ಮೂವರು ಒಟ್ಟಿಗೆ ಪ್ರಯಾಣವೇಕೆ ಮಾಡಬಾರದು?

0
1469

ಮೂವರು ಒಟ್ಟಿಗೆ ಪ್ರಯಾಣವೇಕೆ ಮಾಡಬಾರದು ?

ಮೂವರು ಒಟ್ಟಿಗೆ ಪ್ರಯಾಣಿಸುವುದು ಅಶುಭವೆಂದು ತಿಳಿಯಲಾಗಿದೆ. ನಂಬಿಕೆಯ ಪ್ರಕಾರ ಕೆಲವು ಸಂಖ್ಯೆಗಳು ಅಶುಭವಾಗಿ ಪ್ರಪಂಚ ಪೂರ್ತಿ ಪರಿಗಣಿಸಲಾಗಿದೆ. 3, 13, 33 ಮೊದಲಾದವು ಅಂತಹ ಸಂಖ್ಯೆಗಳು.

Also read: ಅಪ್ಪಿ ತಪ್ಪಿಯೂ ಮಾಡಬಾರದು ಈ ದಾನಗಳು, ಒಂದು ವೇಳೆ ಮಾಡಿದರೆ ಏನಾಗುತ್ತೆ ಗೊತ್ತಾ?

ಯಾವಾಗಲಾದರೂ ಇಬ್ಬರು ಮಾತನಾಡಿಕೊಳ್ಳುತ್ತಿದ್ದಾಗ ಅಭಿಪ್ರಾಯ ಬೇಧಗಳು ಉಂಟಾದರೆ ಸುಲಭವಾಗಿ ಒಂದು ನಿರ್ಣಯಕ್ಕೆ ಬರುವರು. ಒಂದು ವೇಳೆ ಮೂರನೆಯವನಿದ್ದರೆ ಒಂದು ವಿಷಯದ ಅಭಿಪ್ರಾಯದ ಬಗ್ಗೆ ಘರ್ಷಣೆಯಲ್ಲಿ ಇರುವ ಇಬ್ಬರನ್ನೂ ಸರಿಮಾಡುವುದಕ್ಕೆ ಎರಡೂ ಕಡೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರಬೇಕು.

ಹೀಗೆ ಮಾತಿಗೆ ಮಾತು ಬೆಳೆದು, ಜಗಳಕ್ಕೆ ದಾರಿಯಾಗಿ ಒಬ್ಬರಿಗೊಬ್ಬರು ಮಾತಿನಲ್ಲಿ ಗಾಯಪಡಿಸಿಕೊಳ್ಳಬೇಕಾಗಿ ಬರುತ್ತದೆ. ಇಬ್ಬರ ವಾದಗಳ ಮಧ್ಯೆ ಮೂರನೆಯವನ ಪರಿಸ್ಥಿತಿ ಗಂದರಗೋಳವಾಗಿರುತ್ತದೆ. ಕಚ್ಚು ಎಂದು ಹಾವಿಗೆ ಹೇಳಿದರೆ ಕಪ್ಪೆಗೆ ಕೋಪ, ಕಪ್ಪೆಯನ್ನು ಬಿಡು ಎಂದರೆ ಹಾವಿಗೆ ಕೋಪ’ ಎನ್ನುವಂತೆ ಪರಿಸ್ಥಿತಿ ಏರ್ಪಡುತ್ತದೆ. ಕೆಲವೊಮ್ಮೆ ಈ ವಾದಗಳು ಬೆಳೆದು ಒಬ್ಬರನ್ನೊಬ್ಬರು ಹೊಡೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು.

Also read: ಊಟ ಮಾಡಿದ ನಂತರ ಯಾವ ಯಾವ ಕೆಲಸಗಳನ್ನು ಮಾಡಬಾರದು

ಪ್ರಯಾಣಕ್ಕೆ ಸರಿ ಸಂಖ್ಯೆಯಲ್ಲಿ ವ್ಯಕ್ತಿಗಳು ತೆರಳಿದರೆ ಚೆನ್ನಾಗಿರುವುದೆಂದು ಹೇಳಲ್ಪಟ್ಟಿದೆ. ನಾಲ್ಕು ಜನ ಇದ್ದದ್ದೇ ಆದರೆ ಇಬ್ಬರಿಬ್ಬರು ಜೊತೆಯಾಗಿ ಮಾತನಾಡಿಕೊಳ್ಳುವುದಕ್ಕೆ ಅನುಕೂಲವಾಗಿರುತ್ತದೆ. ತಾವು ಹೇಳಿದ್ದು, ಇತರರು ಕೇಳಲಿಲ್ಲ ಎನ್ನುವ ಮನಸ್ತಾಪವೂ ಇರುವುದಿಲ್ಲ. ಈ ಸಿದ್ಧಾಂತವು ವ್ಯಕ್ತಿಗಳ ನಡುವೆ ಸ್ನೇಹವನ್ನು ಬೆಳೆಸುತ್ತದೆಯೇ ಹೊರತು ಮುರಿಯುವುದಿಲ್ಲ.