ವಾಹನ ಸವಾರರ ವಿರೋಧಕ್ಕೆ ಮಣಿದ ಸರ್ಕಾರ; ತಕ್ಷಣದಿಂದಲೇ ಹಳೆಯ ದಂಡ ವಿಧಿಸಲು ಆದೇಶ..!

0
267

ಕೇಂದ್ರ ಸರ್ಕಾರದ ಸಂಚಾರ ನಿಯಮ ಉಲ್ಲಂಘನೆಯ ದಂಡ ದೇಶದ ಜನರಿಗೆ ನಿದ್ದೆಗೆಡಿಸಿದೆ, ಇದರಿಂದ ರಾಜ್ಯದಲ್ಲಿ ಭಾರಿ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ತಕ್ಷಣವೇ ಇಳಿಸಲು ನಿರ್ಧರಿಸಿದ್ದು, ಸೆ. 4 ಕ್ಕೂ ಹಿಂದೆ ಇದ್ದ ನಿಯಮವನ್ನೇ ಮುಂದುವರಿಸಿದೆ. ಇದರಿಂದ ವಾಹನ ಸವಾರರು ನಿರಾಳರಾಗಿದ್ದು, ಬೆಂಗಳೂರು ಸೇರಿದಂತೆ ಹಲವು ನಗರ ಮತ್ತು ಪಟ್ಟಣಗಳಲ್ಲಿ ಶುಕ್ರವಾರ ದಂಡ ವಸೂಲಿ ಕಾರ್ಯಾಚರಣೆಗೆ ಕಡಿಮೆಯಾಗಿದೆ.

Also read: ದೊಡ್ಡ ನಗರಗಳಲ್ಲಿ ಪ್ಲಾಟ್ ಖರೀದಿಸುವ ಮುನ್ನ ಈ ಕತೆ ಓದಿ; ಹಣ ನೀಡಿ ಹತ್ತು ವರ್ಷ ಹೋರಾಡಿ ಪ್ಲಾಟ್ ಪಡೆದ ಜನರ ಪರಿಸ್ಥಿತಿ ಹೇಗಿದೆ ನೋಡಿ.!

ಹೌದು ನಿನ್ನೆ ದುಬಾರಿ ದಂಡದ ವಿಚಾರವಾಗಿ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಹೊಸ ಟ್ರಾಫಿಕ್ ದಂಡದ ಮೊತ್ತವನ್ನು ಕಡಿಮೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಹಳೆಯ ದಂಡವನ್ನು ತೆಗೆದುಕೊಳ್ಳಬೇಕು ಎಂದು ಟ್ರಾಫಿಕ್ ಪೊಲೀಸರಿಗೆ ಮೌಖಿಕ ಆದೇಶ ನೀಡಿದೆ. ಆದರೆ ಈ ಆದೇಶವು ಪೊಲೀಸರಿಗೆ ಇನ್ನೂ ಕೂಡ ತಲುಪಿಲ್ಲವಂತೆ. ಅಷ್ಟೇ ಅಲ್ಲದೆ ದಂಡದ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದು, ಪೊಲೀಸರು ಹೊಸ ದಂಡವನ್ನೇ ಪಡೆಯುತ್ತಿದ್ದಾರೆ. ಇದು ಪೊಲೀಸ್ ಮತ್ತು ರಾಜಕೀಯದ ಕಣ್ಣುಮುಚ್ಚಾಲೆ ಆಟ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹಳೆ ದಂಡ ವಿಧಿಸಲು ಆದೇಶ?

ಎರಡು ದಿನಗಳ ಹಿಂದೆ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದಂಡ ಪ್ರಮಾಣದ ಹೊರೆಯನ್ನು ತಗ್ಗಿಸಬೇಕು. ಇದಕ್ಕಾಗಿ ಗುಜರಾತ್‌ ಮಾದರಿಯ ಪರಿಷ್ಕರಣೆಗೆ ಆದೇಶ ಪ್ರತಿಗಳನ್ನು ತರಿಸಿ ಅಧ್ಯಯನ ನಡೆಸಿ ಎಂದೂ ಸಲಹೆ ನೀಡಿದ್ದರು. ಈ ಕುರಿತು ಮಾತನಾಡಿದ ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಗುಜರಾತ್‌ ಮತ್ತು ಇತರ ರಾಜ್ಯಗಳಲ್ಲಿ ಸಂಚಾರ ನಿಯಮ ದಂಡ ಪ್ರಮಾಣ ಪರಿಷ್ಕರಣೆಯ ಆದೇಶ ಪ್ರತಿಗಳನ್ನು ತರಿಸಿ, ಅಧ್ಯಯನ ನಡೆಸಲಾಗುವುದು. ಆ ಬಳಿಕವೇ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಪರಿಷ್ಕೃತ ದಂಡ ನಿಯಮವನ್ನು ಜಾರಿಗೆ ಬರುವ ತನಕ ಇಂದಿನಿಂದಲೇ ಹಿಂದಿನ ನಿಯಮವೇ ಮುಂದುವರಿಯಲಿದೆ. ದಂಡ ನಿಯಮ ಪರಿಷ್ಕರಣೆಗೆ ಕಾಲಮಿತಿ ಹಾಕಿಕೊಂಡಿಲ್ಲ’ ಎಂದಿದ್ದಾರೆ.

Also read: ಚಿಕನ್ ಪ್ರಿಯರೆ ಎಚ್ಚರ; ಬೆಂಗಳೂರಿನಲ್ಲಿ ರೋಗದಿಂದ ಸತ್ತ ಕೋಳಿ ಮಾಂಸದಿಂದ ತಯಾರಾಗುತ್ತೆ ಚಿಕನ್ ಕಬಾಬ್..!

ಹಳೆ ದಂಡವೆಷ್ಟು?

ಹಳೆಯ ದಂಡದಲ್ಲಿ ರಸ್ತೆ ನಿಯಮ ಉಲ್ಲಂಘನೆಗೆ 100 ರೂ., ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಗೆ 100 ರೂ, ಪರವಾನಿಗೆ ಇಲ್ಲದೆ ವಾಹನ ಚಾಲನೆಗೆ 1,000 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ 500 ರೂ. ಹಾಗೂ ಅತಿವೇಗಕ್ಕೆ 400 ರೂ. ವಿಧಿಸಲಾಗುತ್ತಿತ್ತು. ಜೊತೆಗೆ ಮದ್ಯ ಸೇವಿಸಿ ವಾಹನ ಚಾಲನೆಗೆ 2,500 ರೂ., ವೇಗ ಮತ್ತು ರೇಸಿಂಗ್‍ಗೆ 500 ರೂ., ಸೀಟ್ ಬೆಲ್ಟ್ 100 ರೂ. ಹಾಗೂ ಇನ್ಸೂರೆನ್ಸ್ ಇಲ್ಲದಿದ್ದರೆ 1000 ರೂ. ದಂಡದ ಮೊತ್ತ ಇದನ್ನೇ ಮುಂದುವರೆಸಲು ಸಾರಿಗೆ ಸಚಿವರು ತಿಳಿಸಿದ್ದಾರೆ.

ಈ ನಿಯಮ ತಾತ್ಕಾಲಿಕ?

Also read: ಖಾಲಿ ಇರುವ 16,838 ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ; ಅಭ್ಯರ್ಥಿಗಳು ಇಂದಿನಿಂದಲೇ ಸಜ್ಜಾಗಿ.!

ರಾಜ್ಯದಲ್ಲಿ ಜುಲೈನಲ್ಲಿ ಕೆಲವು ರೀತಿಯ ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಆ ದಂಡದ ಪ್ರಮಾಣವೇ ಮುಂದುವರಿಯಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ‘ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019’ ಕ್ಕೆ ಸಂಸತ್ತು ಒಪ್ಪಿಗೆ ನೀಡಿತ್ತು. ಈ ಕಾನೂನು ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಆದರೆ ದಂಡವನ್ನ ಕಡಿಮೆ ಮಾಡುವ ಪ್ರಸ್ತಾವನೆ ಬಂದಿಲ್ಲ. ಸರ್ಕಾರದ ಆದೇಶ ಬಂದ ಮೇಲೆ ಆದೇಶದಲ್ಲಿ ಏನಿರುತ್ತೆ ನೋಡಿಕೊಂಡು ಟ್ರಾಫಿಕ್ ಪೈನ್‍ನಲ್ಲಿ ಬದಲಾವಣೆ ಮಾಡುತ್ತೇವೆ. ಆದೇಶ ಬರುವವರೆಗೂ ದಂಡದಲ್ಲಿ ಯಾವುದೇ ಬದಲಾವಣೆ ಸದ್ಯಕ್ಕಿಲ್ಲ. ಸಾರಿಗೆ ಸಚಿವರು ಹೇಳಿಕೆ ಕೊಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಮಾದಲ್ಲಿ ಆಗುವ ಸಣ್ಣ ಪುಟ್ಟ ವೈಲೇಷನ್‍ಗಳಿಗೆ ನೋಡಿ ದಂಡ ಪ್ರಯೋಗ ಮಾಡುವಂತೆ ಹೇಳಿದ್ದಾರೆ. ಅದನ್ನು ಮಾಡಲು ಟ್ರಾಫಿಕ್ ಪೊಲೀಸರಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.