ಪಬ್‌ಜಿ ಬ್ಯಾನ್:‌ ಬೇಸರದಿಂದ ಆತ್ಮಹತ್ಯೆಗೆ ಶರಣಾದ ಯುವಕ

0
119

ಭಾರತದಲ್ಲಿ ಪಬ್ʼಜಿ ಬ್ಯಾನ್ ಆಗಿದೆ. ದೇಶದಲ್ಲಿದ್ದ ಭಾರೀ ಫೇಮಸ್ ಗೇಮ್ ಹೀಗೆ ಹಠಾತ್ತನೆ ಬ್ಯಾನ್ ಆಗಿದ್ರಿಂದ ಯುವಕರು ಮಾತ್ರ ಭಾರೀ ಬೇಸರದಲ್ಲಿದ್ದಾರೆ. ನಿಷೇಧಕ್ಕೆ ಒಳಗಾಗಿರುವ ಪಬ್ಜಿ ಆ್ಯಪ್ ಭಾರತದಲ್ಲಿ ಇನ್ನು ನೆನಪು ಮಾತ್ರ. ಹಗಲು ರಾತ್ರಿ ಪಬ್ ಜಿ, ಗನ್, ಫೈಟ್, ಚಿಕನ್ ಡಿನ್ನರ್ ಅಂತಿದ್ದ ಯುವಕರ ಪಾಡು ಹೇಳ ತೀರದು.

ಪಬ್ʼಜಿ ಆಡಲು ಸಾಧ್ಯವಾಗದ್ದರಿಂದ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ 21 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಐಟಿಐ ಕಲಿಯುತ್ತಿದ್ದ ಪ್ರೀತಮ್ ಹಲ್ದರ್ ಎಂದು ಗುರುತಿಸಲಾಗಿದೆ. ಈತ ಚಕ್ದಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಬಾ ಲಾಲ್ಪುರ್ ಪ್ರದೇಶದಲ್ಲಿರುವ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶುಕ್ರವಾರ ಬೆಳಗ್ಗಿನ ಉಪಹಾರ ಸ್ವೀಕರಿಸಿದ ಬಳಿಕ ಆತ ಕೊಠಡಿಗೆ ತೆರಳಿದ್ದ ಎಂದು ಆತನ ತಾಯಿ ರತ್ನಾ ತಿಳಿಸಿದ್ದಾರೆ. ‘ಮಧ್ಯಾಹ್ನದ ಊಟಕ್ಕೆಂದು ಕರೆಯಲು ತೆರಳಿದಾಗ ಆತನ ಕೊಠಡಿ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಪದೇಪದೇ ಕರೆದರೂ ಬಾಗಿಲು ತೆರೆಯದಿರುವುದರಿಂದ ನೆರೆ ಮನೆಯವರನ್ನು ಕರೆದೆ. ಅವರು ಬಾಗಿಲು ಒಡೆದು ಕೊಠಡಿ ಪ್ರವೇಶಿಸಿದಾಗ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಾಣಿಸಿತು’ ಎಂದು ಅವರು ತಿಳಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಮ್ ರಾತ್ರಿ ಪಬ್ಜಿ ಆಡುತ್ತಿದ್ದ. ಆ್ಯಪ್ ನಿಷೇಧದ ಬಳಿಕ ಆಡಲು ಸಾಧ್ಯವಾಗದಿರುವುದರಿಂದ ಹತಾಶನಾಗಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ರತ್ನಾ ಹೇಳಿದ್ದಾರೆ. ಪಬ್ʼಜಿ, ಪಬ್ʼಜಿ ಮೊಬೈಲ್ ಲೈಟ್, ವಿಚಾಟ್ ವರ್ಕ್, ವಿಚಾಟ್ ರೀಡಿಂಗ್ ಸೇರಿದಂತೆ 118 ಆ್ಯಪ್ಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ನಿಷೇಧಿಸಿತ್ತು. ದೇಶದ ರಕ್ಷಣೆ, ಸಾರ್ವಭೌಮತ್ವ, ಸಮಗ್ರತೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿತ್ತು.

ದೇಶದ ಅಭದ್ರತೆಗೆ ಕಾರಣವಾಗುವ ಪಬ್ ಹೇ ಗೇಮಿಂಗ್ ಮೊಬೈಲ್ ಎಪ್ಲಿಕೇಷನನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಇತ್ತೀಚೆಗಷ್ಟೇ ಭಾರತದಲ್ಲಿ ಬ್ಯಾನ್ ಮಾಡಿದೆ. ಸೋಷಿಯಲ್ಲ್ ಮೀಡಿಯಾದಲ್ಲಂತೂ ಈ ಬಗ್ಗೆ ಮೆಮ್ಸ್ ಸಿಕ್ಕಾಪೊಟ್ಟೆ ವೈರಲ್ ಆಗಿದೆ. ಈ ಗೇಮ್ ಕಂಡು ಹಿಡಿದಿದ್ದು, ಐಯರ್ಲೆಂಡ್ನ ಬ್ರೆಂದನ್ ಗ್ರೀನ್. ಡೆಸ್ಕ ಟಾಪ್ ವರ್ಷನ್ ಗೇಮ್ ಕಂಡುಹಿಡಿದ ಈತನ ಗೇಮನ್ನು ದಕ್ಷಿಣ ಕೊರಿಯಾದ ಗೇಮಿಂಗ್ ಕಂಪನಿ ಬ್ಲೂ ಹೋಲ್ ಅಭಿವೃದ್ಧಿಪಡಿಸಿತ್ತು.