ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂ ವ್ಯಕ್ತಿಗಳಿಂದ ಹರಿದು ಬರುತ್ತಿರುವ ಹಣ; 51 ಸಾವಿರ ಕೊಡಲು ಮುಂದಾದ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ.!

0
187

ಅಯೋಧ್ಯ ರಾಮಮಂದಿರ ಕುರಿತು ಸುಪ್ರಿಂಕೋರ್ಟ್ ನೀಡಿದ ತೀರ್ಪುಗೆ ಮುಸ್ಲಿಂ ವ್ಯಕ್ತಿಗಳೇ ಹೆಚ್ಚು ಸಂತೋಷ ಪಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು, ಅದಕ್ಕೆ ಸಾಕ್ಷಿಯಂತೆ ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷ ವಾಸಿಮ್ ರಿಜ್ಮಿ ಅವರು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ 51 ಸಾವಿರ ರೂ. ದೇಣಿಗೆ ನೀಡಲು ತೀರ್ಮಾನ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ರಿಜ್ವಿ ಅವರು, ದಶಕಗಳಷ್ಟು ಹಳೆಯದಾದ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ‘ಅತ್ಯುತ್ತಮ ತೀರ್ಪು’ ಎಂದು ಹೇಳಿದ್ದಾರೆ.

Also read: ಇಂದಿರಾ ಕ್ಯಾಂಟೀನ್-ಗೆ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಹೆಸರನ್ನಿಡಲು ಮುಂದಾದ ಸರ್ಕಾರ, ಈ ನಡೆಗೆ ನೀವು ಒಪ್ಪುತ್ತೀರಾ??

ರಾಮಮಂದಿರಕ್ಕೆ ಮುಸ್ಲಿಂ ವ್ಯಕ್ತಿಗಳಿಂದ ಹಣ?

ಹೌದು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಾಸಿಮ್ ರಿಜ್ಮಿ ರಾಮ ಮಂದಿರ ನಿರ್ಮಾಣಕ್ಕೆ 51 ಸಾವಿರ ರೂ. ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಇದನ್ನು ನೋಡಿದರೆ ಸುಪ್ರಿಂಕೋರ್ಟ್ ತೀರ್ಪು ನ್ಯಾಯಯುತವಾಗಿದೇ ಎನ್ನುವುದು ಮತ್ತಷ್ಟು ಸಾಭಿತಾಗುತ್ತೆ. ಏಕೆಂದರೆ ಮಸೀದಿಯನ್ನು ಕೆಡವಿದ್ದು ಕಾನೂನು ಉಲ್ಲಂಘನೆಯಾಗಿದೆ. ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯಲ್ಲೇ 5 ಎಕ್ರೆ ಪರ್ಯಾಯ ಭೂಮಿಯನ್ನು ನೀಡಬೇಕು. ವಿಶೇಷಾಧಿಕಾರ ಬಳಸಿ ನೀಡುವ ಪರ್ಯಾಯ ಭೂಮಿ 3 ತಿಂಗಳಲ್ಲಿ ನಿರ್ಧರಿಸಬೇಕು. ಎಂದು ಹೇಳಿದೆ ಇದಕ್ಕೆ ಸ್ವಾಗತಿಸಿದ ಮುಸ್ಲಿಮರು ರಾಮ ಮಂದಿರಕ್ಕೆ ದೇಣಿಗೆ ನೀಡುತ್ತಿದ್ದಾರೆ.

Also read: ತೀವ್ರ ಕುಸಿತ ಕಾಣುತ್ತಿರುವ ದೆಹಲಿ ವಾಯು ಗುಣಮಟ್ಟ; ಬಾರ್‌ನಲ್ಲಿ ಏಳು ವಿವಿಧ ಫ್ಲೇವರ್‌ನ ಆಮ್ಲಜನಕ ಮಾರಾಟ.!

ಅಷ್ಟೇ ಅಲ್ಲದೆ ಕಳೆದ ವಾರ ರಾಮ ಮಂದಿರ ನಿರ್ಮಾಣಕ್ಕಾಗಿ 1 ಲಕ್ಷ ರೂ. ದೇಣಿಗೆ ನೀಡುವುದಾಗಿ ಅಸ್ಸಾಂನ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆಯೊಂದು ಘೋಷಿಸಿತ್ತು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಿದ್ದ ಕಾನೂನು ಅಡೆತಡೆಗಳು ನಿವಾರಣೆಯಾದಂತೆ ಮಂದಿರ ನಿರ್ಮಾಣಕ್ಕೆ ಹಿಂದು ಸಂಘಟನೆಗಳು ಭರದ ಸಿದ್ಧತೆಯಲ್ಲಿ ತೊಡಗಿವೆ. ಅದರಂತೆ ಸುಪ್ರೀಂ ಕೊರ್ಟ್​ ನೀಡಿದ ಐತಿಹಾಸಿಕ ತೀರ್ಪನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೇವೆ. ನ್ಯಾಯಾಲಯ ನೀಡಿದ ತೀರ್ಪನ್ನು ಎಲ್ಲರು ಸ್ವಾಗತಿಸಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವಂತೆ ಕೋರುತ್ತೇವೆ. ನಮ್ಮ ಸಂಘದ ವತಿಯಿಂದ ರಾಮಾಲಯ ನಿರ್ಮಾಣಕ್ಕೆ 1 ಲಕ್ಷ ರೂ ದೇಣಿಗೆ ನೀಡುತ್ತೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮೈನುಲ್ ಹಕ್ ಹೇಳಿದ್ದರು.

ಸುಪ್ರಿಂಕೋರ್ಟ್ ಹೇಳಿದ್ದೇನು?

Also read: ರಾಜ್ಯದಲ್ಲಿ ರಂಗೇರುತ್ತಿರುವ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಕೈ ತಪ್ಪಿದ ಟಿಕೆಟ್.!

ವಿವಾದಿತ 2.77 ಎಕರೆ ಜಮೀನು ಪ್ರಕರಣದ ಅರ್ಜಿದಾರ ರಾಮಲಲ್ಲಾಗೆ ನೀಡಲು ಆದೇಶಿಸಿದೆ. ರಾಮಮಂದಿರ ನಿರ್ಮಾಣದ ಹೊಣೆಯನ್ನು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿದ್ದು ಮೂರು ತಿಂಗಳ ಒಳಗಾಗಿ ನಿಯಮ ರೂಪಿಸುವಂತೆ ಆದೇಶಿಸಿದೆ. ಪ್ರಕರಣದ ಮತ್ತೋರ್ವ ಅರ್ಜಿದಾರ ಸುನ್ನಿ ವಕ್ಫ್ ಬೋರ್ಡ್‌ಗೆ ಅಯೋಧ್ಯೆಯ ಬೇರೆ ಕಡೆಯಲ್ಲಿ ಐದು ಎಕರೆ ಜಮೀನು ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ವಿಶೇಷಾಧಿಕಾರ ಬಳಸಿ ಸುನ್ನಿ ಬೋರ್ಡ್‌ಗೆ ಪರ್ಯಾಯ ಜಮೀನು ನೀಡುವಂತೆ ಐದು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠ ಮಹತ್ವದ ಆದೇಶ ನೀಡಿದೆ.