ಸುಧಾರಣೆಯಾಗದ ರಾಜಕಾಲುವೆಗಳು; ಸಾರ್ವಜನಿಕರಲ್ಲಿ ನಿಲ್ಲದ ಆತಂಕ..!

0
393

ಉದ್ಯಾನನಗರಿ ಬೆಂಗಳೂರಿನ ರಾಜಕಾಲುವೆಗಳು ಈ ಕಾಲಕ್ಕೆ ಸುಧಾರಣೆಯಾಗುವ ಲಕ್ಷಣ ಕಾಣುತ್ತಿಲ್ಲ. ಕಳೆದ ವರ್ಷ ಸುರಿದ ಮಳೆಗೆ ಬೆಂಗಳೂರು ನಲುಗಿ ಹೋಗಿತ್ತು. ಕೇವಲ ಮಳೆ ನೀರು ಹರಿವಿಗೆ ಮೀಸಲಿದ್ದ ರಾಜಕಾಲುವೆ, ಕೊಳಚೆ ನೀರು ತುಂಬಿದೆ.ಇದರ ಜೊತೆಗೆ ಕುಸಿದು ಬಿದ್ದ ಗೋಡೆ, ಪ್ಲಾಸ್ಟಿಕ್, ಕಸ-ಕಡ್ಡಿಗಳಿಂದ ರಾಜಕಾಲುವೆ ತುಂಬಿ ತುಳುಕುತ್ತಿದೆ. ಇದರಿಂದ ನೀರು ಹರಿಯಲಾಗದಂತಾಗಿದೆ.

Also read: ಸತ್ಯವಿರಲಿ ಸುಳ್ಳಿರಲಿ ನಿಮ್ಮ ಸಂದೇಶಗಳನ್ನು ವೈರಲ್ ಮಾಡಿ: ಅಮಿತ್ ಶಾ…

ಹೂಳು ತುಂಬಿದ ರಾಜಕಾಲುವೆಗಳಲ್ಲಿ ನೀರು ಹರಿಯದೇ, ಬೆಂಗಳೂರಿನ ರಸ್ತೆಗಳೆಲ್ಲಾ ನಾಲೆಗಳಾಗಿವೆ. ಪ್ರತಿ ಬಾರಿ ನಗರದಲ್ಲಿ ಮಳೆ ಬಂದಾಗಲೂ ಬೆಂಗಳೂರಿಗರು ಆತಂಕಕ್ಕೀಡಾಗುತ್ತಿದ್ದಾರೆ. ಈಗಾಗಲೇ ರಾಜಕಾಲುವೆ ವಿಚಾರ ಹೈ ಕೋರ್ಟ್ ಮೆಟ್ಟಿಲೇರಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ತಜ್ಞರು ಮಳೆ ನೀರು ಹರಿವ ಜಾಲವನ್ನು ಪತ್ತೆ ಹಚ್ಚುವಲ್ಲಿ ತೊಡಗಿದ್ದಾರೆ. ಆದರೆ ರಾಜಕಾಲುವೆಯ ಮಾರ್ಗ ಸಂಪೂರ್ಣ ಅಸ್ತವ್ಯಸ್ತಗೊಂಡಿರುವುದು ಅಧ್ಯಾಯನದಿಂದ ತಿಳಿದು ಬಂದಿದೆ.

Also read: ನಮಾಜ್‌ ಮಾಡಲು ಮಸೀದಿ ಬೇಕಾಗಿಲ್ಲ; ತೀರ್ಪಿನ ಮರು ಪರಿಶೀಲನೆಯ ಪ್ರಶ್ನೆಯೇ ಇಲ್ಲ -ಸುಪ್ರೀಂ..

ನಗರದಲ್ಲಿ ರಾಜಕಾಲುವೆಗಳು ಸಮರ್ಥವಾಗಿರದ ಕಾರಣ ಬೆಂಗಳೂರಿನ ಜನ ನರಳುತ್ತಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಮಳೆಗಾಲದಲ್ಲಿ ಬೆಂಗಳೂರು ಸಂಪೂರ್ಣ ನರಕಲಾಗಿ ಮಾಡ್ಪಾರುತ್ತೆ ಎಂದು ನಗರದ ವಾಸಿಗಳು ಗೋಳಾಡುತ್ತಿದ್ದಾರೆ..

ಹೆಣ್ಣೂರು, ಕೋರಮಂಗಲ, ಗೊಟ್ಟಿಗೆರೆ, ಅಂಜನಾಪುರ, ಥಣಿಸಂದ್ರ, ಉತ್ತರಹಳ್ಳಿ, ದೊಡ್ಡಕಲ್ಲಸಂದ್ರ, ಈಜಿಪುರ, ಕುರುಬರಹಳ್ಳಿ, ಹುಳಿಮಾವು, ಹಲಸೂರು ಸೇರಿದಂತೆ ರಾಜಕಾಲುವೆ ಇರುವ ಪ್ರದೇಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗಾಲದಲ್ಲಿ ಈ ಪ್ರದೇಶಗಳು ಪ್ರವಾಹಕ್ಕೆ ಸಿಲುಕುತ್ತಿವೆ ಎನ್ನಲಾಗಿದೆ.