ಹಿಂದೂ ಮತ್ತು ಮುಸ್ಲಿಂ ಕಲ್ಮಾ- ಮಂತ್ರಗಳ ಮಹತ್ವವನ್ನು ತಿಳಿಸುತ್ತಿರುವ ಯುಪಿ ಮದರಸಾ; ಗಾಯತ್ರಿ ಮಂತ್ರ ಪಠಿಸುತ್ತಿರುವ ಮುಸ್ಲಿಂ ಮಕ್ಕಳು..

0
268

ದೇಶದಲ್ಲೇ ಮೊದಲಿನಿಂದ ಹಿಂದೂ-ಮುಸ್ಲಿಂ ನಡುವೆ ತಿಕ್ಕಾಟ ಇದ್ದೇ ಇದೆ ಎರಡು ಧರ್ಮದಲ್ಲಿ ವಿರೋಧವಾಗಿ ಕೆಲವು ಆಚರಣೆಗಳನ್ನು ಮಾಡಿಕೊಂಡು ಬರುತ್ತಿರುವ ಈ ಸಮುದಾಯಗಳು ಪ್ರತ್ಯೇಕವಾಗಿ ಅವರದೇ ಕೆಲವು ಪದ್ದತಿಗಳನ್ನು ಆಚರಣೆ ಮಾಡಿಕೊಂಡು ಹೊರಟಿವೆ, ಅದರಂತೆ ಅವರ ಧರ್ಮದ ಶಾಲೆಯಲ್ಲಿ ಬೇರೆ ಧರ್ಮದ ಸ್ಲೋಕ ಮಂತ್ರಗಳನ್ನು ಹೇಳಿದರೆ ಅದು ದೊಡ್ಡ ತಪ್ಪು ಎನ್ನುವ ಹಂತಕ್ಕೆ ಈ ಎರಡು ಧರ್ಮಗಳು ಬಂದಿವೆ. ಆದರೆ ಇಲ್ಲೊಂದು ಮುಸ್ಲಿಂ ಶಾಲೆಯಲ್ಲಿ ಧರ್ಮದ ವಿರೋಧವನ್ನು ಹೊರತಾಗಿ ವಿದ್ಯಾರ್ಥಿಗಳಿಗೆ ಗಾಯತ್ರಿ ಮಂತ್ರವನ್ನು ಪಠಿಸಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.

Also read: ಕೇಂದ್ರ ಸರ್ಕಾರದಿಂದ ಮತ್ತೆ ಬಿಗ್ ಶಾಕ್; ವಾಹನಗಳ ನೋಂದಣಿ ಶುಲ್ಕ ಹೆಚ್ಚಿಸಲು ಮುಂದಾದ ಸರ್ಕಾರ, ಯಾವ ವಾಹನಗಳಿಗೆ ಎಷ್ಟು ಹೆಚ್ಚಳ??

ಮುಸ್ಲಿಂ ಮಕ್ಕಳು ಗಾಯತ್ರಿ ಮಂತ್ರ ಪಠಿಸುತ್ತಾರ?

ಹೌದು ಸಾಮಾಜಿಕ ಸುಧಾರಕ, ಶಿಕ್ಷಣ ತಜ್ಞ ಮತ್ತು ಅಲಿಗ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ ಹಿಂದೂ ಮತ್ತು ಮುಸ್ಲಿಮರು ಭಾರತದ ಸುಂದರ ವಧುವಿನ ಎರಡು ಕಣ್ಣುಗಳು, ಅವರಲ್ಲಿ ಯಾರೊಬ್ಬರು ಇಲ್ಲವಾದರೂ ವಧುವಿನ ಸೌಂದರ್ಯವನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದು ಸತ್ಯವೆನಿಸುತ್ತೆ. ಏಕೆಂದರೆ ಇದನ್ನು ಹಿಂದೂ-ಮುಸ್ಲಿಂ ಐಕ್ಯತೆಯ ಹಿನ್ನೆಲೆಯಲ್ಲಿ ಹೇಳಲಾಗಿದೆ. ಅದಕ್ಕ ತಕ್ಕ ಹಾಗೆ ಉತ್ತರ ಪ್ರದೇಶದ ಮದರಸಾಗಳಲ್ಲಿ ಎರಡು ಪ್ರಮುಖ ನಂಬಿಕೆಗಳು ಹೇಗೆ ಸಹಬಾಳ್ವೆ ಮತ್ತು ಕೋಮು ಸೌಹಾರ್ದತೆಯ ಬಂಧಗಳನ್ನು ಬಲಪಡಿಸಬಹುದು ಎಂಬುದನ್ನು ತೋರಿಸಿದೆ.

Also read: ಹೆಲ್ಮೆಟ್ ಧರಿಸದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಾನತ್ತು..

ಅದರಂತೆ ಉತ್ತರ ಪ್ರದೇಶದ ರಾಮಪುರ ಜಿಲ್ಲೆಯಲ್ಲಿ ಮದರಸಾಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಉರ್ದುವನ್ನು ಕಲಿಯುತ್ತಿದ್ದಾರೆ. ಹಾಗೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅದೇ ಜಿಲ್ಲೆಯಲ್ಲಿ ನಡೆಸುತ್ತಿರುವ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಗಾಯತ್ರಿ ಮಂತ್ರವನ್ನು ಪಠಿಸುತ್ತಿದ್ದಾರೆ. ಈ ಶಾಲೆಯಲ್ಲಿನ ಶಿಕ್ಷಣದ ಗುಣಮಟ್ಟ ಬಹಳ ಉತ್ತಮವಾಗಿರುವುದರಿಂದ ಧರ್ಮ, ಭಾಷೆಯ ಗೋಡೆಗಳನ್ನು ದಾಟಿ ಮುಸ್ಲಿಂ ಬಾಂಧವರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ತಮ್ಮ ದಿನವನ್ನು ಕಲ್ಮಾದಿಂದ (ಇಸ್ಲಾಮಿಕ್ ಪಠಣ) ಪ್ರಾರಂಭಿಸುತ್ತಾರೆ, ಆದರೆ ಅವರು ಗಾಯತ್ರಿ ಮಂತ್ರವನ್ನು ಸಹ ಪಠಿಸುತ್ತಾರೆ. ಹಾಗೆಯೇ ಮದರಸಾ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ವಂದೇ ಮಾತರಂ ಮತ್ತು ಇಂಕ್ವಿಲಾಬ್ ಜಿಂದಾಬಾದ್ ಅನ್ನು ಜಪಿಸುತ್ತಾರೆ.

ಅಲ್ಲಿನ ಮದರಸಾದ ಕಾರ್ಯಕರ್ತರು ಹೇಳುವ ಪ್ರಕಾರ, 2012 ರಲ್ಲಿ ಶಾಲೆ ಪ್ರಾರಂಭವಾದಾಗಿನಿಂದ ವಿದ್ಯಾರ್ಥಿಗಳು ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಎನಿಸಿದರು ಇಂತಹ ಕ್ರಾಂತಿಕಾರಿ ಬೆಳವಣಿಗೆಯು ಅವರ ಮೂಲ ಧಾರ್ಮಿಕ ಶಿಕ್ಷಣ ರಚನೆಯಲ್ಲಿ ಹಸ್ತಕ್ಷೇಪ ಮಾಡದೆ ಮದರಸಾಗಳಿಗೆ ಸರ್ಕಾರವು ನೀಡಿದ ಪರಿಣಾಮವಾಗಿದೆ, ಅದರ ಜೊತೆಗೆ ಇಂಗ್ಲಿಷ್, ಕಂಪ್ಯೂಟರ್, ಗಣಿತ ಮತ್ತು ವಿಜ್ಞಾನ ಸೇರಿದಂತೆ ಆಧುನಿಕ ವಿಷಯಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತಿದ್ದಾರೆ. ಮುಸ್ಲಿಮರ ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಕನಿಷ್ಠ, ಯುಪಿ ಬೋರ್ಡ್ ಆಫ್ ಮದರ್ಸಾ ಶಿಕ್ಷಣ ಕಾಯ್ದೆ, 2004 ರಲ್ಲಿ ಸ್ಥಾಪನೆಯಾದ ನಂತರ ಈ ಬೆಳವಣಿಗೆ ಆಗಿದೆ.

Also read: ಇನ್ಮುಂದೆ ಯಾವುದೇ ಸ್ಥಳದಲ್ಲಿ ಸಾರ್ವಜನಿಕರು ಶೌಚಾಲಯಕ್ಕೆ ಹೋಗಲು ಪರದಾಡಬೇಕಿಲ್ಲ; ಉಚಿತವಾಗಿ 5 Star Hotel ಗಳಲ್ಲಿವೂ ಶೌಚಾಲಯ ಬಳಕೆ ಮಾಡಬಹುದು!!

ಸಮುದಾಯದ ಮೂಲಭೂತವಾದಿಗಳ ಅಲ್ಪ ಪ್ರತಿರೋಧವಿದ್ದರೂ ಯುಪಿ ಮತ್ತು ಕೇಂದ್ರದಲ್ಲಿ ಸತತ ಸರ್ಕಾರಗಳು ಮದರಸಾ ಶಿಕ್ಷಣ ವ್ಯವಸ್ಥೆಯನ್ನು ಬೆಳಸಲು ಸಹಾಯ ಮಾಡುತ್ತಿವೆ.
ಮದರಸಾ ಕೂಡ ತಮ್ಮ ಪಠ್ಯಕ್ರಮದಲ್ಲಿ ಕಾನೂನು ಮತ್ತು ಸಂವಿಧಾನಗಳನ್ನು ಪರಿಚಯಿಸಲು ಪ್ರಾರಂಭಿಸಿತು. ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಂತಹ ಮೂಲಭೂತ ವಿಷಯಗಳನ್ನು ಸೇರಿಸಲು ಮದರಸಾಗಳು ಒಪ್ಪಿದ ನಂತರ ಅನೇಕ ರಾಜ್ಯ ಸರ್ಕಾರಗಳು ಮದರಸಾ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಮದರಸಾ ಮಂಡಳಿಗಳನ್ನು ರಚಿಸಿವೆ. ಈ ದಿಕ್ಕಿನಲ್ಲಿ, 2018 ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ದೇಶಾದ್ಯಂತ ನೋಂದಾಯಿಸದ ಮದರಸಾಗಳ ಶೈಕ್ಷಣಿಕ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರಮಟ್ಟದ ಮದರಸಾ ಮಂಡಳಿಯನ್ನು ಸ್ಥಾಪಿಸುವ ಆಲೋಚನೆಯನ್ನು ಮಾಡಿತು. ಅದರಂತೆ ವಿದ್ಯಾರ್ಥಿಗಳಿಗೆ ಮುಖ್ಯವಾಹಿನಿಗೆ ಸೇರಲು ಆತ್ಮವಿಶ್ವಾಸವನ್ನು ನೀಡಿವೆ.