ಯುಪಿಎಸ್‍ಸಿ ಟಾಪರ್ ನಂದಿನಿಯಿಂದ ಕೋಲಾರದ ಮುನೇಶ್ವರ ನಗರ ಈಗ ರಾತ್ರೋರಾತ್ರಿ ಹೈ-ಟೆಕ್ ಸ್ಪರ್ಶ ಪಡೆದುಕೊಂಡಿದೆ ಏಕೆ ಅಂತೀರಾ..?

0
508

ನಮ್ಮ ದೇಶದ ವ್ಯವಸ್ಥೆನೆ ಹೀಗೆ ಅನ್ಸುತ್ತೆ ಯಾವದೇ ಅಧಿಕಾರ ಅಥವಾ ಒಂದು ಒಳ್ಳೆ ಸ್ತಾನಮಾನ ಇದ್ರೆ ಜನ ಆಗಲಿ ಸರ್ಕಾರವಾಗಲಿ ಖಂಡಿತ ಬದಲಾಗುತ್ತವೆ ಅನ್ನುತ್ತೆ ಇದಕ್ಕೆ ಉದಾಹರಣೆ ನಂದಿನಿ ಅವರ ಊರು ಸಾಕ್ಷಿ.

ನಿಜ ದೇಶಕ್ಕೆ ಟಾಪರ್ ಆಗುವ ಮೂಲಕ ಗಮನ ಸೆಳೆದಿದ್ದ ನಂದಿನಿ ಅವರ ಫಲಿತಾಂಶದಿಂದಾಗಿ ತಂದೆ ತಾಯಿ ವಾಸವಿರುವ, ತಾವು ಹುಟ್ಟಿ ಬೆಳೆದ ವಠಾರದ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ.

ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿದ್ದ ಮುನೇಶ್ವರ ನಗರ ಈಗ ರಾತ್ರೋರಾತ್ರಿ ಹೈ-ಟೆಕ್ ಸ್ಪರ್ಶ ಪಡೆದುಕೊಂಡಿದೆ. ನಗರಕ್ಕೆ ಕಾಂಕ್ರೀಟ್ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸೇರಿದಂತೆ ಬೀದಿ ದೀಪ ವ್ಯವಸ್ಥೆಗಳನ್ನು ಮಾಡುವ ಮೂಲಕ ನಗರಸಭೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.ಸಾಕಷ್ಟು ಬಾರಿ ಮನವಿ ಮಾಡಿದ್ರೂ ಬದಲಾವಣೆಯಾಗದ ವ್ಯವಸ್ಥೆ ಈಗ ನಂದಿನಿ ಅವರಿಂದಾಗಿ ಬದಲಾವಣೆ ಆಗುತ್ತಿದೆ ಅನ್ನೋದು ಸತ್ಯ.