ಉಪ್ಪಿ ಎಲ್ಲ ವದಂತಿಗಳಿಗೆ ತೆರೆ ಎಳೆದು ತಾವೇ ಒಂದು ಹೊಸ ಪಕ್ಷ ಕಟ್ಟುತ್ತಿದ್ದಾರೆ ಗೊತ್ತೇ?

0
441

Kannada News | Karnataka News

ಪಕ್ಷದ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಇರಿಸಿದ ಬೇಡಿಕೆಗಳಿಗೆ ಉಪೇಂದ್ರ ಒಪ್ಪದ ಕಾರಣ ಪಕ್ಷದ ನಾಯಕರ ನಡುವೆ ಬಿರುಕು ಮೂಡಿ ಉಪೇಂದ್ರ ಕೆಪಿಜೆಪಿ ಪಕ್ಷದಿಂದ ಹೊರಬಂದಿದ್ದು ನಿಮಗೆ ಗೊತ್ತಿರುವ ವಿಚಾರ. ನಿನ್ನೆ ಉಪೇಂದ್ರ ನಡೆಸಿದ ಚರ್ಚೆಯಲ್ಲಿ ಏನಾಯಿಯಿತು ಗೊತ್ತೇ.

ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಜೊತೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಉಪೇಂದ್ರ ತಾವೇ ಕಟ್ಟಿದ ಪಕ್ಷದಿಂದ ಹೊರನಡೆದ್ದಿದರು. ಉಪ್ಪಿ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಮಾಧ್ಯಮಗಳಲ್ಲಿ ಹರಡಿ ಬಿಜೆಪಿಯವರು ಅವರನ್ನು ಸ್ವಾಗತಿಸಿದ್ದರು.

ಉಪ್ಪಿಯವರು ಮುಂದೆ ಏನು ಮಾಡುತ್ತಾರೆ ಎಂಬುವ ಕುತೂಹಲ ಅವರ ಅಭಿಮಾನಿಗಳಿಗೆ ಕಾಡಿತ್ತು. ಉಪ್ಪಿಯಿಯವರ ಪತ್ನಿ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

ಉಪ್ಪಿ ಎಲ್ಲ ವದಂತಿಗಳಿಗೆ ತೆರೆ ಎಳೆದು ತಾವೇ ಒಂದು ಹೊಸ ಪಕ್ಷ ಕಟ್ಟುತ್ತಿರುವುದಾಗಿ ಹೇಳಿದ್ದಾರೆ. ಹೌದು, ಆಟೋ ಡ್ರೈವರ್ ಗಳು ಕೆಪಿಜೆಪಿ ಪ್ರಚಾರಕ್ಕಾಗಿ ಶ್ರಮ ವಹಿಸಿ ದುಡಿದ್ದಿದಾರೆ ಅವರಿಗೆ ಟಿಕೆಟ್ ನೀಡಬೇಕು ಎಂಬ ಉಪ್ಪಿಯ ಮನವಿಯನ್ನು ತಿರಸ್ಕರಿಸಿದ ಕಾರಣ ಉಪ್ಪಿ ಕೆಪಿಜೆಪಿ ಯಿಂದ ಹೊರನಡೆದು ಹೊಸ ಪಕ್ಷ ಸ್ಥಾಪಿಸಲು ಹೊರಟಿದ್ದಾರೆ.

ಉಪೇಂದ್ರ ತಮ್ಮ ಪಕ್ಷದ ಹೆಸರು, ಪಕ್ಷದ ಗುರುತು, ಸಾಮಾಜಿಕ ಜಾಲತಾಣದ ವಿವರ, ಪಕ್ಷದ ನಿಯಮಗಳು ಮತ್ತು ಉದ್ದೇಶಗಳನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದಾರಂತೆ. ಇನ್ನು ಉಪ್ಪಿಯ ಹೊಸ ಪಕ್ಷದ ಹೆಸರು ಪ್ರಜಕೀಯ ಎಂದು ಬಹುತೇಕ ಖಚಿತವಾಗಿದೆ.

Also read: ಉಪೇಂದ್ರ ಅವರಿಗೆ ಮಾತ್ರವಲ್ಲ ಸೋನಿಯಾ ಗಾಂಧಿ ಬಂದರು ಸ್ವಾಗತ ಕೋರುತ್ತೇವೆ ಎಂದ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ…!