ಭಾರತದಲ್ಲಿ ಮೂಲ ಸೌಲಭ್ಯಗಳು ಗ್ರಾಮೀಣ ಭಾಗದ ಜನರಿಗೆ ಸಿಗುತ್ತಿಲ್ಲ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ.
ಇತ್ತೀಚಿಗೆ ಯೋಧನ ತಾಯಿಯ ಸಾವನ್ನಪ್ಪಿದ್ದರಿಂದ ಆತ, ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದ. ಅಲ್ಲದೆ ಹೀಮದಿಂದ ಆವೃತ ಪ್ರದೇಶಕ್ಕೆ ವಿಮಾನ ಕಳುಹಿಸಿ ಕೊಡಿ ಎಂದು ಅಂಗಲಾಚಿದ್ದ. ಆದರೆ ಅವನ ಮನವಿಗೆ ಮನ್ನಣೆ ನೀಡದ ಅಧಿಕಾರಿಗಳು ಸುಮ್ಮನಾಗಿದ್ದರು. ಯೋಧ ತನ್ನ ತಾಯಿಯನ್ನು ಹೊತ್ತುಕೊಂಡು ಬಂದ ಶವ ಸಂಸ್ಕಾರ ನಡೆಸಿದ ಘಟನೆ ಇನ್ನೂ ದೇಶವಾಸಿಗಳ ಮನದಲ್ಲಿ ಹಸಿರಾಗಿದೆ. ಅಲ್ಲದೆ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ನಡೆದ ಒಡಿಸ್ಸಾ ಪ್ರಕರಣವೂ ಎಲ್ಲರಿಗೂ ಗೊತ್ತಿದೆ.
ಇಂತಹದೇ ಪ್ರಕರಣ ನಮ್ಮ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಅದು ಸಹ ರಾಜ್ಯದ ಗೃಹಸಚಿವ ಡಾ.ಡಿ.ಕೆ ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲೇ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಗೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇಲ್ಲದೆ ಶವವನ್ನು ಸಾಗಿಸಲು ಪರದಾಡಿದ ಘಟನೆ ಬೆಳಕಿಗೆ ಬಂದಿದೆ. ಕೊನೆಗೆ ತಂದೆ ತಿಮ್ಮಪ್ಪ ಮನಸ್ಸು ಕಲ್ಲು ಮಾಡಿಕೊಂಡು, ೨೦ ವರ್ಷದ ತನ್ನ ಮಗಳು ರತ್ನಮ್ಮಳನ್ನು ದ್ವಿಚಕ್ರವಾಹನದಲ್ಲಿ ಶವ ಸಾಗಿಸಿದ್ದಾನೆ.
ರತ್ನಮ್ಮ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರಿಂದ ಕೊಡುಗೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ವೈದ್ಯರು ಇಲ್ಲದ ಕಾರಣ ಅವರು ಸಾವನ್ನಪ್ಪಿದ ಘಟನೆ ನಡೆದಿದೆ.

ಮಗಳ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ವೀರಾಪುರಕ್ಕೆ ತೆರಳಬೇಕಿತ್ತು. ಆದರೆ ಆಂಬುಲೆನ್ಸ್ ಇಲ್ಲದ ಕಾರಣ ಸ್ನೇಹಿತರ ಸಹಾಯದಿಂದ ಶವವನ್ನು ಬೈಕ್ನ ಹಿಂಬದಿ ಕುರಿಸಿಕೊಂಡು ಹೋದ ಮನ ಕುಲಕುವ ಘಟನೆ ನಡೆದಿದೆ.
ಇನ್ನಾದರು ಸರ್ಕಾರ ಇಂತಹ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಿ ಅಗತ್ಯ ಸೌಲಭ್ಯ ಒದಗಿಸುವ ಕಾರ್ಯ ನಡೆಸಬೇಕು.