ಆಧಾರ್ ಕಾರ್ಡ್-ನಲ್ಲಿ ವಿಳಾಸ ಬದಲಿಸಲು ಆಧಾರ್ ಕೇಂದ್ರಕ್ಕೇ ಹೋಗಿ ಗಂಟೆಗಟ್ಟಲೆ ಕಾದು ನಿಲ್ಲಬೇಕಿಲ್ಲ; ನೀವೇ ಆನ್ಲೈನ್ ಮೂಲಕ ಬದಲಾಯಿಸಬಹುದು!

0
4580

ಇತ್ತೀಚಿಗೆ ಆಧಾರ್ ಕಾರ್ಡ್ ಎಲ್ಲದಕ್ಕೂ ಬೇಕಾದ ಪ್ರಮುಖ್ಯ ಆಧಾರವಾಗಿದೆ. ಇದು ಗುರುತಿನ ಚೀಟಿಯೂ ಹೌದು, ನಮ್ಮ ವಿಳಾಸದ ಖಾತರಿ ದಾಖಲೆಯೂ ಹೌದು. ಹೀಗಾಗಿ ಆಧಾರ್‌ ಕಾರ್ಡ್‌ನಲ್ಲಿ ಹೆಸರು, ವಿಳಾಸ ಎಲ್ಲವೂ ಸರಿಯಾಗಿರುವಂತೆ ನೋಡಿಕೊಳ್ಳುವುದು ಬಹುಮುಖ್ಯವಾಗಿದೆ. ಅದರಂತೆ ಏನೇ ಬದಲಾವಣೆ ಇದ್ದರೂ ಕೂಡ ಆಧಾರ್ ಸೇವಾ ಕೇಂದ್ರಗಳಿಗೆ ತೆರಳಲೇಬೇಕು. ಆದರೆ, ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಿಸಲು ಮಾತ್ರ ಆಧಾರ್ ಕೇಂದ್ರಕ್ಕೇ ಹೋಗಬೇಕಿಲ್ಲ. ಆನ್ಲೈನ್ ಮೂಲಕವೇ ವಿಳಾಸವನ್ನು ಬದಲಿಸಬಹುದು.

ಆನ್ಲೈನ್ ಮೂಲಕ ಆಧಾರ್ ತಿದ್ದುಪಡಿ?

ಹೌದು ಆಧಾರ್ ಕಾರ್ಡ್ ಮಾಡಿಸಿದ ನಂತರ ಹಲವು ಕಾರಣಗಳಿಂದ ವಿಳಾಸ ಬದಲಾಯಿಸಬೇಕಾಗುತ್ತೆ. ಅದರಲ್ಲಿ ಹೆಸರು, ಲಿಂಗ, ಮೊಬೈಲ್‌ ಸಂಖ್ಯೆ, ಜನ್ಮ ದಿನಾಂಕ, ಸೇರಿದಂತೆ ಏನೇ ಬದಲಾವಣೆ ಮಾಡಲು ಖುದ್ದಾಗಿ ಆಧಾರ್ ಕೇಂದ್ರಕ್ಕೇ ಹೋಗಬೇಕು. ಆದರೆ ವಿಳಾಸವನ್ನು ಮಾತ್ರ ನಿಮ್ಮ ಮನೆಯಲ್ಲೇ ಕುಳಿತು ಬದಲಾವಣೆ ಮಾಡಿಕೊಳಬಹುದು. ಇದರಿಂದ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಅಗತ್ಯ ಇರುವುದಿಲ್ಲ. ಅಷ್ಟೇಅಲ್ಲದೆ ಕಡಿಮೆ ಸಮಯದಲ್ಲಿ ನೀವು ಪ್ರಸ್ತುತ ಎಲ್ಲಿ ವಾಸವಿರುತ್ತಿರೋ ಅಲ್ಲಿಯ ವಿಳಾಸವನ್ನು ನಿಮ್ಮ ಆಧಾರ್ ಕಾರ್ಡ್‌ನೊಳಗೆ ಸುಲಭವಾಗಿ ಮತ್ತು ಉಚಿತವಾಗಿ ಸೇರಿಸಿಬಿಡಬಹುದು.

ವಿಳಾಸ ಬದಲಾವಣೆ ಹೇಗೆ?

ಆನ್‌ಲೈನಿನಲ್ಲಿ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಿಸುವ ಮೊದಲು ಕೆಲ ಮಾಹಿತಿಗಳನ್ನು ತಿಳಿದಿರಬೇಕು. ಆಧಾರ್ ಕಾರ್ಡ್ ವಿಳಾಸವನ್ನು ಬದಲಿಸಲು ಕೆಲವೊಂದು ದಾಖಲೆಗಳು ಮತ್ತು ಮೊಬೈಲ್ ಸಂಪರ್ಕ ಇರುವುದು ಕಡ್ಡಾಯ. ಒಂದು ವೇಳೆ ನಿಮ್ಮ ಹೆಸರಿನಲ್ಲಿ ವಿಳಾಸದ ದೃಢೀಕರಣಕ್ಕಾಗಿ ಯಾವುದೇ ಒಂದು ದಾಖಲೆ ಕೂಡ ಇಲ್ಲದಿದ್ದರೂ ಸಹ ನೀವು ಚಿಂತಿಸಬೇಕಿಲ್ಲ. ದೃಢೀಕರಣ ಪತ್ರ ಪ್ರಕ್ರಿಯೆ ವಿಳಾಸ ಬದಲಿಸಬಹುದು. ರೇಷನ್ ಕಾರ್ಡ್‌, ಬ್ಯಾಂಕ್‌ ಸ್ಟೇಟ್‌ಮೆಂಟ್‌, ಪಾಸ್‌ಪೋರ್ಟ್‌, ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್‌, ಇತ್ತೀಚಿನ ವಿದ್ಯುತ್‌ ಬಿಲ್‌, ಇತ್ತೀಚಿನ ಅಡುಗೆ ಅನಿಲ ಸಂಪರ್ಕಬಿಲ್, ನೀರಿನ ಬಿಲ್‌, ನರೇಗಾ ಜಾಬ್ ಕಾರ್ಡ್‌, ಇನ್ಷೂರೆನ್ಸ್ ಪಾಲಿಸಿ ಮತ್ತು ಕಿಸಾನ್ ಪಾಸ್‌ಬುಕ್‌ ದಾಖಲೆಗಳಲ್ಲಿ ಒಂದು ದಾಖಲೆ ಬೇಕಿರುತ್ತದೆ.

ವಿಳಾಸದ ದಾಖಲೆಗಳು ಇಲ್ಲದಿದ್ದರೆ?

ದೃಢೀಕರಣಕ್ಕಾಗಿ ಯಾವುದೇ ಒಂದು ದಾಖಲೆ ಇಲ್ಲದಿದ್ದರೂ ನಡೆಯುತ್ತೆ ಅದು. ನೀವು ವಾಸ್ತವ್ಯದಲ್ಲಿರುವ ಮನೆ ಮಾಲೀಕರಿಂದ ದೃಢೀಕರಣ ಪತ್ರ ಪಡೆಯಬಹುದು. ಅವರಿಂದ ಒಪ್ಪಿಗೆ ಪಡೆದ ನಂತರ ಯುಐಡಿಎಐ ವೆಬ್‌ ಸೈಟ್‌ಗೆ ತೆರಳಿ ‘ವಿಳಾಸ ದೃಢೀಕರಣ ಪತ್ರ’ ಸೃಷ್ಟಿಸಬಹುದು. ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ಅಡ್ರೆಸ್‌ ವ್ಯಾಲಿಡೇಶನ್ ಲೆಟರ್‌ ಪ್ರಕ್ರಿಯೆ ಆರಂಭಿಸಿದ ನಂತರ ವಿಳಾಸ ದೃಢೀಕರಣ ಮಾಡುವವರ ವಿಳಾಸಕ್ಕೆ ರಹಸ್ಯ ಕೋಡ್‌ ರವಾನೆಯಾಗುತ್ತದೆ. ದೃಢೀಕರಣ ಮಾಡುವವರು ಅಂಚೆ ಮೂಲಕ ವಿಳಾಸ ದೃಢೀರಣ ಪತ್ರ ಪಡೆದ ನಂತರ ಮತ್ತೆ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ರಹಸ್ಯ ಕೋಡ್‌ ಅನ್ನು ನಮೂದಿಸಿ ವಿಳಾಸವನ್ನು ಪರಿಷ್ಕರಿಸಬಹುದು.

ಮೊಬೈಲ್ ನಂ ಬೇಕೇಬೇಕು?

ನೀವು ಆಧಾರ್ ಕಾರ್ಡ್‌ ವಿಳಾಸವನ್ನು ಬದಲಿಸಲು ನಿಮ್ಮ ಆಧಾರ್ ಕಾರ್ಡ್‌ಗೆ ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಸಂಖ್ಯೆ ನೋಂದಣಿಯಾಗಿರಬೇಕು.

ವಿಳಾಸ ಬದಲಾವಣೆ ಈ ರೀತಿಯಲ್ಲಿ ಮಾಡಬಹುದು:
1. ಆಧಾರ್‌ ವೆಬ್‌ಸೈಟ್‌ https://uidai.gov.in ನಲ್ಲಿ ಲಾಗಿನ್‌ ಆಗಿ.
2. ಮೈ ಆಧಾರ್ ಕ್ಲಿಕ್ಕಿಸಿ-ಅಪ್‌ಡೇಟ್‌ ಯುವರ್ ಅಡ್ರೆಸ್‌ಗೆ ತೆರಳಿ.
3. ಅಪ್‌ಡೇಟ್‌ ಯುವರ್‌ ಅಡ್ರೆಸ್‌ ಪುಟದಲ್ಲಿ ನಿಮಗೆ ಬೇಕಾದ ಎಲ್ಲ ವಿವರಗಳು ಲಭ್ಯ.
4. ಪ್ರೊಸೀಡ್ ಟು ಅಪ್‌ಡೇಟ್‌ ಅಡ್ರೆಸ್‌ ಕ್ಲಿಕ್ಕಿಸಿ
5. 12 ಅಂಕಿಗಳ ಆಧಾರ್ ಸಂಖ್ಯೆ, ಕ್ಯಾಪ್ಚಾ ವೆರಿಫಿಕೇಶನ್ ಆದ ನಂತರ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನೂ ನಮೂದಿಸಿ.
6. ವಿಳಾಸದ ವಿವರಗಳನ್ನು ಭರ್ತಿಗೊಳಿಸಿರಿ. ಸಂಬಂಧಿಸಿದ ದಾಖಲೆಯ ಮೂಲಪ್ರತಿಯನ್ನು ಮೊದಲೇ ಸ್ಕ್ಯಾ‌ನ್‌ ಮಾಡಿ ಅಪ್‌ಲೋಡ್‌ ಮಾಡಿ.
7. ವಿವರಗಳನ್ನು ಸಲ್ಲಿಸಿದ ನಂತರ ನಿಮ್ಮ ಮೊಬೈಲ್‌ಗೆ ‘ಅಪ್‌ಡೇಟ್‌ ರಿಕ್ವೆಸ್ಟ್ ನಂಬರ್‌’ ಬರುತ್ತದೆ.
8. ಅಪ್ರೂವ್ ಆದ ಬಳಿಕ ಹಾಗೂ ಪರಿಷ್ಕರಣೆ ಆದ ನಂತರ ಕೂಡ ಮೊಬೈಲ್‌ಗೆ ಮೆಸೇಜ್ ಬರುತ್ತದೆ.
9. ಆನ್‌ಲೈನ್‌ ಮೂಲಕ ಇ ಆಧಾರ್ ಅನ್ನು ಡೌನ್‌ಲೋಡ್‌ ಮಾಡಬಹುದು.
10. ಕೆಲ ದಿನಗಳಲ್ಲಿ ಅಂಚೆ ಮೂಲಕ ಪರಿಷ್ಕೃತ ಆಧಾರ್‌ ಕಾರ್ಡ್‌ ನಿಮ್ಮ ಕೈ ಸೇರುತ್ತದೆ.