2 ವರ್ಷದಲ್ಲಿ ಬರೋಬರಿ 60 ಕಾರ್ ಕದ್ದ ಖತರ್ನಾಕ್ 2 ಅಡಿ ಕಳ್ಳ; ಕಳ್ಳತನದ ಪ್ಲಾನ್ ಕೇಳಿ ಪೋಲಿಸರೇ ಆಶ್ಚರ್ಯಿ.!

0
287

ಕುಳ್ಳರು ಅತೀಯಾದ ಬುದ್ದಿವಂತಿಕೆ ಹೊಂದಿರುತ್ತಾರೆ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ, ಅದಕ್ಕಾಗಿ ಹಿಂದಿನ ಕಾಲದಲ್ಲಿ ಕೆಲವು ಪಂಚಾಯತಿ, ಮತ್ತು ಮದುವೆ ಗಳಲ್ಲಿ ಕುಳ್ಳರನ್ನು ಕರೆದುಕೊಂಡು ಬರಲು ನಿಷೇಧವಿತ್ತು. ಆಗಿನ ಕಾಲದಲ್ಲಿ ಯಾಕೆ ಕುಳ್ಳರಿಗೆ ಅತೀಯಾದ ಬುದ್ದಿವಂತಿಕೆ ಇದೆ ಎಂದು ಹೇಳುತ್ತಿದ್ದರು ಎನ್ನುವುದಕ್ಕೆ ಸಾಕ್ಷಿಯಾದ 2 ಅಡಿಯ ಕಳ್ಳನೊಬ್ಬ ಸುದ್ದಿಯಾಗಿದ್ದು, ಆಶ್ಚರ್ಯಿ ಮೂಡಿಸಿದ್ದಾನೆ. ಏಕೆಂದರೆ 2 ಅಡಿಯ ಕುಳ್ಳ 2 ವರ್ಷದಲ್ಲಿ ಬರೋಬರಿ 60 ಕಾರುಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ.

ಹೌದು ಉತ್ತರ ಪ್ರದೇಶದ ಗಾಜಿಯಾಬಾದ್‍ನ ಬೌನಾ ಕೇವಲ 2 ಅಡಿ ಎತ್ತರ ಹೊಂದಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ತಿಳಿದ ಮಾಹಿತಿಯಂತೆ ಗ್ಯಾಂಗ್‍ಗೆ ಬೌನಾ ಎರಡು ವರ್ಷಗಳ ಹಿಂದೆ ಸೇರಿಕೊಂಡಿದ್ದನು. ಬೌನಾ ಮೊದಲು ಕಾರಿನ ಗ್ಲಾಸ್ ಒಡೆದು ಹಾಕಿ ಒಳಗೆ ನುಗ್ಗುತ್ತಾನೆ. ಬಳಿಕ ಆತನ ಸ್ನೇಹಿತರು ಕಾರು ಕದಿಯಲು ಸಹಾಯ ಮಾಡುತ್ತಿದ್ದರು. ಬೌನಾಗೆ ಗ್ಯಾಂಗ್‍ನ ಸದಸ್ಯರು ಮಾಸ್ಟರ್ ಮೈಂಡ್ ಎಂದೇ ಕರೆಯುತ್ತಾರೆ. ಅಲ್ಲದೆ ತಮ್ಮ ಗ್ಯಾಂಗ್‍ಗೆ ಬೌನಾ ಗ್ಯಾಂಗ್ ಎಂದೇ ಕರೆಯುತ್ತಾರೆ.

ಹೇಗೆ ನಡೆಯುತಿತ್ತು ಕಳ್ಳತನ?

ಬಬ್ಲು ಹಾಗೂ ಬೌನಾ ಸಂಬಂಧದಲ್ಲಿ ಮಾವ-ಅಳಿಯ. ಪೊಲೀಸರು ಆರೋಪಿ ಬಬ್ಲುನನ್ನು ವಿಚಾರಣೆ ನಡೆಸಿದಾಗ ಆತ, ನಾನು ಹಾಗೂ ನನ್ನ ಅಳಿಯ ಕಾರು ಕದಿಯುವುದರಲ್ಲಿ ಎತ್ತಿದ ಕೈ. ಆತ ಕಳೆದ 2 ವರ್ಷಗಳ ಹಿಂದೆ ಗ್ಯಾಂಗ್‍ಗೆ ಎಂಟ್ರಿ ಕೊಟ್ಟಿದ್ದನು. ಗ್ಯಾಂಗ್‍ನಲ್ಲಿ ಸೋನು ಎಂಬವನು ಇದ್ದು, ಆತ ಆರ್ಡರ್ ಪಡೆದು ಯಾವ ಕಾರು ಕದಿಯಬೇಕು ಎಂದು ನಮಗೆ ಹೇಳುತ್ತಿದ್ದನು. ಇದಾದ ಬಳಿಕ ನಾವು ಗಾಜು ಒಡೆದು ಕಾರಿನೊಳಗೆ ಹೋಗಿ ಇಗ್ನಿಶಿಯನ್‍ನನ್ನು ಮುರಿದು ಹಾಕುತ್ತಿದ್ದೆವು. ನಂತರ ಕಾರಿನ ಮಾಸ್ಟರ್ ಕೀ ಅಥವಾ ಕಾರಿನ ವೈರನ್ನು ಜೋಡಿಸಿ ಸ್ಟಾರ್ಟ್ ಮಾಡಿ ಪರಾರಿ ಆಗುತ್ತಿದ್ದೆವು. ಬೌನಾ ಈವರೆಗೂ 60 ಕಾರುಗಳನ್ನು ಕದಿದ್ದಾನೆ ಎಂದು ಹೇಳಿದ್ದಾನೆ.

ಕಾರು ಕದ್ದ ನಂತರ ಅದನ್ನು ತಮ್ಮ ಸ್ನೇಹಿತ ಚಂದ್‍ನ ಗ್ಯಾರೇಜ್‍ನಲ್ಲಿ ಪಾರ್ಕ್ ಮಾಡುತ್ತಿದ್ದೆವು. ಅಲ್ಲಿ ಪ್ಲೇಟ್ ಹಾಗೂ ಕಾರಿಗೆ ಚಿಕ್ಕಪುಟ್ಟ ಬದಲಾವಣೆ ಮಾಡಿ ಖಾಲಿಯಿರುವ ಫ್ಲ್ಯಾಟ್‍ಗಳಲ್ಲಿ ಪಾರ್ಕ್ ಮಾಡುತ್ತಿದ್ದೆವು. ಇದೆಲ್ಲಾ ಆದ ಬಳಿಕ ಸೋನು ಈ ಕಾರುಗಳನ್ನು ಗ್ರಾಹಕರಿಗೆ ಮಾರುತ್ತಿದ್ದನು. ಕಾರು ಏನಾದರೂ ಮಾರಾಟವಾಗಲಿಲ್ಲ ಎಂದರೆ ಅದರ ಭಾಗಗಳನ್ನು ತೆಗೆದು ಯಾಕುಬ್ ಅದನ್ನು ದೆಹಲಿಯಲ್ಲಿ ಮಾರುತ್ತಿದ್ದನು ಎಂದು ಬಬ್ಲು ಪೊಲೀಸರಿಗೆ ತಿಳಿಸಿದ್ದಾನೆ. ವರದಿಗಳ ಪ್ರಕಾರ, ಕಾರು ಕದಿಯುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಬೌನಾ ಕಾಣಿಸಿಕೊಂಡಿದ್ದು, ಆತನ ಎತ್ತರ ನೋಡಿ ಪೊಲೀಸರು ಚಿಕ್ಕ ಹುಡುಗ ಎಂದು ಬಿಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸಿಕ್ಕಿಬಿದ್ದಿದ್ದು ಹೇಗೆ?

ಮಂಗಳವಾರ ಬಿಜೇಂದ್ರ ಸಿಂಗ್ ಎಂಬವರು ಇಬ್ಬರು ಕಳ್ಳರು ನಂಬರ್ ಪ್ಲೇಟ್ ಇಲ್ಲದಿರುವ ಕಾರಿನಲ್ಲಿ ಬರುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಳ್ಳರ ಕಾರನ್ನು ತಡೆಯಲು ಪ್ರಯತ್ನಿಸಿದಾಗ ಚಾಲಕ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಇಬ್ಬರನ್ನು ಹಿಂಬಾಲಿಸಿ ಬಂಧಿಸಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.