ಕರ್ನಾಟಕಕ್ಕೆ ಮತ್ತೊಂದು ಹೊಸ ಪಕ್ಷ ಕಾರ್ಮಿಕನಾಗಿ ಸ್ವಂತ ಪಕ್ಷ ಕಟ್ಟಲು ಮುನ್ನುಡಿ ಬರೆದ ನಟ ಉಪೇಂದ್ರ..!

0
643

​ಉಪೇಂದ್ರ ರಾಜಕೀಯ ಪ್ರವೇಶ ಅಧಿಕೃತವಾಗಿ ಮುನ್ನುಡಿ ಬರೆದಿದ್ದರೆ ಕರ್ನಾಟಕಕ್ಕೆ ಹೊಸ ಪಕ್ಷ ಕಟ್ಟಿದ ಉಪ್ಪಿ ತಮ್ಮ ಪಕ್ಷದ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳನ್ನು ತಮ್ಮ ಸುದ್ದಿಗೋಷ್ಠಿನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಜಕೀಯದ ತಮ್ಮ ಹೊಸ ಪಕ್ಷದ ಹಲವು ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಕೀಲಿ ಕೈ ರಾಜರ ಬಳಿ ಇರಬಾರದು. ಪ್ರಜೆಗಳ ಬಳಿ ಕೀ ಇರಬೇಕು. ಆದ್ದರಿಂದ ರಾಜ‘ಕೀ’ಯ ಬೇಡ. ಪ್ರಜಾ‘ಕೀ’ಯ ಬೇಕು ರಾಜಕಾರಣಿಗಳು ನಾಯಕರೂ ಅಲ್ಲ. ಸಮಾಜ ಸೇವಕರೂ ಅಲ್ಲ. ಪ್ರಜೆಗಳ ನೌಕರರು. ಪ್ರಜೆಗಳಿಗೆ ಉತ್ತರಿಸಬೇಕಾದದ್ದು ಅವರ ಕರ್ತವ್ಯ ಮತ್ತು ಮನೆಯ ನೌಕರರನ್ನು ನೇಮಿಸಿಕೊಳ್ಳುವ ರೀತಿಯಲ್ಲಿ ಇಂಟರ್​ವ್ಯೂ ಹಾಗೂ ಪರೀಕ್ಷೆ ಮಾಡಿ ಚೆನ್ನಾಗಿ ಉತ್ತರ ಬರೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.

source:TeluguMirchi

ಗೆದ್ದ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲೇ ಇದ್ದು ಸಮಸ್ಯೆಗಳನ್ನು ಬಗೆಹರಿಸಬೇಕು. ಆ ಮೂಲಕ ವೆಬ್‌ಸೈಟ್ , ಸಾಮಾಜಿಕ ಜಾಲತಾಣಗಳಲ್ಲಿ ಪ್ರಜೆಗಳಿಗೆ ತಿಳಿಸಬೇಕು. ವಿಧಾನಸೌಧ ಒಂದು ಟಿವಿ ಸಂಸ್ಥೆಯಂತೆಯೂ, ಎಂಎಲ್‌ಎಗಳು ಅದರ ವರದಿಗಾರರಂತೆಯೂ ಕೆಲಸ ಮಾಡಬೇಕು. ದುಡ್ಡು , ಪಾರ್ಟಿ ಫಂಡ್‌ಗಳಿಂದ ಭ್ರಷ್ಟಾಚಾರ ಆರಂಭವಾಗುತ್ತೆ. ಅದಕ್ಕೆ, ಅಭ್ಯರ್ಥಿಗಳು ಕ್ಷೇತ್ರದಲ್ಲಿ ನೇರ ಸಂಚಾರದ ಮೂಲಕ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಖರ್ಚಿಲ್ಲದೇ ಪ್ರಚಾರ ಮಾಡಬೇಕು.

ರಾಜಕೀಯ ನಾಯಕರ ಹುದ್ದೆಗೆ ಹೊಸ ವ್ಯಾಖ್ಯಾನ. ಅವರು ನಾಯಕರೂ ಅಲ್ಲ. ಸಮಾಜ ಸೇವಕರೂ ಅಲ್ಲ. ಅವರು ಪ್ರಜೆಗಳ ತೆರಿಗೆಯಿಂದ ಸಂಬಳ ಪಡೆಯುವ ನೌಕರರು ಅಭ್ಯರ್ಥಿಗಳ ಆಯ್ಕೆಗೆ ಪರೀಕ್ಷೆಯಿರುತ್ತದೆ. ಅವರು ಬರೆದ ಉತ್ತರ ಪತ್ರಿಕೆಯೇ ಸ್ಥಳೀಯ ಚುನಾವಣಾ ಪ್ರಣಾಳಿಕೆಯಾಗುತ್ತದೆ. ಆದ್ದರಿಂದ ಅಭ್ಯರ್ಥಿಯ ಆಯ್ಕೆ ವಿಧಾನವೇ ಬೇರೆ ಮತ್ತು ಹಣವೇ ಭ್ರಷ್ಟಾಚಾರದ ಮೂಲ. ಆದ್ದರಿಂದ ಪಾರ್ಟಿ ಫಂಡ್ ಇಲ್ಲ. ಪ್ರಚಾರಕ್ಕೆ ದುಡ್ಡು ಖರ್ಚಿಲ್ಲ. ನೇರ ಸಂಚಾರ ಹಾಗೂ ಸಾಮಾಜಿಕ ತಾಣಗಳು ಮತ್ತು ಮೊಬೈಲ್ ಮೂಲಕವೇ ಪ್ರಚಾರ.

ತಂತ್ರಜ್ಞಾನ ಎಲ್ಲ ಸಮಸ್ಯೆಗಳಿಗೂ ಉತ್ತರ. ಚುನಾವಣೆ ಪ್ರಚಾರ, ಗೆದ್ದ ಅಭ್ಯರ್ಥಿಗಳ ಕೆಲಸ ನಿರ್ವಹಣೆ, ಸರ್ಕಾರಿ ಕಾರ್ಯಕಲಾಪಗಳಿಗೆ, ವಿಡಿಯೋ ಕಾನ್ಫರೆನ್ಸ್, ಇಂಟರ್‌ನೆಟ್, ಮೊಬೈಲ್ ಹಾಗೂ ತಂತ್ರಜ್ಞಾನದ ವ್ಯಾಪಕ ಬಳಕೆ ಮಾಡಿಕೊಂಡು ನಮ್ಮ ಕರ್ನಾಟಕವನ್ನು ಬೆಳಸಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.