ಭಾರಿ ಕುತೂಹಲ ಮೂಡಿಸಿದ್ದ, ಕೇಂದ್ರ ಸರ್ಕಾರದ ಬಜೆಟ್-ನಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತಾ?

0
658

ಭಾರಿ ಕುತೂಹಲ ಮೂಡಿಸಿದ್ದ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ ಇಂದು ಘೋಷಣೆಯಾಗಿದೆ. ಈ ವರ್ಷದ ಬಜೆಟ್-ನಲ್ಲಿ ಮಿತ್ತ ಸಚಿವ ಅರುಣ್ ಜೇಟ್ಲಿ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ, ಕಾರ್ಮಿಕ ಮತ್ತು ಕೃಷಿ ವರ್ಗದವರಿಗೆ ಹೆಚ್ಚಿನ ಅವಕಾಶಗಳನ್ನು ಮತ್ತು ಅನುದಾನಗಳನ್ನು ನಿರೀಕ್ಷಿಸಲಾಗಿತ್ತು.

ಮಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಬಾರಿಯ ಬಜೆಟ್ ಮಂಡನೆಯಲ್ಲಿ, ಹಿಂದಿ ಭಾಷೆಯ ಬದಲು ಆಂಗ್ಲ ಮತ್ತು ಹಿಂದಿ ಮಿಶ್ರ ಭಾಷೆಯಲ್ಲಿ ಬಜೆಟ್ ಮಂಡನೆ ಆರಂಭಿಸಿದರು. ಬೆಳಗ್ಗೆ 11 ಗಂಟೆಗೆ ಸರಿಯಾಗಿ ಬಜೆಟ್ ಮಂಡನೆ ಶುರುವಾಯಿತು. ಈ ಬಾರಿಯ ಬಜೆಟ್ ನಲ್ಲಿ ಏನೆಲ್ಲಾ ವಿಶೇಷವಿದೆ ಎಂದು ತಿಳಿದು ಕೊಳ್ಳೋಣವೇ.

೧. ಕೃಷಿ ಮತ್ತು ಕೃಷಿಕರಿಗೆ ಮೋಡಲ್ ಆದ್ಯತೆ:
ಭಾರತ ಸದ್ಯದಲ್ಲಿಯೇ ಆರ್ಥಿಕವಾಗಿ 5ನೇ ಅತ್ಯಂತ ಸುಭದ್ರ ರಾಷ್ಟ್ರವಾಗಲಿದೆ, ಬಡವರಿಗೆ ಉಚಿತ ಡಯಾಲಿಸಿಸ್, ಸ್ಟೆಂಟ್ ದರ ಇಳಿಸಲಾಗಿದೆ, ಎಲ್ಲ ಸೇವೆಗಳು ಆನ್ ಲೈನ್ ಲಭ್ಯವಿದೆ ಎಂದರು.

ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿ ಉತ್ಪನ್ನ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗುವುದು, ರೈತರ ಬೆಳೆಗಳಿಗೆ ಒಂದೂವರೆ ಪಟ್ಟು ಹೆಚ್ಚು ಬೆಲೆ ಸಿಗಲಿದೆ.

ಆಪರೇಷನ್ ಫ್ಲಡ್ ಯೋಜನೆಯಂತೆ ಆಪರೇಷನ್ ಗ್ರೀನ್ ಯೋಜನೆ ಆರಂಭಿಸಲಾಗುತ್ತಿದ್ದು, 500 ಕೋಟಿ ರುಪಾಯಿಯನ್ನು ನಿಗದಿಪಡಿಸಲಾಗಿದೆ.

ಬಾಂಬೂ ಕೃಷಿಯ ಉತ್ತೇಜನಕ್ಕಾಗಿ 1200 ಕೋಟಿ ರುಪಾಯಿ ನಿಗದಿಪಡಿಸಲಾಗಿದೆ, 2022ರೊಳಗೆ ದೇಶದ ರೈತರ ಆದಾಯ ದ್ವಿಗುಣಗೊಳ್ಳಲಿದೆ.

೨. ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ:
ಉಜ್ವಲ ಯೋಜನೆಯಲ್ಲಿ 8 ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲಾಗಿದೆ.

ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ.

ಬಡವರಿಗೆ ಉಚಿತ ಔಷಧಿ ದೊರಕಿಸಲು 12,000 ಕೋಟಿ ರುಪಾಯಿ ನಿಗದಿಪಡಿಸಲಾಗಿದೆ.

10 ಕೋಟಿ ಬಡ ಮತ್ತು ನಿರ್ಗತಿಕರ ಸಂರಕ್ಷಣೆಗಾಗಿ 5 ಲಕ್ಷ ರುಪಾಯಿ ಆಸ್ಪತ್ರೆ ವೆಚ್ಚಕ್ಕಾಗಿ ನೀಡಲಾಗುವುದು. ಇದಕ್ಕಾಗಿ 1200 ಕೋಟಿ ರುಪಾಯಿ ನೀಡಲಾಗುತ್ತಿದೆ.

600 ಕೋಟಿ ರುಪಾಯಿ ಕ್ಷಯ ರೋಗಿಗಳಿಗಾಗಿ ನಿಗದಿ, ಪ್ರತಿ ಮೂರು ಕ್ಷೇತ್ರಗಳಿಗೆ 1 ಮೆಡಿಕಲ್ ಕಾಲೇಜು ನಿರ್ಮಾಣದ ವಾಗ್ದಾನ

೩. ಪರಿಸರ ರಕ್ಷಣೆ:
ದೆಹಲಿಯ ವಾಯು ಮಾಲಿನ್ಯ ನಿಜಕ್ಕೂ ಕಳವಳಕಾರಿ. ಇದಕ್ಕಾಗಿ ದೆಹಲಿ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಯೋಜನೆಗಳನ್ನು ಆರಂಭಿಸಲಾಗುವುದು.

೪. ಶಿಕ್ಷಣಕ್ಕೆ ಅನುಧಾನ:
ಪ್ರತಿ ಮೂರು ಕ್ಷೇತ್ರಗಳಿಗೆ 1 ಮೆಡಿಕಲ್ ಕಾಲೇಜು ನಿರ್ಮಾಣದ ವಾಗ್ದಾನ.

ಪ್ರಸ್ತುತ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದಲ್ಲದೆ 24 ಹೊಸ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ಸರಕಾರ ಯೋಜನೆ ಹಾಕಿಕೊಂಡಿದೆ.

ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಪಡಿಸಲು ತಂತ್ರಜ್ಞಾನವನ್ನು ಅಧಿಕವಾಗಿ ಬಳಸಲಾಗುವುದು. ಕಪ್ಪು ಹಲಗೆಯಿಂದ ಡಿಜಿಟಲ್ ಬೋರ್ಡ್ ಅಳವಡಿಸಲಾಗುವುದು.

೫. SC ಮತ್ತು ST ಕಲ್ಯಾಣ:
ಪರಿಶಿಷ್ಟ ಜಾತಿಯ ಅಭ್ಯದಯಕ್ಕಾಗಿ 56,619 ಕೋಟಿ ರುಪಾಯಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ 39,135 ಕೋಟಿ ರುಪಾಯಿ ನಿಯೋಜನೆ.

೬. ನಮಾಮಿ ಗಂಗಾ ಯೋಜನೆಗೆ ವೇಗ:
ಗಂಗಾ ನದಿ ಶುದ್ಧೀಕರಣ ರಾಷ್ಟ್ರೀಯ ಆದ್ಯತೆಯಾಗಿದೆ. ನಮಾಮಿ ಗಂಗಾ ಯೋಜನೆಯಡಿಯಲ್ಲಿ 187 ಪ್ರಾಜೆಕ್ಟ್ ಗಳಿಗೆ ಅನುಮೋದನೆ ನೀಡಲಾಗಿದೆ.

೭. ಸಾರಿಗೆ ಕ್ಷೇತ್ರದ ಉನ್ನತೀಕರಣ:
ಪ್ರತಿದಿನ 25 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್, ಎಲ್ಲ ನಿಲ್ದಾಣಗಳಲ್ಲಿ ವೈಫೈ, ಸಿಸಿಟಿವಿ ಅಳವಡಿಸಲಾಗುವುದು. ಮುಂಬೈ ರೈಲು ಸಂಪರ್ಕವನ್ನು 11 ಕೋಟಿ ರುಪಾಯಿ ಯೋಜನೆಯಲ್ಲಿ ಮೇಲ್ದರ್ಜೆಗೇರಿಸಲಾಗುವುದು.

2017ರ ಸೆಪ್ಟೆಂಬರ್ ನಲ್ಲಿ ಬುಲೆಟ್ ಟ್ರೈನ್ ಗಾಗಿ ಅಡಿಗಲ್ಲು ಹಾಕಲಾಗಿದೆ. ಹೈಸ್ಪೀಟ್ ರೈಲು ಯೋಜನೆಗಳಿಗಾಗಿ ತರಬೇತಿ ನೀಡಲು ಬರೋಡಾದಲ್ಲಿ ಸಂಸ್ಥೆ ಸ್ಥಾಪಿಸಲಾಗುತ್ತಿದೆ

೮. ಜನಸಾಮಾನ್ಯರಿಗೆ ವಿಮಾನಯಾನ:
ಭಾರತ ಏರ್ಪೋರ್ಟ್ ಪ್ರಾಧಿಕಾರದಡಿಯಲ್ಲಿ 124 ವಿಮಾನ ನಿಲ್ದಾಣಗಳಿವೆ. ಇದನ್ನು 5 ಪಟ್ಟು ಹೆಚ್ಚಿಸಲಾಗುವುದು ಮತ್ತು ಪ್ರತಿವರ್ಷ 1 ಬಿಲಿಯನ್ ಟ್ರಿಪ್ ಗುರಿ ಇಟ್ಟುಕೊಳ್ಳಲಾಗಿದೆ.

ಅಗ್ಗದ ದರದಲ್ಲಿ ರಾಷ್ಟೀಯ ವಿಮಾನ ಪ್ರಯಾಣ ಸೌಲಭ್ಯ, ಇದಕ್ಕಾಗಿ ಹೆಚ್ಚಿನ ವಿಮಾನ ನಿಲ್ದಾಣಗಳು.

೯. ಹೈಸ್ಪೀಡ್ ಬೆಂಗಳೂರು ಮಾರ್ಗ:
160 ಕಿ.ಮೀ. ಉದ್ದದ ಬೆಂಗಳೂರು ಸಬ ಅರ್ಬನ್ ಯೋಜನೆಗಾಗಿ 17 ಸಾವಿರ ಕೋಟಿ ರುಪಾಯಿ ನಿಯೋಜನೆ.

೧೦. ಉನ್ನತ ಹುದ್ದೆಯವರ ವೇತನ ಪರಿಷ್ಕರಣೆ:
ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಸಂಸದೀಯರ ಸಂಬಳದಲ್ಲಿ ಏರಿಕೆ. ಪ್ರತಿ 5 ವರ್ಷಗಳಿಗೊಮ್ಮೆ ಹಣದುಬ್ಬರದ ಆಧಾರದ ಮೇಲೆ ಸಂಬಳ ಪರಿಷ್ಕರಣೆ ಮಾಡಲಾಗುವುದು.

ರಾಷ್ಟ್ರಪತಿ ಸಂಬಳವನ್ನು ತಿಂಗಳಿಗೆ 5 ಲಕ್ಷ ರುಪಾಯಿಗೆ ಮತ್ತು ಉಪರಾಷ್ಟ್ರಪತಿ ಸಂಬಳವನ್ನು ತಿಂಗಳಿಗೆ 4 ಲಕ್ಷ ರುಪಾಯಿ ಮತ್ತು ರಾಜ್ಯಪಾಲರ ಸಂಬಳವನ್ನು 3.5 ಲಕ್ಷ ರುಪಾಯಿಗೆ ಪರಿಷ್ಕರಣೆ ಮಾಡಲಾಗಿದೆ.

೧೧. ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ:
ಪ್ರಾಮಾಣಿಕ ತೆರಿಗೆದಾರರು ಅಪನಗದೀಕರಣವನ್ನು ‘ಪ್ರಾಮಾಣಿಕತೆಯ ಉತ್ಸವ’ವನ್ನಾಗಿ ಮಾಡಿದ್ದಾರೆ. 2014-15ರಲ್ಲಿ 6.47 ಕೋಟಿ ಇದ್ದ ತೆರಿಗೆದಾರರ ಸಂಖ್ಯೆ 2016-17ರಲ್ಲಿ 8.27 ಆಗಿದೆ.

ಕಳೆದ 3 ವರ್ಷಗಳಲ್ಲಿ ವೈಯಕ್ತಿಕ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದರಿಂದ ಈ ವರ್ಷ ಯಾವುದೇ ತಿದ್ದುಪಡಿ ಇರುವುದಿಲ್ಲ. ಹಾಗಾಗಿ, ಆದಾಯ ತೆರಿಗೆ ಮಿತಿ ಏರಿಕೆ ಇರುವುದಿಲ್ಲ.

250 ಕೋಟಿ ರುಪಾಯಿಗೂ ಹೆಚ್ಚು ವಾರ್ಷಿಕ ಆದಾಯವಿರುವ ಕಂಪನಿಗಳಿಗೂ ಶೇ.25ರಷ್ಟು ಕಾರ್ಪೊರೇಟ್ ತೆರಿಗೆ ವಿಧಿಸಲಾಗುವುದು

100 ಕೋಟಿಗೂ ಹೆಚ್ಚು ಆದಾಯವಿರುವ ಕೃಷಿ ಉತ್ಪನ್ನ ಉತ್ಪಾದಿಸುವ ಕಂಪನಿಗಳಿಗೆ ಮೊದಲ 5 ವರ್ಷ ಶೇ.100ರಷ್ಟು ಆದಾಯ ತೆರಿಗೆ ವಿನಾಯಿತಿ.

೧೨. ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಏರಿಕೆ:
ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಮೇಲೆ ಕಸ್ಟಮ್ಸ್ ತೆರಿಗೆಯನ್ನು ಶೇ.15ರಿಂದ ಶೇ.20ಕ್ಕೆ ಏರಿಸಲಾಗಿದೆ.

ಶಿಕ್ಷಣ ಸೆಸ್ ಶೇ.4ರಷ್ಟು ಏರಿಕೆ. ಶಿಕ್ಷಣ ಆಗಲಿದೆ ಇನ್ನಷ್ಟು ದುಬಾರಿ. ಮೊಬೈಲ್, ಟಿವಿ ಮತ್ತಿತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ.