ಕಸದಿಂದ ರಸ….! ತಯಾರಿಸುವುದು ಹೇಗೆ ..?

0
826

ಮನೆಯಲ್ಲಿರುವ ಹಳೆಯ ಸಾಮಾಗ್ರಿಗಳಿಂದ ಮನೆ ಕೆಟ್ಟದಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಕೆಲಸ ಕೂಡ ಹೆಚ್ಚು. ಆದರೆ ಈ ವಸ್ತುಗಳು ನಿಮ್ಮೊಂದಿಗೆ ಒಂದಿಲ್ಲೊಂದು ನೆನಪುಗಳನ್ನು ಬಂಧಿಸಿದ್ದರೆ ಅವುಗಳನ್ನು ಹೊರಗೆ ಎಸೆಯಲು ಮನಸ್ಸು ಬರುವುದಿಲ್ಲ, ಹಾಗಿದ್ದರೆ ಅವುಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಮನೆಯ ಅಲಂಕಾರಕ್ಕಾಗಿ ಬಳಸಬಹುದು.

*ನೀವು ಉಪಯೋಗಿಸುವುದಕ್ಕೆ ಬಳಸಲು ಬಾರದೆ ಇರುವವು ಎಂದೆನಿಸಿರುವ ಹಲವಾರು ವಸ್ತುಗಳನ್ನು ಬಳಸಿಕೊಂಡು ಮನೆಯ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳಬಹುದುದಾಗಿದೆ. ಇವುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೊಣ

*ಹಳೆಯ ಬಾಟಲಿಗಳು: ನಿಮ್ಮ ಸ್ಟೋರ್ ರೂಮ್ ನಲ್ಲಿ ಹಳೆಯ ಬಾಟಲಿಗಳು ಶೇಖರಣೆ ಗೊಂಡಿವೆ ಎಂದಾದಲ್ಲಿ ಅವುಗಳಿಂದ ಅದ್ಬುತವಾದುದನ್ನುನೀವು ರಚಿಸಿಕೊಳ್ಳಬಹುದು. ಹಳೆಯ ಹಲವು ತರಹದ ಬಾಟಲಿಗಳನ್ನು ಸಂಗ್ರಹಿಸಿಕೊಂಡು ಸುಂದರವಾಗಿ ಪೇಂಟ್ ಮಾಡಿ ಅಲಂಕಾರ ವಸ್ತುಗಳು ಅಥವಾ ಕ್ಯಾಂಡಲ್ ಹೋಲ್ಡರ್ ಅನ್ನಾಗಿ ರೂಪಿಸಬಹುದಾಗಿದೆ.

*ಹಳೆಯ ಸಿಡಿಗಳು: ಹಳೆಯ ಸಿಡಿಳಿಂದ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಅವುಗಳನ್ನು ಸಮಗ್ರಹಿಸಿಕೊಳ್ಳಿ. ಕೋಸ್ಟರ್’ಗಳು ಆಕರ್ಷಕ ಗಾಜಿನ ಫ್ರೇಮ್’ಗಳು ಮೊದಲಾದವುಗಳನ್ನು ತಯಾರಿಸಿಕೊಳ್ಳ ಬಹುದು.

*ಹಳೆಯ ಬೇಕಿಂಗ್ ಶೀಟ್ಸ್: ಹೊಸ ಬೇಕಿಂಗ್ ಶೀಟ್ಸ್ ಖರೀದಿಸಿದ್ದೀರಾ? ಹಾಗದರೆ ಹಳೆಯದನ್ನು ಎಸೆಯುವ ಮುನ್ನ ಅದರಲ್ಲಿ ಇಂದೊಂದಷ್ಟು  ಕಲಾತ್ಮಕತೆಯನ್ನು ರೂಪಿಸೋಣ. ನೋಟ್ಸ್ ಸ್ಟಿಕ್ ಮಾಡಲು, ಅಲಂಕಾರಿಕ ಸಾಮಾಗ್ರಿಗಳ ಹೋಲ್ಡರ್ ನಂತೆ ಇರಿಸಿಕೊಳ್ಳಬಹುದು.

ಹಳೆಯ ಸೋಡಾ ಕ್ಯಾನ್ಸ್: ಹಳೆಯ ಸೋಡ ಕ್ಯಾನ್’ಗಳನ್ನು ಒಗೆಯದಿರಿ. ಇದನ್ನು ಬಳಸಿಕೊಂಡು ನಿಮ್ಮ ಮಕ್ಕಳ ಮುಖದಲ್ಲಿ ಮಂದಹಾಸವನ್ನು ತರಬಹುದಾಗಿದೆ, ಪೆನ್ಸಿಲ್ ಅಥವಾ ಪೆನ್ ಹೋಲ್ಡರ್ ಇದರಲ್ಲಿ ರೋಪುಗೊಳ್ಳುತ್ತದೆ. ಮೊದಲಿಗೆ ಕ್ಯಾನನ್ನು ಚೆನ್ನಾಗಿ ತೊಳೆದುಕೊಳ್ಳಿ, ನಂತರ ಅದನ್ನು ಒಣಗಲು ಬಿಡಿ, ಕ್ಯಾನ್ ಒಪನರ್ ಅನ್ನು ಬಳಸಿಕೊಂಡು ಕ್ಯಾನ್ ಮುಚ್ಚುಳವನ್ನು ತೆಗೆಯಿರಿ ಅಥವಾ ಸೋಡಾ ಕ್ಯಾನ್ ನ ಅರ್ಧಭಾಗವನ್ನು ಕತ್ತರಿಸಿ. ನಿಮಗೆ ದೊಡ್ಡ ಒಪನಿಂಗ್ ದೊರೆಯುತ್ತಿದಂತೆ ನಿಮ್ಮ ಪೆನ್, ಪೆನ್ಸಿಲ್  ಅಥಾವ ಬರವಣಿಗೆ ಸಾಮಾಗ್ರಿಗಳನ್ನು ಇದರಲ್ಲಿ ಹಾಕಬುದಾಗಿದೆ. ನಿಮ್ಮ ಇಷ್ಟದ ಸ್ಟಿಕರ್’ಗಳನ್ನು ಬಳಸಿಕೊಂಡು ಕ್ಯಾನನ್ನು ಅಲಂಕರಿಸಿಕೊಳ್ಳಬಹುದಾಗಿದೆ.

ಹಳೆಯ ವಾರಪತ್ರಿಕೆ: ಹಳೆಯ ವಾರಪತ್ರಿಕೆಯನ್ನು ತೆಗೆದುಕೊಂಡು  ಬೇರೆ ಬೇರೆ ಗಾತ್ರ ವಿನ್ಯಾಸವುಳ್ಳ ಗಿಫ್ಟ್  ವ್ರಾಪರ್ ಗಳನ್ನು ತಯಾರಿಸಿಕೊಳ್ಳ ಬಹುದಾಗಿದೆ. ಮಗುವಿಗೆ ಗಿಫ್ಟ್  ವ್ರಾಪರ್ ಬೇಕು ಎಂದಾದಲ್ಲಿ ಪತ್ರಿಕೆಯ ಕಾರ್ಟೂನ್ ಪುಟವನ್ನು ಆರಿಸಿಕೊಳ್ಳಿ, ನಿಮ್ಮ ಸ್ನೇಹಿತರು ಫ್ಯಾಶನ್ ಪ್ರಿಯರು ಎಂದಾದಲ್ಲಿ ಸುದ್ದಿಪತ್ರಿಕೆಯ ಫ್ಯಾಷನ್ ಪುಟವನ್ನು ಹಾರಿಸಿಕೊಳ್ಳಿ.