ಟ್ವೀಟರ್ ನಲ್ಲಿ ಪ್ರಶ್ನೆಯಲ್ಲೇ ಆಟವಾಡುತ್ತಿರುವ ಉಪೇಂದ್ರ-ಸುದೀಪ್

0
1197

ಮೊದಲು ವಿಡಿಯೋ ನೋಡಿ

ಉಪೇಂದ್ರ ಮತ್ತು ಸುದೀಪ್ ನಡುವೆ ಟ್ವಿಟರ್ ವಾರ್ ಶುರುವಾಗಿದೆ. ಇಬ್ಬರೂ ಉತ್ತರ ಹೇಳದೇ ನಾನಾ-ನೀನಾ ಅಂತ ಜಿದ್ದಿಗೆ ಬಿದ್ದಿದ್ದಾರೆ. ಉತ್ತರ ಹೇಳದೇ ಬರೀ ಪ್ರಶ್ನೆಗಳನ್ನೇ ಕೇಳುತ್ತಾ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

ಮೊನ್ನೆ ನಡೆದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮುಕುಂದ ಮುರಾರಿ ಚಿತ್ರದ ಪ್ರಮೋಷನ್ ಗೆ ಬಂದಿದ್ದ ಉಪೇಂದ್ರ, ಸುದೀಪ್ ಕೇಳಿದ ಪ್ರಶ್ನೆಗೆಲ್ಲಾ ಉತ್ತರಿಸಿದ್ದರು.

ಅದರಲ್ಲೂ ರಾಜಕೀಯ ಪ್ರವೇಶ ಕುರಿತ ಪ್ರಶ್ನೆಯೂ ಸೇರಿತ್ತು. ಎಲ್ಲ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ನಿಮಗೂ ಪ್ರಶ್ನೆ ಕೇಳಬೇಕಲ್ಲ? ಅಂತ ಕೇಳಿದಾಗ ನೀವು ಟ್ವಿಟರ್ ನಲ್ಲಿ ಕೇಳಿ ನಾನು ಯೋಚಿಸಿ ಉತ್ತರ ಕೊಡಬಹುದು ಎಂದಿದ್ದರು.

ಇದು ಅಲ್ಲಿಗೆ ಮುಗಿಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಉಪೇಂದ್ರ ಟ್ವಿಟರ್ ನಲ್ಲಿ ಪ್ರಶ್ನೆ ಕೇಳಿದ್ದಾರೆ. ಅದರ ವೀಡಿಯೋ ತುಣುಕು ಇಲ್ಲಿದೆ.