ಇ.ಪಿ.ಎಫ್.ನ ಈ ನಿಯಮಗಳನ್ನು ತಿಳಿದುಕೊಂಡಿರಿ, ಬೇಕಾದ ಸಮಯಕ್ಕೆ ತುಂಬಾ ಸಹಾಯಕ್ಕೆ ಬರುತ್ತದೆ..

2
9349

EPF ಅಥವಾ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳನ್ನು ನಾವು ತಿಳಿಸುತ್ತೇವೆ.

1. EPF ನಲ್ಲಿ ಹೂಡಿಕೆ ಮಾಡಬಹುದು:
ನಿಮಗೆ ಉದ್ಯೋಗ ನೀಡಿರುವ ಕಂಪೆನಿಯಿಯವರು ಕೇವಲ ಶೇ.12 ರಷ್ಟು ಮಾತ್ರ ಪಿಎಫ್ ನಲ್ಲಿ ಹೂಡಿಕೆ ಮಾಡುತ್ತಾರೆ, ಇದಲ್ಲದೆ ನೀವು ಸ್ವ ಇಚ್ಛೆಯಿಂದ ನಿಮ್ಮ ಆದಾಯದಲ್ಲಿ ಶೇ. 12 ಕ್ಕಿಂತ ಹೆಚ್ಚಿನ ಹಣವನ್ನು ನೀವು ಪಿಎಫ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ, ಇದಕ್ಕೆ ನಿಮಗೆ ಕಾಲ ಕಾಲಕ್ಕೆ ಬಡ್ಡಿಯು ಸಿಗುತ್ತದೆ, ಇದನ್ನೇ ವಾಲೆಂಟರಿ ಪ್ರಾವಿಡೆಂಟ್ ಫಂಡ್ ಅನ್ನುತ್ತಾರೆ.

2. EPS ಮೇಲೆ ಬಡ್ಡಿದರ ಇಲ್ಲ:
EPF ಭಾಗವಾಗಿ ಕಂಪೌಂಡ್ ಬಡ್ಡಿದರ ಮಾತ್ರ ಸಿಗುತ್ತದೆ. ಇಪಿಎಸ್ ಮೇಲೆ ಯಾವುದೇ ರೀತಿಯ ಬಡ್ಡಿದರ ಲಭ್ಯವಿರುವುದಿಲ್ಲ. EPF ಹಣ ಹಿಂಪಡೆಯುವಾಗ ಸಂದರ್ಭದಲ್ಲಿ EPF ಮತ್ತು ಇಪಿಎಸ್ ಎರಡು ಪಡೆಯುತ್ತಿರಿ.

3. EPF ಜೀವ ವಿಮೆ ನೀಡುತ್ತದೆ:
EPF ಮೂಲಕ ಸಣ್ಣ ಪ್ರಮಾಣದ ಲೈಫ್ ಕವರ್ ನೀಡಲಾಗುತ್ತದೆ, ಇದನ್ನು ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ (EDLI) ಯೋಜನೆ ಎನ್ನಲಾಗುತ್ತದೆ. ಈಗಾಗಲೇ ತನ್ನ ಉದ್ಯೋಗಿಗಳಿಗೆ ಜೀವ ವಿಮೆ ಸೌಲಭ್ಯ ಒದಗಿಸುವ ಕಂಪನಿಗಳಿಗೆ ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ (EDLI) ಯೋಜನೆಯಿಂದ ವಿನಾಯಿತಿ ನೀಡಲಾಗಿದೆ.

4. EPF ಗಾಗಿ ನಾಮ ನಿರ್ದೇಶನ ಮಾಡಬಹುದು:
ಬ್ಯಾಂಕ್ ಹಾಗು ವಿಮೆಯ ಹಾಗೆ EPF ಖಾತೆಯಲ್ಲೂ ಕೂಡ ನಾಮನಿರ್ದೇಶನದ ಸೌಲಭ್ಯವಿರುತ್ತದೆ.EPF ಖಾತೆ ಹೊಂದಿದ ವ್ಯಕ್ತಿಯ ಮರಣದ ನಂತರ ನಾಮಿನಿಯನ್ನು ಸಂಪರ್ಕಿಸಿ ಇಪಿಎಫ್ ಮೊತ್ತವನ್ನು ನೀಡಲಾಗುತ್ತದೆ.

5. EPF ಅಡಿ ಪಿಂಚಣಿ ಪಡೆಯಬಹುದು:
ನಿಮ್ಮ ಕಂಪನಿ ನೀಡುವ ಶೇ.12 ರಷ್ಟು EPF ನಲ್ಲಿ ಶೇ. 8.33ರಷ್ಟು ಮೊತ್ತ ನಿಮ್ಮ ಇಪಿಎಸ್ ಗೆ (ಗರಿಷ್ಠ ರೂ. 1250) ಹೋಗುತ್ತದೆ. ಉಳಿದ ಮೊತ್ತ ಇಪಿಎಫ್ ಗೆ ಸೇರ್ಪಡೆಯಾಗುತ್ತದೆ. ಇದನ್ನು ಪಡೆಯಲು ಉದ್ಯೋಗಿಯ ವಯಸು 58 ವರ್ಷ ಹಾಗು 10 ವರ್ಷ ಸೇವೆ ಸಲ್ಲಿಸಿರಬೇಕು. ಇದಲ್ಲದೆ ಪ್ರತಿ ತಿಂಗಳು ರೂ. 1,000 ಕನಿಷ್ಟ ಮತ್ತು ರೂ. 3,250 ಗರಿಷ್ಠ ಪಿಂಚಣಿಯಾಗಿದೆ. ಪಿಂಚಣಿ ಸೌಲಭ್ಯ ಉದ್ಯೋಗಿಯ ಜೀವಿತಾವಧಿಯ ಪೂರ್ತಿ ಸಮಯದಲ್ಲಿ ಲಭ್ಯವಿರುತ್ತದೆ. ಅವರ ಮರಣದನಂತರ ಕುಟುಂಬದ ಸದಸ್ಯರಿಗೆ ಪಿಂಚಣಿ ಸೇರುತ್ತದೆ.

6. ಆಪತ್ಕಾಲದಲ್ಲಿ EPF ಹಣ ಹಿಂಪಡೆಯಬಹುದು:
ಕೆಲವು ವಿಶೇಷ ಸಂದರ್ಭಗಳಾದ ಮದುವೆ, ಮಕ್ಕಳ ಶಿಕ್ಷಣ, ಸ್ವಯಂ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಹೆಂಡತಿ, ಮಕ್ಕಳ, ಅವಲಂಬಿತ ಪೋಷಕರ ಚಿಕಿತ್ಸೆಗೆ, ಗೃಹಸಾಲ ತೀರಿಸುವಾಗ ಇಲ್ಲವೇ ಮನೆಯನ್ನು ತನ್ನ, ಹೆಂಡತಿ ಅಥವಾ ಜಂಟಿಯಾಗಿ ಮಾಲೀಕತ್ವ ಮಾಡಿಸಲು, ಮನೆ ದುರಸ್ಥಿ ಮಾಡಲು EPF ಹಣವನ್ನು ಹಿಂಪಡೆಯಬಹುದಾಗಿದೆ.

7. EPF ನಿಂದ ಹೊರಗುಳಿಯಬಹುದು:
EPF ನಿಂದ ಹೊರಗುಳಿಯ ಬಯಸುವವರು ಕೆಲಸಕ್ಕೆ ಸೇರುವಾಗ ಇದನ್ನು ಆಯ್ಕೆ ಮಾಡಬೇಕು. ಒಂದು ಬಾರಿ ಆಯ್ಕೆ ಮಾಡಿಕೊಂಡರೆ ಅದರಿಂದ ಹೊರಗುಳಿಯುವುದು ಸಾಧ್ಯವಿಲ್ಲ. ಈಗಾಗಲೇ ನೀವು EPF ಹೊಂದಿದ್ದರೆ ಇದು ನಿಮಗೆ ಅನ್ವಯಿಸುವುದಿಲ್ಲ.

8. EPF ಗಾಗಿ RTI ಅರ್ಜಿ ಸಲ್ಲಿಸಬಹುದು:
ನಿಮ್ಮ EPF ಖಾತೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು RTI ಅರ್ಜಿ ಸಲ್ಲಿಸಬಹುದು. ಇಪಿಎಫ್ ಬ್ಯಾಲೆನ್ಸ್, ಇಪಿಎಫ್ ಹಿಂಪಡೆಯುವಿಕೆ ಅಥವಾ ವರ್ಗಾವಣೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ RTI ಅರ್ಜಿ ಸಲ್ಲಿಸಬಹುದು