ರಸ್ತೆ ಅಪಘಾತದಲ್ಲಿ ಗಾಯಗೊಂಡವರ ರಕ್ತದಿಂದ ತಮ್ಮ ಕಾರ್ ಕಲೆಯಾಗುತ್ತದೆಯೆಂದು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ ಪೊಲೀಸ್..

0
438

ಉತ್ತರಪ್ರದೇಶದಲ್ಲಿ ಯಾವಾಗಲೂ ಏನಾದರೊಂದು ಘಟನೆ ನಡೆಯುತ್ತಿರುತ್ತದೆ. ಆದರೆ, ಈ ಬಾರಿ ಜನರನ್ನು ರಕ್ಷಿಸಬೇಕಾದ ಪೊಲೀಸರಿಂದಲೇ ತಪ್ಪಾಗಿದೆ. ಇವರ ಈ ಕರ್ತವ್ಯ ಲೋಪದಿಂದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಪೊಲೀಸರು ಮನಸ್ಸು ಮಾಡಿದ್ದಾರೆ ಇವರನ್ನು ಉಳಿಸಬಹುದಿತ್ತು ಗೊತ್ತಾ.

ಉತ್ತರಪ್ರದೇಶದ ರಾಜಧಾನಿ ಲಕ್ನೋ ದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಯುವಕರನ್ನು ಸ್ಥಳದಲ್ಲಿದ್ದವರು ದಯವಿಟ್ಟು ಕರೆದುಕೊಂಡು ಹೋಗಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಪೊಲೀಸರು ನಮ್ಮ ಕಾರಿಗೆ ಕಲೆಯಾಗುತ್ತದೆ ಎಂದು ಮಾನವೀಯತೆ ಇಲ್ಲದವರಂತೆ ಮಾತನಾಡಿ ನಿರಾಕರಿಸಿದ್ದಾರೆ.

ಗುರುವಾರ ರಾತ್ರಿ ಬೈಕಿನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿ 17 ವರ್ಷದ ಅರ್ಪಿತ್ ಖುರಾನಾ ಮತ್ತು ಸನ್ನಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಾರೆ, ಇದೆ ವೇಳೆ ಸ್ಥಳಕ್ಕೆ ಬಂದ ಪೊಲೀಸರಿಗೆ ಜನ ಇವರನ್ನು ಆಸ್ಪತ್ರೆಗೆ ಸೇರಿಸಲು ಮನವಿ ಮಾಡಿದ್ದಾರೆ. ಆದರೆ, ತಮ್ಮ ಪೊಲೀಸ್ ಕಾರಿನಲ್ಲಿ ಗಾಯಾಳುಗಳನ್ನು ಸಾಗಿಸಿದರೆ ಕಲೆಯಾಗುತ್ತದೆ ಎಂದು ನೆಪ ಹೇಳಿ ಅವರನ್ನು ಹಾಗೆ ಬಿಟ್ಟು ಹೋಗಿದ್ದಾರೆ, ಈ ನಿರ್ಲಕ್ಷದಿಂದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಿಂದ ಮತ್ತೊಂದು ವಾಹನ ಬಂದಿದ್ದು, ಆ ವಾಹನದಲ್ಲಿ ಸವಾರರನ್ನು ಸಾಗಿಸಲಾಗಿತ್ತು. ಆದರೆ ಆ ಹೊತ್ತಿಗೆ ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಇಬ್ಬರು ಯುವಕರ ಪ್ರಾಣ ಬಿಟ್ಟಿದ್ದಾರೆ. ಪೊಲೀಸರು ಮತ್ತು ಸ್ಥಳೀಯರ ನಡುವಿನ ಮಾತುಕತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ವಿಚಾರಿಸಿದ ಸಹರಾನ್ಪುರದ ಪೊಲೀಸ್ ಮುಖ್ಯಸ್ಥ ಪ್ರಭಾದ್ ಪ್ರತಾಪ್ ಅವರು ಆ ಮೂರು ಜನ ಪೊಲೀಸರನ್ನು ಕೆಲಸದಿಂದ ಅಮಾನತ್ತು ಗೊಳಿಸಿದ್ದಾರೆ.