ಭಾರತದಲ್ಲಿ ಅನ್ಲಾಕ್ 4.0 ಹಿನ್ನೆಲೆ ಎಲ್ಲೆಲ್ಲಿ ನೂತನ ಕೋವಿಡ್ ನಿರ್ಬಂಧ ಹೇರಿಕೆಯಾಗಿದೆ ಅಂತ ಇಲ್ಲಿದೆ ಡಿಟೇಲ್ಸ್

0
187

ಭಾರತದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಎಲ್ಲೆಡೆ ಮತ್ತೆ ಲಾಕ್ಡೌನ್ ಮಾಡುವಂತೆ ಕೂಗು ಕೇಳಿ ಬರುತ್ತಿದೆ. ಆದರೆ ಸರ್ಕಾರ ದೇಶದ ಆರ್ಥಿಕ ದೃಷ್ಟಿಯಿಂದ ಲಾಕ್ಡೌನ್ ಮಾಡುವುದಿಲ್ಲ ಎಂದು ಹೇಳಿದೆ. ಆದರೆ ಕೊರೊನಾದಿಂದ ನಿತ್ಯ ಪಾಸಿಟಿವ್ ಕೇಸ್ ಗಳು ಹೆಚ್ಚಾಗಿದ್ದು, ಸಾವಿನ ಸಂಖ್ಯೆಯೂ ಏರುತ್ತಿದೆ. ವ್ಯಾಕ್ಸಿನ್ ಸಿಗುವವರೆಗೂ ವೈರಸ್ನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂತಾಗಿದೆ.

ಹೀಗಿರುವಾಗ ಹಲವು ರಾಜ್ಯ ಸಾರ್ಕಾರಗಳು ಮತ್ತೆ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲು ಮುಂದಾಗಿದೆ. ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ಅನ್ಲಾಕ್ 4.0 ನಿಯಮಾವಳಿಯನ್ನು ಘೋಷಿಸಿತ್ತು. ಆದರೆ, ಈಗ ದೇಶದ ಕೆಲ ರಾಜ್ಯಗಳು ಕೋವಿಡ್ ೧೯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೂತನವಾಗಿ ನಿರ್ಬಂಧ ಹೇರಿದೆ.

ಯಾವ ಯಾವ ರಾಜ್ಯ, ಎಲ್ಲೆಲ್ಲಿ ನಿರ್ಬಂಧ ಹೇರಿದೆ ಇಲ್ಲಿದೆ ಡಿಟೇಲ್ಸ್:
ದೆಹಲಿ: ಎಲ್ಲಾ ಕಾಲೇಜುಗಳು ಅಕ್ಟೋಬರ್ 5ರ ವರೆಗೆ ಬಂದ್ ಮುಂದುವರಿಯಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ನೋಯ್ಡಾ: ಸೆಪ್ಟೆಂಬರ್ 30ರ ವರೆಗೆ ಸೆಕ್ಷನ್ 144 ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಯಾವುದೇ ನಿರ್ಬಂಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಯ್ಪುರ್: ಸೆಪ್ಟೆಂಬರ್ 21ರ ರಾತ್ರಿ 9ಗಂಟೆಯಿಂದ ಸೆಪ್ಟೆಂಬರ್ 28ರ ವರೆಗೆ ಮಧ್ಯರಾತ್ರಿವರೆಗೆ ಲಾಕ್ಡೌನ್ ಜಾರಿಗೊಳಿಸಿರುವುದಾಗಿ ಚತ್ತೀಸ್ ಗಢ್ ಜಿಲ್ಲಾಡಳಿತ ಘೋಷಿಸಿದೆ. ಅಲ್ಲದೇ ಅತೀ ಹೆಚ್ಚು ಸೋಂಕು ಪ್ರದೇಶ ಯಾವುದು ಎಂಬುದನ್ನು ತಿಳಿಸಿದೆ. ಸೋಮಕು ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಮತ್ತೆ ಬಂದ್ ಎಂದು ವಿವರಿಸಿದೆ.

ಜೈಪುರ್: ರಾಜ್ಯದಲ್ಲಿನ 11 ಜಿಲ್ಲೆಗಳಲ್ಲಿ ಅಪರಾಧ ದಂಡ ಸಂಹಿತೆ ಸೆಕ್ಷನ್ 144 ಜಾರಿಗೊಳಿಸಲು ರಾಜಸ್ಥಾನ್ ಸರ್ಕಾರ ಶನಿವಾರ ನಿರ್ಧಾರ ತೆಗೆದುಕೊಂಡಿತ್ತು. ಜೈಪುರ್, ಜೋಧ್ ಪುರ್, ಕೋಟ, ಅಜ್ಮೀರ್, ಅಲ್ವಾರ್, ಭಿಲ್ವಾರಾ, ಬಿಕಾನೇರ್, ಉದಯ್ ಪುರ್, ಸಿಕಾರ್ ಜಿಲ್ಲೆಗಳು ಸೇರಿದೆ ಎಂದು ವರದಿ ತಿಳಿಸಿದೆ.

ಮುಂಬೈ: ಸೆಪ್ಟೆಂಬರ್ 30ರ ವರೆಗೆ ಜನ ಗುಂಪುಗೂಡುವುದನ್ನು ಮುಂಬೈ ಮಹಾನಗರ ಪಾಲಿಕೆ ನಿಷೇಧಿಸಿದೆ. ಕಳೆದ ಮಾರ್ಚ್ 25ರಿಂದ ಮುಂಬೈನಲ್ಲಿ ಸೆಕ್ಷನ್ 144 ಜಾರಿಯಲ್ಲಿತ್ತು.

ತಮಿಳುನಾಡು: ತಮಿಳುನಾಡಿನಲ್ಲಿ ಭಾನುವಾರ ಲಾಕ್ಡೌನ್ ಮುಂದುವರಿಸಲು ಚಿಂತನೆ ನಡೆಸುತ್ತಿದೆ. ಆರೋಗ್ಯ ಸೇವೆ ಮತ್ತು ಹಾಲು ಸರಬರಾಜು ಮಾಡಲು ಮಾತ್ರ ಅವಕಾಶ ನೀಡಲು ಸರ್ಕಾರ ಎದುರು ನೋಡುತ್ತಿದೆ ಎಂದು ವರದಿ ತಿಳಿಸಿದೆ.