youtube ವೀಡಿಯೊ ನೋಡಿ ಸ್ವಂತ ಹೆರಿಗೆ ದುಸ್ಸಾಹಸ: ಮಗು ಜೊತೆಗೆ ಯುವತಿ ಸಾವು..

0
855

ಯುವಪಿಳಿಗೆ ತನ್ನ ಹುಚ್ಚು ಯೋಚನೆಯಲ್ಲಿ ಏನೆಲ್ಲಾ ಮಾಡುತ್ತಿದೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಅದರಂತೆ ಪ್ರೀತಿ ಪ್ರೇಮದಲ್ಲಿ ಮುಳುಗುವ ಯುವಕ ಯುವತಿಯರು ತಮ್ಮ ಜೀವನದ ಜವಾಬ್ದಾರಿ ಮರೆತು ಕ್ಷಣಿಕವಾಗಿ ಸಿಗುವ ಸುಖಕ್ಕೆ ಮಾರು ಹೋಗಿದ್ದಾರೆ. ಇದರಿಂದ ಮೈ ಮರೆತು ಮಾಡುವ ತಪ್ಪಿಗೆ ಯಾವರೀತಿಯ ಶಿಕ್ಷೆ ಎನ್ನುವುದು ಈ ಸ್ಟೋರಿ ನೋಡಿದರೆ ತಿಳಿಯುತ್ತೆ.

Also read: ವಿಮಾನ ನಿಲ್ದಾಣದಲ್ಲಿ ಮರೆತು ಮಗುವನ್ನೇ ಬಿಟ್ಟು ವಿಮಾನ ಏರಿದ ಮಹಾ ತಾಯಿ..

ಹೌದು ಈಗೀಗ ಎಲ್ಲವು ಆನ್ಲೈನ್ -ನಲ್ಲಿ ಸಿಗುವ ಜಾಯಮಾನವಾಗಿದ್ದು ಗೊತ್ತಿಲ್ಲದ ವಿಷಯವನ್ನು ಆನ್ಲೈನ್-ನಲ್ಲಿ ಸರ್ಚ್ ಮಾಡಿದರೆ ಸಾಕು youtube ನಲ್ಲಿ ಅದಕ್ಕೆ ಸರಿಯಾದ ಮಾದರಿ ವೀಡಿಯೊಗಳು ಬರುತ್ತಿವೆ. ಇದನ್ನೇ ಮಾದರಿಯಾಗಿಟ್ಟು ಕೊಂಡ ಯುವಪಿಳಿಗೆ ತಮಗೆ ಬೇಕಾದ ಅಡುಗೆ, ವಸ್ತ್ರವಿನ್ಯಾಸ, ಆರೋಗ್ಯ ಸಲಹೆ ಸೇರಿದಂತೆ ಎಲ್ಲವು ನೋಡಿಕೊಂಡು ಅನುಸರಿಸುತ್ತಾರೆ. ಅದರಂತೆ youtube ನಲ್ಲಿ ಹೆರಿಗೆ ಮಾಡಿಕೊಳ್ಳುವ ವೀಡಿಯೊ ಇಟ್ಟುಕೊಂಡ ಯುವತಿಯೊಬ್ಬಳು ತನ್ನ ಹೇರಿಗೆಯನ್ನೇ ತಾನು ಮಾಡಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಏನಿದು ಘಟನೆ?

ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಯೂ ಟ್ಯೂಬ್‌ ನಲ್ಲಿ ಹೆರಿಗೆಯ ವೀಡಿಯೊವನ್ನು ವೀಕ್ಷಿಸುತ್ತಾ ಸ್ವತಃ ಹೆರಿಗೆಗೆ ಯತ್ನಿಸಿದ 26ರ ಹರೆಯದ ಅವಿವಾಹಿತ ಮಹಿಳೆ ಮೃತಪಟ್ಟಿದ್ದಾಳೆ. ಯುವತಿ ಮದುವೆಗೆ ಮೊದಲೇ ತಾಯಿಯಾಗಿರುವ ಕಾರಣ ಮನೆಯವರ ಮತ್ತು ನೆರೆಹೊರೆಯ ಜನರ ಭೀತಿಯಲ್ಲಿ ಸ್ವತಃ ಹೆರಿಗೆಗೆ ಯತ್ನಿಸಿರುವ ಶಂಕೆ ಇದೆ ಎಂದು ತಿಳಿದಿದೆ. ಮತ್ತು ಯುವತಿಯ ಬಳಿ ಇದ್ದ ಮೊಬೈಲ್-ನಲ್ಲಿ ಸ್ವತಃ ಮಗುವನ್ನು ಪ್ರಸವಿಸುವುದು ಹೇಗೆಂಬ ವಿಡಿಯೋ, ಅದೇ ರೀತಿಯ ಇತರ ಸುರಕ್ಷಿತ ಹೆರಿಗೆಯ ವಿಡಿಯೋವನ್ನು ಯೂ ಟ್ಯೂಬ್‌ನಲ್ಲಿ ವೀಕ್ಷಿಸಿರುವ ವಿಚಾರ ಆಕೆ ಬಳಸುತ್ತಿರುವ ಸ್ಮಾರ್ಟ್ ಫೋನ್ ಮೂಲಕ ಗೊತ್ತಾಗಿದೆ. ಮಹಿಳೆಯ ಮೃತದೇಹದ ಬಳಿ ಕತ್ತರಿ, ಬ್ಲೇಡ್ ಹಾಗೂ ಕೆಲವು ದಾರಗಳು ಪತ್ತೆಯಾಗಿವೆ. ಮಹಿಳೆ ಯೂ ಟ್ಯೂಬ್‌ನ್ನು ವೀಕ್ಷಿಸಿ ಮಗುವಿಗೆ ಜನ್ಮ ನೀಡಲು ಯತ್ನಿಸಿರುವುದು ಪ್ರಾಥಮಿಕ ಪುರಾವೆಯಿಂದ ತಿಳಿದುಬಂದಿದೆ.

ಈ ಘಟನೆ ತಿಳಿದಿದ್ದು ಹೇಗೆ?

ಸೋಮವಾರ ಬೆಳಗ್ಗೆ ನೆರಮನೆಯವರು ಈಕೆಯ ಮನೆ ಬಳಿ ಬಂದಾಗ ಕೋಣೆಯಿಂದ ರಕ್ತ ಹರಿದು ಬರುತ್ತಿರುವುದನ್ನು ಗಮನಿಸಿ ಆಕೆಯ ಬಾಡಿಗೆ ಮನೆ ಮಾಲೀಕನಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆ ಮಾಲೀಕ ಬಂದು ಬಾಗಿಲನ್ನು ಒಡೆದಾಗ ತಾಯಿ ಮತ್ತು ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದರು. ತಾಯಿ ಮತ್ತು ಮಗುವಿನ ಪ್ರಾಣ ಹೋಗಿರುವುದನ್ನು ಮನಗಂಡ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದು, ಬಳಿಕ ಶವವನ್ನು ಯುವತಿಯ ಮನೆಯವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also read: ಗಂಡು ಮಗುವಿಗೆ ಜನ್ಮ ನೀಡಿದ ತೃತೀಯ ಲಿಂಗಿ; ತಾಯ್ತನ ಅನ್ನೋದು ಕೇವಲ ಹೆಣ್ಣಿಗೆ ಮಾತ್ರ ಸೀಮಿತವಲ್ಲ ಎನ್ನುವ ಕಾಲ ಬಂದಾಯಿತು..

ಯುವತಿ ಸರ್ಕಾರಿ ನೌಕರಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಬಂದಿದಳು ಇವಳು ಒಬ್ಬಳೇ ಇರುವುದಾಗಿ ಬಾಡಿಗೆ ರೂಮ್ ಪದೆದುಕೊಂಡಿದಳು. ಕೆಲ ದಿನಗಳಿಂದ ಸುಮಾರು ಮನೆಗಳನ್ನು ಬದಲಾಯಿಸುತ ಬಂದಿದ ಯುವತಿ ಮೊನ್ನೆ ಮನೆಯ ಮಾಲಿಕರಿಗೆ ತನ್ನ ತಾಯಿ ಬರುತ್ತಿದ್ದಾರೆ ಎಂದು ತಿಳಿಸಿದ್ದಳು. ಮತ್ತು ಯುವತಿ ಕೆಲವು ದಿನಗಳಿಂದ ಹೆಚ್ಚಾಗಿ ಹೊರಗೆ ಬರುತ್ತಿರಲಿಲ್ಲ ಎಂದು ಮನೆಯ ಮಾಲೀಕ ತಿಳಿಸಿದ್ದಾನೆ. ಯುವತಿಯು ಗರ್ಭಿಣಿಯಾಗಲು ಕಾರಣ ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಆಕೆಯ ಮನೆಯವರು ಯಾರ ಮೇಲೆಯೂ ಅನುಮಾನ ವಿಲ್ಲ ಎಂದು ತಿಳಿಸಿದ್ದಾರೆ.