ಮೋದಿಗಿಂತ ಮುಂಚೆಯೇ ನಮ್ಮ “ಬುದ್ದಿವಂತ” ಉಪೇಂದ್ರರಿಗೆ ಹೊಳೆದಿತ್ತು ಈ ಐಡಿಯಾ!!!

0
3691

500 ,1000 ರೂಪಾಯಿ ಬ್ಯಾನ್ ಮಾಡೋ ಐಡಿಯಾ ಉಪೇಂದ್ರರವರಿಗೆ ಮೊದಲೇ ಇತ್ತು .
ಉಪೇಂದ್ರರವರು   ರೂಪತಾರ ಮಾಸಿಕ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಇದನ್ನು ಹೇಳಿಕೊಂಡಿದ್ದರು

b53de5ba-0990-4c1f-a96b-1fa83528950e

ಇಲ್ಲಿದೇ ಸಂದರ್ಶನದ ಆ ತುಣುಕು ಮುಂದೆ ಓದಿ
ಉಪೇಂದ್ರ :
ಎಲ್ಲರೂ ಸಂತೋಷದಿಂದಿರಬೇಕು ಅದಕ್ಕೇನಾದರೂ ಮಾಡಬೇಕು ಅಂತ ತುಂಬ ಸರಿ ಯೋಚಿಸಿದ್ದೀನಿ .
ನಾವು ಸುಮ್ಮನೆ ಸಿಟ್ಟಾಗುತ್ತೀವಿ , ದ್ವೇಷಿಸುತ್ತೇವೆ , ಸಂತೋಷ ,ನೆಮ್ಮದಿ ಕಳೆದುಕೊಳ್ಳುತ್ತೇವೆ , ನಮಗೆ ಸಂತೋಷವೇ ಇಲ್ಲದ ವಿಷಯಗಳಿಗೆ ಕಿತ್ತಾಡುತ್ತೇವೆ ,
ಹಾಗಿದ್ದರೆ ನಮಗೆ ಸಂತೋಷ ನೆಮ್ಮದಿ ಎಲ್ಲಿದೆ ?
ಎಲ್ಲರೂ ಸಂತೋಷವಾಗಿರುವಂತೆ ಮಾಡುವುದು ಹೇಗೆ ?
ಎಲ್ಲರಿಗೂ ಖುಷಿಯನ್ನು ಹಂಚುವುದು ಹೇಗೆ ?
ಇದು ಗೊತ್ತಾಗಬೇಕೆಂದರೆ ವ್ಯವಸ್ಥೆಯ ಬುಡಕ್ಕೆ ಕೈ ಹಾಕಬೇಕು .

upendra

ರಾಜಕೀಯ ನಾಯಕರ ,ಕಾರ್ಪೊರೇಟರ್ಗಳ ಬಳಿ ಆಗಾಗ ಮಾತನಾಡುತ್ತೇನೆ, ವ್ಯವಸ್ಥೆಯನ್ನು ಕ್ಲೀನ್ ಮಾಡುವುದು ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಅವರು ಹೇಳುತ್ತಾರೆ .

ಭ್ರಷ್ಟತೆಯನ್ನು ತಡೆಯುವವರು ಯಾರು ? ಅದು ಯಾರಿಗೂ ಗೊತ್ತಿಲ್ಲ .
ಭ್ರಷ್ಟತೆಯ ಮೂಲ ಯಾವುದು? ಅದೂ ಯಾರಿಗೂ ಗೊತ್ತಿಲ್ಲ .

ಹಾಗಿದ್ರೆ ಭ್ರಷ್ಟತೆ ತಡೆಯಲು ಐಡಿಯಾ ಏನು ?

ಪ್ಲಾಸ್ಟಿಕ್ ನೋಟ್ ಗಳನ್ನು ಪ್ರಿಂಟ್ ಮಾಡಿ , 500 , 1000 ರೂಪಾಯಿಗಳ ಚಲಾವಣೆ ನಿಲ್ಲಿಸಿ .
ಆಗ ತನಗೆ ತಾನೇ ಕಪ್ಪು ಹಣ ನಿಂತು ಹೋಗುತ್ತದೆ .
ಯಾರಿಗಾದರೂ ಒಂದು ಕೋಟಿ ರೂಪಾಯಿಯನ್ನು ನೂರರ ನೋಟುಗಳಲ್ಲಿ ಕೊಡಲು ಸಾಧ್ಯವೇ ? ನೂರು ರೂಪಾಯಿ ಹತ್ತು ಸಾವಿರ ಬಂಡಲುಗಳು ಬೇಕು , ಅದನ್ನು ಬಚ್ಚಿಡಲು ಎಷ್ಟೊಂದು ಜಾಗ ಬೇಕು ಆದ್ದರಿಂದ ಕಪ್ಪು ಹಣ ಬಚ್ಚಿಡಲು ಸಾಧ್ಯವೇ ಇಲ್ಲ !

9a34a706-ffa5-4888-bb38-8a9108f89fed

ಆದ್ದರಿಂದ ಪರಿಹಾರ ನಮ್ಮ ಕೈಯಲ್ಲೇ ಇದೆ ಅಮೇರಿಕಾದಂತಹ ದೊಡ್ಡ ದೇಶದಲ್ಲೇ 100 ಡಾಲರ್ ಗಿಂತ ಅಧಿಕ ಮೊತ್ತವನ್ನು ಕ್ಯಾಶ್ ನಲ್ಲಿ ಸ್ವೀಕಾರ ಮಾಡುವುದಿಲ್ಲ .
ಕಾರ್ಡ್ ಕೊಡಿ ಅಂತಾರೆ , ಕಾರ್ಡ್ ಇಲ್ಲ ಅಂದ್ರೆ ಕಾರ್ಡ್ ಸಹ ಮಾಡಿಸಿಕೊಡ್ತಾರೆ .
ಇಂತ ಬದಲಾವಣೆಗಳು ನಮ್ಮ ದೇಶದಲ್ಲೂ ಬರಬೇಕು , ಪ್ಲಾಸ್ಟಿಕ್ ಮನಿ ಬಂದರೆ ಜನರಿಗೆ ದುಡ್ಡಿನ ಮೇಲೆ ವ್ಯಾಮೋಹವು ಹೊರಟು ಹೋಗುತ್ತದೆ .

ಸೂಪರ್ ನಂತಹ ಅದ್ಭುತ ಸಿನಿಮಾ ಕೊಟ್ಟ ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರರವರ ಮಾತುಗಳಿವು , ಎಷ್ಟೊಂದು ದೂರದೃಷ್ಟಿ ಇದೆ ಇವರಿಗೆ ಅದಕ್ಕೆ ಅಲ್ವೇ ಇವರನ್ನ ರಿಯಲ್ ಸ್ಟಾರ್ ಅನ್ನೊದು , ಉಪ್ಪಿ ಗಿಂತ ರುಚಿ ಬೇರೆ ಇಲ್ಲ ಅಂತ ಫ್ಯಾನ್ಸ್ ಹಾಡೋದು , ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಪುಣ್ಯ ಮಾಡಿದೆ .

 

ಮಾಹಿತಿ ಕೃಪೆ : ರೂಪತಾರ