ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 200 ಹುದ್ದೆಗಳ ನೇಮಕಾತಿ..!!

0
591

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಆನ್-ಲೈನ್ ನಲ್ಲಿ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ: 04/10/2017
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21/10/2017
  • ಪರೀಕ್ಷೆ ನಡೆಯುವ ದಿನಾಂಕ: 25/11/2017 (ತಾತ್ಕಾಲಿಕ)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗಳ ವಿವರ

ಒಟ್ಟು 200 ಹುದ್ದೆಗಳು

  • ಹುದ್ದೆ ಹೆಸರು: ಸ್ಪೆಷಲಿಸ್ಟ್ ಅಧಿಕಾರಿ
  • ವೇತನ : ರೂ.31705 – 45950/-
  • ವಯೋಮಿತಿ: 23 ರಿಂದ 32 ವರ್ಷ
  • ವಿದ್ಯಾರ್ಹತೆ
    ಹುದ್ದೆಗ ಅರ್ಜಿ ಸಲ್ಲಿಸಲು ಬಯಸುವವರು ಶೇ 60ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಭಾರತ ಸರ್ಕಾರ ಅಥವಾ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ವಿದ್ಯಾಸಂಸ್ಥೆಯಿಂದ ಪದವಿ ಗಳಿಸಿರಬೇಕು.

ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.600/-
ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಎರಡು ವರ್ಷ ಪರಿವೀಕ್ಷಣಾ ಅವಧಿಯಲ್ಲಿರಬೇಕು.

ಪರೀಕ್ಷಾ ವಿವರ
ಆನ್-ಲೈನ್ ಪರೀಕ್ಷೆಯು 200 ಅಂಕಗಳಿಗೆ ನಡೆಯಲಿದ್ದು, ಪರೀಕ್ಷೆಯು ರೀಸನಿಂಗ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ , ಸಂಬಂಧಪಟ್ಟ ಹುದ್ದೆಗೆ ತಕ್ಕ ಸಾಮಾನ್ಯ ಜ್ಞಾನ ಮತ್ತು ಆಂಗ್ಲ ಭಾಷೆ ಸೇರಿದಂತೆ ಒಟ್ಟು ನಾಲ್ಕು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪರೀಕ್ಷಾ ಕೇಂದ್ರಗಳು
ಬೆಂಗಳೂರು, ದೆಹಲಿ, ಕೋಲ್ಕತ, ಲಕ್ನೋ, ಮುಂಬೈ