ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ; ಈ ಜಿಲ್ಲೆಯಲ್ಲಿ ದಲಿತರು ಹೋಟೆಲ್‍ಗೆ ಹೋಗಂಗಿಲ್ಲ, ಕುಡಿಯಲು ನೀರು ಇಲ್ಲ, ಮೆಡಿಕಲ್-ನಲ್ಲಿ ಟ್ಯಾಬ್ಲೆಟ್ ಕೂಡ ಕೊಡಲ್ಲ..

0
172

ದೇಶದಲ್ಲಿ ದಲಿತರ ಮೇಲೆ ಇನ್ನೂ ಶೋಷಣೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು, ಆದರೆ ಇಂತಹ ಹೀನಾಯ ಪದ್ಧತಿ ರಾಜ್ಯದಲ್ಲೇ ಕಂಡು ಬರುತ್ತಿರುವುದು ಇಡಿ ಮಾನವ ಕುಲಕ್ಕೆ ಅವಮಾನವಾಗಿದೆ. ಜಾತಿ ಧರ್ಮ ವೆನ್ನುವ ಪಿಡಿಗು ಇನ್ನೂ ನಿತಿಲ್ಲ ಇದರಿಂದ ‘‘ಗ್ರಾಮೀಣ ಹಾಗೂ ಕೆಲ ನಗರ ಪ್ರದೇಶಗಳಲ್ಲಿ ದಲಿತರನ್ನು ಹೋಟೆಲ್, ದೇವಸ್ಥಾನ ಹಾಗೂ ಇತರೆ ಸ್ಥಳಗಳಲ್ಲಿ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಾತಿಗಳಿಗೆ ಸೇರಿದ ಜನರಿಗೆ ಕುಡಿಯಲು ನೀರು, ಹೋಟೆಲ್ ತಿಂಡಿ, ಮೆಡಿಕಲ್ ಗಳಲ್ಲಿ ಟ್ಯಾಬ್ಲೆಟ್ ಕೂಡ ನೀಡದೆ ಬಹಳ ಕೆಟ್ಟ ದೃಷ್ಟಿಯಿಂದ ನೋಡುತ್ತಿರುವ ದೃಶ್ಯ ಪಬ್ಲಿಕ್ ಟಿವಿ ತೋರಿಸಿದೆ.

ಹೌದು ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದರೂ ಕೆಳ ಸಮುದಾಯಗಳ ಮೇಲೆ ನಡೆಯುತ್ತಿರುವ ಅಮಾನವೀಯ ದುಷ್ಕೃತ್ಯಗಳನ್ನು ತಡೆಗಟ್ಟಲು ಸರಕಾರಗಳು ಸಂಪೂರ್ಣ ಸೋತಿವೆ. ಆಧುನಿಕತೆಗೆ ತಕ್ಕಂತೆ ಜೀವನ ಶೈಲಿ ಬದಲಾದರೂ ದಲಿತರು ಕೆಲ ಹಿಂಸಾಕೃತ್ಯಗಳಿಗೆ ಒಳಗಾಗಬೇಕಾಗಿರುವ ಸಂದರ್ಭ ಮರುಕಳಿಸುತ್ತಲಿದೆ. ಇದಕ್ಕೆ ಪ್ರತ್ಯೇಕ್ಷೆ ಸಾಕ್ಷಿಯಾಗಿದ್ದ ಕೊಪ್ಪಳ ಜಿಲ್ಲೆಯಲ್ಲಿ ಕಂಡು ಬರುತ್ತಿದ್ದು ಪ್ರತಿನಿತ್ಯವೂ ಅಲ್ಲಿನ ಜನರು ಮೇಲ್ವರ್ಗದ ಜನರಿಂದ ಮಾನಸಿಕವಾಗಿ ಹಲ್ಲೆಗೆ ಒಳಗಾಗುತ್ತಿರುವ ವಿಡಿಯೋ ಕೂಡ ಹರಿದಾಡುತಿದ್ದು, ಗ್ರಾಮದ ಹೋಟೆಲ್‍ಗಳಲ್ಲಿ ದಲಿತರಿಗೆ ಹೊರಗಡೆ ನಿಲ್ಲಿಸಿ ನೀರು ಹಾಕಲಾಗುತ್ತಿದೆ. ಸವರ್ಣೀಯರ ಹೋಟೆಲಿನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಿದ್ದು, ಜಾತಿ ತಾರತಮ್ಯ ಮಾಡಲಾಗುತ್ತಿದೆ.

ಇನ್ನೂ ಸತ್ತಿಲ್ಲ ದಲಿತರ ಮೇಲೆನ ಶೋಷಣೆ?

ಹೋಟೆಲಿನಲ್ಲಿ ದಲಿತರಿಗೆ ನೀರು ಎತ್ತಿ ಹಾಕುವ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿದೆ. ದಲಿತರು ಹೋಟೆಲ್‍ಗಳಲ್ಲಿ ನೀರು ಮುಟ್ಟುವ ಹಾಗಿಲ್ಲ. ಹೀಗಾಗಿ ದಲಿತರಿಗೆ ಪ್ಲಾಸ್ಟಿಕ್ ಜಗ್ ಮೂಲಕ ನೀರು ಹಾಕಲಾಗುತ್ತದೆ. ಈ ಹೋಟೆಲಿನಲ್ಲಿ ದಲಿತರಿಗೆ ತಿನ್ನಲು ಪ್ಲೇಟ್ ಬದಲಾಗಿ ಪೇಪರ್ ಪ್ಲೇಟಿನಲ್ಲಿ ತಿಂಡಿ ಕೊಡುತ್ತಾರೆ. ಅಲ್ಲದೆ ನೀರು ಕೇಳಿದರೆ, ಮೇಲಿಂದ ಕೈಯಿಗೆ ನೀರು ಹಾಕುತ್ತಾರೆ. ಅವರಿಗೆ ಕುಡಿಯೋಕೆ ನೀರು ಕೊಡುವುದಿಲ್ಲ. ಈ ಎಲ್ಲ ಕಷ್ಟಗಳನ್ನು ಅನುಭವಿಸಿದ ದಲಿತರ ಮುಖಂಡನೊಬ್ಬ ಹೇಳುವ ಪ್ರಕಾರ, ಎಷ್ಟೊಂದು ಹೀನಾಯ ಪರಿಸ್ಥಿತಿ ಇದೆ ಎಂದರೆ. ಹೋಟೆಲ್, ದೇವಾಲಯ, ಮೇಲ್ವರ್ಗದವರ ಮನೆ ಮುಂದೆ ಹೋಗುವುದಕ್ಕೆ ವಿರೋಧದ ಜೊತೆಗೆ ಮೆಡಿಕಲ್ ಗೆ ಹೋದರೆ ದಲಿತರಿಗೆ ಟ್ಯಾಬ್ಲೆಟ್ ಕೊಡಬೇಡಿ ಎಂದು ಮೆಲ್ವರ್ಗದವರು ತಿಳಿಸಿದ್ದಾರೆ ಅದಕ್ಕಾಗಿ ನಮಗೆ ಹುಷಾರ್ ಇಲ್ಲದ ಸಮಯದಲ್ಲಿ ಒಂದು ಟ್ಯಾಬ್ಲೆಟ್ ಕೂಡ ಸಿಗುವುದು ಕಷ್ಟವಾಗಿದೆ ಎನ್ನುವ ನೋವು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿದ್ದು, ಜಿಲ್ಲಾಧಿಕಾರಿಗಳು ಆ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ನಾನು ತಕ್ಷಣವೇ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಜೊತೆ ಮಾತನಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ತಕ್ಷಣ ಪರಿಹಾರ ನೀಡಬೇಕು ಎಂದು ಸೂಚನೆ ನೀಡುತ್ತೇನೆ. ಈ ರೀತಿಯ ಘಟನೆಗಳು ನಡೆಯಬಾರದು ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ದಲಿತ ಜನಾಂಗವು ಇಂಥ ಅಸ್ಪೃಶ್ಯತಾ ಆಚರಣೆಗಳಿಗೆ ತುತ್ತಾಗದಂತೆ ಗಮನಹರಿಸಲು ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಆಚರಣೆಗಳಿಗೆ ಕಾರಣರಾಗುವವರನ್ನು ಅಸ್ಪೃಶ್ಯತಾ ಕಾಯಿದೆ ಅನ್ವಯ ಶಿಕ್ಷೆ ವಿಧಿಸಬೇಕು.

ಕೃಪೆ: Public tv

Also read: ಬಿಬಿಎಂಪಿ ಮಾಡಿದ ತಪ್ಪಿಗೆ ಅಂಗಾಗ ಕಳೆದುಕೊಂಡ ಯುವತಿ; ಯುವತಿ ಜೀವನಕ್ಕೆ ಸಹಾಯ ಮಾಡದೆ ಜಾರಿಕೊಳ್ಳುತ್ತಿರುವ BBMP ಅಧಿಕಾರಿಗಳು..