ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಭರ್ಜರಿ ಕೊಡುಗೆ, ತಾವು ಬರೀ ಹಿಂದುಗಳಿಗೆ ಮಾತ್ರ ಸೀಮಿತವಲ್ಲ ಎಂದು ನಿರೂಪಿಸಿದ ಯೋಗಿ ಆಧಿತ್ಯನಾಥ್…!!

0
372

ತಮ್ಮ ದಿಟ್ಟ ನಡೆ, ನಿರ್ಧಾರಗಳು ಮತ್ತು ನೇರ ಮಾತುಗಳಿಂದ ದೇಶದ ಜನರ ಮನೆಮಾತಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರು ಈ ಬಾರಿಯ ರಾಜ್ಯ ಬಜೆಟ್ ಅನ್ನು ಘೋಷಿಸಿದ್ದಾರೆ. ಕೇವಲ ಹಿಂದುಗಳಿಗೆ ಮಾತ್ರ ಸಿಎಂ ಸೀಮಿತ ಎನ್ನುವವರಿಗೆ ಈ ಬಜೆಟ್ ಮೂಲಕ ಉತ್ತರ ನೀಡಿದ್ದಾರೆ.

  • ಯೋಗಿ ಆಧಿತ್ಯನಾಥ್ ಅವರ ಬಜೆಟ್-ನಲ್ಲಿರುವ ಪ್ರಮುಖ ಅಂಶಗಳನ್ನು ನಾವು ತಿಳಿಸುತ್ತೇವೆ.
  • ಬಜೆಟ್ ನಲ್ಲಿ ಒಟ್ಟಾರೆ 2,757 ಕೋಟಿ ರೂ. ಅಲ್ಪ ಸಂಖ್ಯಾತರ ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆಗೆ ನೀಡಿದ್ದಾರೆ.
  • ಮದರಸಾಗಳ ಆಧುನೀಕರಣಕ್ಕೆ ಹೆಚ್ಚಿನ ಪ್ರಮುಖ್ಯತೆ ನೀಡಿ 404 ಕೋಟಿ ರೂ. ಗಳನ್ನು ಮೀಸಲಿಟ್ಟಿದ್ದಾರೆ. ಕಳೆದ ಬಾರಿ ಅಲ್ಪಸಂಖ್ಯಾತರಿಗೆ ನೀಡಿದ ಅನುದಾನಕ್ಕಿಂತಲೂ ಶೇ.10 ರಷ್ಟು ಮೊತ್ತವನ್ನು ಹೆಚ್ಚಿಸಿದ್ದಾರೆ.
  • ಈ ಬಾರಿಯ ಬಜೆಟ್ ಹಿಂದಿನ ಬಜೆಟ್‍ಗಿಂತಲೂ 282 ಕೋಟಿ ರೂ. ಹೆಚ್ಚು ಹಣ ಮೀಸಲಿಡಲಾಗಿದೆ.
  • ಮದರಸಾ ನೋಂದಣಿ ಯೋಜನೆಯಡಿ ಸರ್ಕಾರ ಪ್ರತ್ಯೇಕ 215 ಕೋಟಿ ರೂ. ನೀಡಲಿದೆ. ಈ ಯೋಜನೆ ಅಡಿ ಪ್ರಾಥಮಿಕವಾಗಿ 246 ಆಲಿಯಾ ಮಟ್ಟ ಶಾಲೆಗಳನ್ನು ಸರ್ಕಾರದಿಂದ ಗುರುತಿಸಲಾಗಿದೆ.
  • ಅಖಿಲೇಶ್ ಯಾದವ್ ಸರ್ಕಾರಕ್ಕೆ ಹೊಲಿಕೆ ಮಾಡಿದರೆ ಯೋಗಿ ಸರ್ಕಾರ ಅತಿಹೆಚ್ಚು ಹಣ, 2,757 ಕೋಟಿ ರೂ. ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ್ದಾರೆ.
  • ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳ ಮೂಲಕ 1,500 ಕೋಟಿ ರೂ.ಗಳನ್ನು ನೀಡಿದ್ದಾರೆ.

  • ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಮದುವೆಗಾಗಿ 74 ಕೋಟಿ. ರೂಗಳನ್ನು ಬಜೆಟ್-ನಲ್ಲಿ ನೀಡಿದ್ದಾರೆ.
  • ಸರ್ಕಾರ ಮದರಸಾಗಳಲ್ಲಿ NCERT ಪಠ್ಯಕ್ರಮ ಹಾಗೂ ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ಭೋದಿಸಲು ಆದೇಶ ನೀಡಿದ್ದಾರೆ.
  • ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ 800 ಕೋಟಿ ರೂ. ಮೀಸಲಿಟಿದ್ದು, ಇದು ಶೇ. 20 ರಷ್ಟಿರುವ UP ಯ ಅಲ್ಪಸಂಖ್ಯಾತರಿಗೆ ವರದಾನವಾಗಲಿದೆ.