ಕೆಪಿಜೆಪಿ ಗೆ ಅಭ್ಯರ್ಥಿಗಳನ್ನು ಸೆಳೆಯಲು ಉಪ್ಪಿಯ ವಿನೂತನ ಪ್ರಯೋಗ , ಏನಪ್ಪಾ ಅದು ಅಂತೀರಾ ನೀವೇ ನೋಡಿ…

0
385

ನಟನೆ ಮತ್ತು ನಿರ್ದೇಶಣೆಯಲ್ಲಿ ದೊಡ್ಡ ಯಶಸ್ಸು ಕಂಡ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಈಗ ರಾಜಕೀಯದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿ , ಹೊಸ ಪಕ್ಷ ಸ್ಥಾಪಿಸಿರೋದು ನಿಮಗೆಲ್ಲ ಗೊತ್ತಿರೊ ವಿಚಾರ. ಕನ್ನಡ , ತೆಲುಗು , ತಮಿಳು ಹೀಗೆ ಯಾವಾಗಲು ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ , ಬೇರೆ ಬೇರೆ ಪಾತ್ರಗಳ ಮತ್ತು ಗೆಟಪ್-ಗಳ ಮೂಲಕ ಎನಾದರೂ ಹೊಸತಾಗಿ ಮಾಡುತ್ತಿರುತ್ತಾರೆ ಉಪೇಂದ್ರ.

ಕರ್ನಾಟಕದಲ್ಲಿ ೨೦೧೮ ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹೊಸ ವಿಚಾರಗಳೊಂದಿಗೆ ಪಕ್ಷ ಸ್ಥಾಪಿಸಿರುವ ರಿಯಲ್‌ ಸ್ಟಾರ್‌‌ ಉಪೇಂದ್ರ ಪಕ್ಷದ ಅಭ್ಯರ್ಥಿಯಾಗಲು ಬಯಸುವ ಆಕಾಂಕ್ಷಿಗಳನ್ನು ಸಹ ತುಂಬ , ರಿಯಲ್ ಆಗಿ ,ವಿಶಿಷ್ಟವಾಗಿ ಆಹ್ವಾನಿಸಿದ್ದಾರೆ. ಈಗ ತಮ್ಮ ಕೆಪಿಜೆಪಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲೂ ಸಹ ಅವರು ಎಲ್ಲರ ಹಾಗೆ ಯೋಚಿಸದೆ ತುಂಬ ವಿನೂತನವಾಗಿ ಯೋಚಿಸಿದ್ದಾರೆ ಅದು ಹೇಗೆ ಅಂತೀರಾ ಮುಂದೆ ನೀವೇ ನೋಡಿ.

ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತರ ಪಕ್ಷ  ಕಣಕ್ಕಿಳಿಸಲು ಹೊಸ ಮಾರ್ಗವನ್ನು ಅನುಸರಿಸುತ್ತಿದೆ. ಅದಕ್ಕಾಗಿ ವೆಬ್‌ಸೈಟ್ ರೂಪಿಸಿದ್ದು ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ಕೆಪಿಜೆಪಿಯಿಂದ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಬಯಸುವವರಿಗೆ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಆಹ್ವಾನಿಸಿದ್ದಾರೆ ಉಪ್ಪಿ. ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ. ೨೨೪ ಮತ ಕ್ಷೇತ್ರಗಳಿಂದ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು , ಇದು ಉಪೇಂದ್ರ ಅವರ ಹೊಸ ಪ್ಲಾನ್.ಈ ಬಗ್ಗೆ ಅವರು ಪ್ರೆಸ್‌ ಕ್ಲಬ್‌ನಲ್ಲಿ ಪಕ್ಷದ ಆ್ಯಪ್ ಮತ್ತು ವೆಬ್‌ಸೈಟ್ ಪ್ರಜಾಕೀಯವನ್ನು ಬಿಡುಗಡೆ ಮಾಡಿದರು. ನಂತರ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ ವೇದಿಕೆಯಲ್ಲಿ ಖಾಲಿ ಆಸನ ಇಟ್ಟು ಇಲ್ಲಿ ಪಕ್ಷದ ಪದಾಧಿಕಾರಿಗಳು ಕುಳಿತುಕೊಳ್ಳಲ್ಲ, ಅಭ್ಯರ್ಥಿಗಳಿಗಾಗಿ ಈ ಆಸನ ಎಂದು ಹೊಸ ಆಲೋಚನೆ‌ ಬಿಚ್ಚಿಟ್ಟರು. ಯಾವುದಾದರೊಂದು ಪಕ್ಷದಿಂದ ಸ್ಪರ್ದಿಸಿದರೆ ಸಾಕು ಕೋಟಿ ಕೋಟಿ ಪಾರ್ಟಿ ಫಂಡ್ ಗಳಿಸಬಹುದು ಎಂಬ ವಿಚಾರವನ್ನು ಸಂಪೂರ್ಣವಾಗಿ ಅಳಿಸಲು ತಮ್ಮ ಪಕ್ಷ ಶ್ರಮಿಸಲಿದೆ ಎಂದರು.

ನಮ್ಮ ಪಕ್ಷದ ಅಭ್ಯರ್ಥಿಯಾಗಲು ಯಾವುದೇ ವಿದ್ಯಾರ್ಹತೆ ಮಾನದಂಡವಲ್ಲ , ಅರ್ಹತೆಯೇ ಮಾನದಂಡ. ಹೆಬ್ಬೆಟ್ಟಿನಿಂದ ಡಾಕ್ಟರ್, ಇಂಜಿನಿಯರ್ ಹೀಗೆ ಯಾರು ಬೇಕಾದರೂ ಸ್ಪರ್ದಿಸಬಹುದು. ವೆಬ್‌ಸೈಟ್ ಗೊತ್ತಿಲ್ಲದವರು ನಮ್ಮ ಮನೆಗೆ ಅಥವಾ ಕಚೇರಿಗೆ ಬಂದು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಒಂದು ತಿಂಗಳ ಕಾಲಾವಕಾಶ ಇದೆ. ಅಷ್ಟರಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ನಮಗೂ ಅರ್ಜಿಗಳ ಪರಿಶೀಲಿಸಲು ಸಮಯ ಬೇಕು. ಲೈವ್ ಸಂದರ್ಶನದ ಮೂಲಕವೇ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದರು.

ನಮ್ಮ ಪಕ್ಷದ ಅಭ್ಯರ್ಥಿ ಆಗ ಬಯಸುವ ವ್ಯಕ್ತಿಗಳು ಅವರ ಕ್ಷೇತ್ರದ ಸಮಸ್ಯೆ ಕುರಿತು ಕ್ಷೇತ್ರದ ಜನರೊಂದಿಗೆ‌ ಚರ್ಚಿಸಿದ ಮಾಹಿತಿ ಇರುವ ವಿಡಿಯೋ ಕಳಿಸಬೇಕು. ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಸ್ಯೆ , ಪರಿಹಾರ, ಬಜೆಟ್ ಸೇರಿದಂತೆ ಸಂಪೂರ್ಣ ವಿವರ ಹಾಗೂ ಅವರ ಕಲ್ಪನೆ ಒಳಗೊಂಡ ರಫ್ ಎಸ್ಟಿಮೇಟ್ ಅನ್ನು ನಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಗ್ರಾಮ , ತಾಲೂಕು , ಜಿಲ್ಲಾ ಪಂಚಾಯತ್ , ಹಾಗೂ ವಿಧಾನಸಭೆ ಸೇರಿ ಎಲ್ಲದಕ್ಕೂ ಇದು ಅನ್ವಯವಾಗಲಿದೆ , ೨೨೪ ಕ್ಷೇತ್ರಗಳಿಂದ ಯಾರು ಬೇಕಾದರೂ ಬರಬಹುದು, ಅರ್ಜಿ ಸ್ವೀಕಾರವಾದರೆ, ಅವರ ವಿಚಾರ ನಮಗೆ ತೃಪ್ತಿಯಾದರೆ ಅವರೊಂದಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಒನ್ ಟು ಒನ್ ಸಂದರ್ಶನ ನಡೆಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.ನಾನು ಕುಂದಾಪುರದಿಂದ ಸ್ಪರ್ಧಿಸುತ್ತೇನೆ ಎನ್ನುವುದು ಸುಳ್ಳು , ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಅರ್ಜಿ ಸಲ್ಲಿಸುವವರಿಗೆ ಮೊದಲ ಅಧ್ಯತೆ, ನಾನು ನಂತರ ನಿರ್ಧರಿಸುತ್ತೇನೆ ಎಂದರು .

ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ , ಪಕ್ಷದ ಘೋಷಣೆಯ ಕಾರ್ಯಕ್ರಮಕ್ಕೆ ಪತ್ನಿಗೆ ಬೇಸರ ಆಗಬಾರದು ಅಂತ ಕರೆತಂದಿದೆ , ಆದರೆ ಅಷ್ಟಕ್ಕೇ ಕೆಲವರು ನಾನು ಕುಟುಂಬ ರಾಜಕಾರಣ ಆರಂಭಿಸಿದ್ದೇನೆ ಎಂದು ಆರೋಪಿಸಿದರು. ಹಾಗಾಗಿ ಇಂದು ನನ್ನ ಪತ್ನಿ ಸೇರಿ ಕುಟುಂಬದ ಯಾರನ್ನೂ ಕರೆ ತಂದಿಲ್ಲ ಎಂದರು. ಎಲ್ಲಾ ಕ್ಷೇತ್ರಗಳ ಅರ್ಜಿ ಪಡೆದು ಅದನ್ನು ಪರಿಶೀಲಿಸಿ ಸಮಸ್ಯೆ, ಪರಿಹಾರ, ಬಜೆಟ್ ಇತ್ಯಾದಿ ಒಳಗೊಂಡ ಸ್ಥಳೀಯ ಪ್ರಣಾಳಿಕೆ ಮಾಡಲಾಗುತ್ತದೆ. ಅದಕ್ಕೆ ಸಂಶೋಧನೆ ಮಾಡಿಯೇ ಸಿದ್ಧಪಡಿಸಲಾಗುತ್ತದೆ. ನಮ್ಮ ಕ್ಷೇತ್ರವಾರು ಪ್ರಣಾಳಿಕೆ, ಸ್ಥಳೀಯ ಮಟ್ಟಕ್ಕೆ ಏನು ಬೇಕು ಎನ್ನುವ ನಮ್ಮ ಪ್ರಯೋಗ ನೋಡಿ ಬೇರೆಯವರೂ ಅಳವಡಿಸಿಕೊಳ್ಳಬಹುದು. ಇದರಿಂದ ಸಮಾಜಕ್ಕೆ ಸಹಕಾರಿಯಾಗಲಿದೆ ಎಂದರು.

ಬೇರೆ ಪಕ್ಷಗಳ ಹಾಗೆ ನಾವು ಯಾವುದೇ ರ‍್ಯಾಲಿ ಮಾಡುವುದಿಲ್ಲ , ನಮ್ಮ ಪಕ್ಷದಲ್ಲಿ‌ ಜಿಲ್ಲಾ ಸಮಿತಿ ಇರುವುದಿಲ್ಲ , ಅಭ್ಯರ್ಥಿಗಳೇ ನಿಂತು ತಮ್ಮ ಸ್ವಂತ ಬಲದ ಮೇಲೆ ಗೆಲ್ಲಬೇಕು. ಅವರ ಪರಿಶ್ರಮ , ವಿಚಾರಗಳೇ ಅವರಿಗೆ ಶ್ರೀರಕ್ಷೆಯಾಗಲಿದೆ. ಮೀಡಿಯಾ ಮೂಲಕವೇ ನಾವು ಜನರನ್ನು ತಲುಪುತ್ತೇವೆ. ಮೀಸಲು ಕ್ಷೇತ್ರಗಳಿಗೂ ಇದೇ ಅನ್ವಯಿಸುತ್ತದೆ. ೫೦೦ಕ್ಕೂ ಹೆಚ್ಚು ಅರ್ಜಿ ಸಲ್ಲಿಸಲಾಗಿದೆ ಇವರಲ್ಲಿ ಅರ್ಹರನ್ನು ನಿಮ್ಮ ಮುಂದೇನೆ ಆಯ್ಕೆ ಮಾಡ್ತೇವೆ , ನಮಗೆ ಅಭ್ಯರ್ಥಿಗಳ ಕೊರತೆ ಆಗವುದಿಲ್ಲ ಎಂದರು.

 

ಇಷ್ಟೆಲ್ಲಾ ಉತ್ತಮ ನಡೆ , ಹೊಸ ವಿಚಾರ , ವಿನೂತನ ಪ್ರಚಾರ ಶೈಲಿ , ನೇರ ಸಂದರ್ಶನ , ಸ್ಥಳೀಯ ಪ್ರಣಾಳಿಕೆ ಉಪೇಂದ್ರ ಅವರನ್ನು ಗೆಲುವಿನ ದಡ ಮುಟ್ಟಿಸುವುದೇ ಕಾದು ನೋಡಬೇಕು…!