ಕೇಂದ್ರ ಲೋಕ ಸೇವಾ ಆಯೋಗ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

0
265

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕೇಂದ್ರ ಲೋಕ ಸೇವಾ ಆಯೋಗ ವಿವಿಧ 88 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಮೂಲಕ ಅಕ್ಟೋಬರ್ 31,2019ರೊಳಗೆ ಅರ್ಜಿ ಸಲ್ಲಿಸಬೇಕು.

Also read: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್ 233 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ವಿದ್ಯಾರ್ಹತೆ: ಸಸ್ಯಶಾಸ್ತ್ರಜ್ಞ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ (ಸಸ್ಯಶಾಸ್ತ್ರ / ತೋಟಗಾರಿಕೆ / ಜೀವ ವಿಜ್ಞಾನ / ಕೃಷಿ), ಕಾನೂನು ಅಧಿಕಾರಿ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ (ಕಾನೂನು), ಜಂಟಿ ಸಹಾಯಕ ನಿರ್ದೇಶಕರು ಹುದ್ದೆಗಳಿಗೆ ಬಿ.ಟೆಕ್/ಬಿ.ಇ/ಬಿ.ಎಸ್ಸಿ / ಸ್ನಾತಕೋತ್ತರ ಪದವಿ, ತಜ್ಞ ಗ್ರೇಡ್ III (ಅರಿವಳಿಕೆ,ಜೈವಿಕ ರಸಾಯನಶಾಸ್ತ್ರ,ಕಾರ್ಡಿಯಾಲಜಿ,ಫೋರೆನ್ಸಿಕ್ ಮೆಡಿಸಿನ್ ,ಜನರಲ್ ಮೆಡಿಸಿನ್ , ಸಾಮಾನ್ಯ ಶಸ್ತ್ರಚಿಕಿತ್ಸೆ ,ನರ ಶಸ್ತ್ರಚಿಕಿತ್ಸೆ ಮತ್ತು ಪೀಡಿಯಾಟ್ರಿಕ್ಸ್ ಸರ್ಜರಿ) ಹುದ್ದೆಗಳಿಗೆ ಎಂಬಿಬಿಎಸ್/ಪಿಜಿ ಪದವಿ/ಡಿಪ್ಲೋಮಾ/ಎಂ.ಡಿ/ಎಂ.ಎಸ್ಸಿ/ಪಿಹೆಚ್‌.ಡಿ/ಡಿ.ಎಸ್ಸಿ

ವಯೋಮಿತಿ: ಕನಿಷ್ಟ 30 ರಿಂದ ಗರಿಷ್ಟ 45 ವರ್ಷ SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ.

ಆಯ್ಕೆ ಪ್ರಕ್ರಿಯೆ: ಅರ್ಜಿದಾರರ ಕಿರುಪಟ್ಟಿಯನ್ನು ಮಾಡಲಾಗುವುದು ತದನಂತರ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಲಾಗುವುದು. ಸಂದರ್ಶನದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31,2019

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 25/-ರೂ SC/ST ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ
ಮಾಡಿ ಅಕ್ಟೋಬರ್ 31,2019ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ: https://www.upsc.gov.in/ ಕ್ಲಿಕ್ ಮಾಡಿ.