ್ಸಟ್ ಟೈಮ್ ಮೋದಿ ಹೊಸ ನೋಟ ಮಾಡಿದ್ರೆ, ಈ ಎಲ್ಲ ಅಂಶಗಳನ್ನು ಬಳಸಿಕೊಂಡ್ರೆ ಒಳಿತು.
ಲೇ ರಾಜೇಶ್ ಸುಮ್ಮನೆ ಇರೋ, ಒಂದು ಬಾರಿ ನೋಟ ಬ್ಯಾನ್ ಮಾಡಿ ಶಾಕ್ ಕೊಟ್ಟಿರುವ ಮೋದಿ ಮತ್ತೆ ಅಂತಹದ್ದೆ ಕೆಲಸಕ್ಕೆ ಕೈ ಹಾಕಿದ್ರೆ ನನ್ನ ಕಥೆ ಅಷ್ಟೆ..