ಕೃಷಿಯಿಂದ ಸಂಪಾದನೆ ಇಲ್ಲವೆಂದು ಪಟ್ಟಣಕ್ಕೆ ಬರುತ್ತಿರುವ ಯುವಕರ ಮಧ್ಯೆ, ಈ ಇಂಜಿನಿಯರ್ ಕೃಷಿಯಿಂದ ಹೇಗೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದೆಂದು ತೋರಿಸಿದ್ದಾರೆ..

1
2756

ನೀವು ಈ ತೋಟಕ್ಕೆ ಎಂಟ್ರಿ ನೀಡಿದ್ರೆ ಸಾಕು ಹಸಿರು, ವಾಸನೆ ನಿಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಮಣ್ಣಿಲ್ಲದೆ, ನೀರಿನ ಸಹಾಯದಿಂದ ಪೈನಾಪಲ್​​ ಗಿಡಗಳು ಬೆಳೆದಿರುವ ರೀತಿ ನಿಮ್ಮಮೂಗ ಮೇಲೆ ಬೆರಳು ಇಡುವಂತೆ ಮಾಡುತ್ತದೆ. ಇದನ್ನೇ ಜಲಕೃಷಿ (hydroponics) ಅಂತಾ ಕರೀತಾರೆ. ಅಲ್ಲದೆ ಇಲ್ಲಿ ಬೆಳೆದ ಸಸಿಗಳು ಬೇರೆ ಬೇರೆ ರಾಜ್ಯಗಳಿಗೂ ಸರಬರಾಜು ಆಗುತ್ತಿವೆ.

source: theweekendleader.com

ಇನ್ನು ಇಲ್ಲಿ ಬೆಳೆಯುವ ಪದಾರ್ಥಗಳಿಗೆ ಧೂಳು ತಾಗಬಾರದು ಎಂದು, ಇದರ ಮಾಲೀಕ ಸುತ್ತಲ್ಲು ಪ್ಲಾಸ್ಟಿಕ್​ ರೀತಿಯ ಪಡದೆ ನಿರ್ಮಿಸಿದ್ದಾರೆ. ಇದರಿಂದ ಗಿಡಗಳಿಗೆ ಬೇಕಾಗುವಷ್ಟುಸೂರ್ಯನ ಬೆಳಕು ಸಿಗುತ್ತದೆ. ಈ ತೋಟದಲ್ಲಿ ಅಜ್ವಾನ್​​, ಸೇರಿದಂತೆ ಇನ್ನು ಹಲವು ಮಸಾಲೆ ಪದಾರ್ಥಗಳನ್ನು ಇವರು ಬೆಳಿಸಿದ್ದಾರೆ. ಅಂದಹಾಗೆ ಇದು ನಿಮಗೆ ಕಾಣೋದು ಚೆನ್ನೈನಲ್ಲಿ.ಶ್ರಿರಾಮ್​ ಗೋಪಾಲ್​ ಒಡೆತನದ ಕಂಪನಿಯೊಂದು ರಾಸಾಯಿನಿಕ ಮುಕ್ತ ಸಸಿಗಳನ್ನು ಬೆಳೆಸಲು ಉತ್ಸುಕವಾಗಿದೆ. 2016-17ರಲ್ಲಿ ಈ ಕಂಪನಿ ಸುಮಾರು 2 ಕೋಟಿ ವೆಚ್ಚದಲ್ಲಿನಿರ್ಮಾಣವಾಗಿದ್ದು, ಸದ್ಯ ಇದರ ಮೌಲ್ಯ ತ್ರಿಗುಣವಾಗಿದೆ.

source: theweekendleader.com

ಶ್ರೀನಿವಾಸ್​​ ಅವರು ಹೇಳುವಂತೆ ಕಳೆದ ವರ್ಷ ಮೂರು ನೂರು ಪ್ರತಿಷತದಷ್ಟು ವ್ಯಾಪಾರ ವೃದ್ಧಿಯಾಗಿದೆ. 2015ರಲ್ಲಿ 38 ಲಕ್ಷ ವ್ಯವಹಾರ ಮಾಡಿದ್ರೆ, ಕಳೆದ ವರ್ಷ ಸುಮಾರು 2 ಕೋಟಿವಹಿವಾಟು ನಡೆಸಿದ್ದಾಗಿ ತಿಳಿಸಿದ್ದಾರೆ. ಇನ್ನು ಈ ವರ್ಷ ಈ ತಿಂಗಳುವರೆಗೆ ಸುಮಾರು 6 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದಿದ್ದಾರೆ.

source: theweekendleader.com

ಇದರ ಹಿಂದಿನ ಗುಟ್ಟೇನು ಎಂದು ತಿಳಿಯಲು ಹೊರಟರೆ ಶ್ರೀನಿವಾಸ್​ ಹೇಳೋದು ಇಷ್ಟು. ಐದು ವರ್ಷಗಳ ಹಿಂದೆ ಯೂಟುಬ್​ನಲ್ಲಿ ಜಲ ಕೃಷಿ ಬಗ್ಗೆ ದೃಶ್ಯ ನೋಡಿ, ಕೆಲಸ ಆರಂಭಿಸಿದೆ.ಇದರ ಸಹಾಯದಿಂದ ಹಲವು ಏಳು ಬೀಳುಗಳನ್ನು ಕಂಡು ಕೊನೆಗೆ ಯಶಸ್ಸು ಎನ್ನುವ ಕುದುರೆಯನ್ನು ಹತ್ತಿದ್ದೇನೆ.

ಶ್ರೀನಿವಾಸ್​ ಅವರು ಇಂಜಿನಿಯರಿಂಗ್​ನಲ್ಲಿ ವ್ಯಾಸಂಗ ಮಾಡಿದ್ದಾರೆ. ಅಲ್ಲದೆ ಹೊಸದನ್ನು ಮಾಡುವ ಆಶಯನ್ನು ಹೊಂದಿದವರು. ಇದರ ಫಲವಾಗಿಯೇ ಇಂದು ಭಾರತದಲ್ಲಿ ಜಲಕೃಷಿಯಲ್ಲಿ ದೊಡ್ಡ ಕಂಪನಿಯಾಗಿ ರೂಪಗೊಂಡಿದೆ.

source: theweekendleader.com

ಇನ್ನು ನನ್ನದೆ ಮನಸ್ಥಿತಿಯನ್ನು ಹೊಂದಿದ ಯುವಕರನ್ನು ಕೂಡಿಸಿಕೊಂಡು ಕೊನೆಗೂ ಕಂಪನಿಯನ್ನು ಆರಂಭಿಸಿದೆವು. ಇದರ ಪರಿಣಾಮ ಎಲ್ಲರು ಸುಮಾರು 5 ಲಕ್ಷ ರೂ. ತೊಡಗಿಸಿದೆವು.ಕಂಪನಿಯ ಬೆಳವಣಿಗೆ ಕಂಡು ನಮ್ಮ ಸಹೋದ್ಯೋಗಿಗಳು ಸಹ ಹೆಚ್ಚಿನ ರಿಸ್ಕ್​ ತೆಗೆದುಕೊಳ್ಳಲು ತಯಾರಾದ್ರು. ಇದರ ಪರಿಣಾಮವೇ ಇಂದು ನಾವು ನಂಬರ್​ 1 ಸ್ಥಾನಕ್ಕೇರಲು ಸಾಧ್ಯವಾಗಿದೆ.

ಜಲಕೃಷಿ: ಮನೆಯಲ್ಲಿ ಇದ್ದ ಪೈಪುಗಳ ಸಹಾಯದಿಂದ ಮನೆಯ ಶೃಂಗಾರ ಹಾಗೂ ಅಪ್ಪನ ಕಾರ್ಖಾನೆಯ ಹೊರಗೆ ಇದರ ಪ್ರಯೋಗ ಮಾಡಿದ ಶ್ರೀನಿವಾಸ್​ ಯಶಸ್ಸು ಕಂಡು ಇದರಲ್ಲಿಜೀವನ ಕಂಡುಕೊಂಡಿದ್ದಾರೆ.

ಕೃಪೆ: The Weekend Leader