ಯೂನಿಯನ್‌ ಬ್ಯಾಂಕ್‌ನಲ್ಲಿ ಉದ್ಯೋಗ ಅವಕಾಶ

0
934

ಮ್ಯಾನೇಜರ್‌ ಮತ್ತು ಸೀನಿಯರ್‌ ಅಸೋಸಿಯೇಟ್‌ ಹುದ್ದೆಗಳಿಗೆ ನೇಮಕ

Related image

ಸಿಟಿ ಯೂನಿಯನ್‌ ಬ್ಯಾಂಕ್‌ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ 550 ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್‌, ತಮಿಳುನಾಡಿನ ಕುಮಾರಕೊಂನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ಮತ್ತು ತನ್ನ ವಿವಿಧ ನೋಡಲ್‌ ಕಚೇರಿಗಳಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡಲಿದೆ. ಅಂಚೆ ಮೂಲಕ ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ: www.cityunionbank.com

ಖಾಲಿ ಹುದ್ದೆಗಳ ವಿವರ:
ಸೀನಿಯರ್‌ ಅಸೋಸಿಯೇಟ್ಸ್‌, ಅಸಿಸ್ಟೆಂಟ್‌ ಮ್ಯಾನೇಜರ್‌, ಚೀಫ್‌ ಮ್ಯಾನೇಜರ್‌, ಮ್ಯಾನೇಜರ್‌ ಮತ್ತು ಅಸಿಸ್ಟೆಂಟ್‌ ಮ್ಯಾನೇಜರ್‌

ಅರ್ಹತೆಗಳೇನು?
ಬಿ.ಇ/ಬಿಟೆಕ್‌ ಅಥವಾ ಎಂಟೆಕ್‌ ಓದಿದವರು ಅರ್ಜಿ ಸಲ್ಲಿಸಬಹುದು. ನಿಗದಿತ ವಿದ್ಯಾರ್ಹತೆಯನ್ನು ಕಂಪ್ಯೂಟರ್‌ ಸೈನ್ಸ್‌/ಕಂಪ್ಯೂಟರ್‌ ಟೆಕ್ನಾಲಜಿ, ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌, ಇನ್‌ಫಾರ್ಮೇಶನ್‌ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್‌- ಕಮ್ಯುನಿಕೇಷನ್‌ನಲ್ಲಿ ಪಡೆದಿರಬೇಕು. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಎಸ್ಸಿ ಪದವೀಧರರು ಅಥವಾ ಎಂಸಿಎ ಓದಿದವರೂ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ವರ್ಷ ಹಾಗೂ ಗರಿಷ್ಠ 50 ವರ್ಷ ಮೀರಿರಬಾರದು.

ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಇದ್ದವರಿಗೆ ನೇಮಕದಲ್ಲಿ ಆದ್ಯತೆ ನೀಡಲಾಗುತ್ತದೆ. ಐಟಿ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಸೇವಾನುಭವ ಇರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ನಮೂನೆಗಳು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿದ

ಅರ್ಜಿಯನ್ನು ಅಗತ್ಯ ದಾಖಲೆಗಳ ಜೊತೆಗೆ ಈ ವಿಳಾಸಕ್ಕೆ ಕಳುಹಿಸಿ:
The Deputy General
Manager, HRMD, City Union Bank
Ltd., Administrative Office, 24-B,
Gandhi Nagar, Kumbakonam– 612
001. Tamil Nadu.