ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಮಾನವೀತೆಯೇ ಮರೆಯಾಗುತ್ತಿದೆಯೇ…!

0
611

ನಗರೀಕರಣ, ಜಾಗತೀಕರಣ, ಖಾಸಗೀಕರಣದ ಬಗೆಗಿದ್ದ ಧಾವಂತ, ಆತಂಕಗಳನ್ನು ವಿಮರ್ಶಿಸುತ್ತಲೇ ಆ ಚಕ್ರದಲ್ಲಿ ಆಶ್ರಯ ಪಡೆದುಕೊಳ್ಳುವಂತಾಗಿರುವುದು ಈ ಕಾಲದ ನೋಟ. ಅದಕ್ಕಿಂತಲೂ ವೇಗವಾಗಿ ಪ್ರವಹಿಸಿದ ಸಂವಹನದಿಂದಾಗಿ ಚಳವಳಿಯ ದಿನಗಳೆಲ್ಲವೂ ಬರೀ ಕನವರಿಕೆಯಲ್ಲಿ ಕಾಣುವಂತಾಗಿದೆ ಪ್ರಸ್ತುತ ದಿನಗಳ ಮತ್ತೊಂದ ವಿದ್ಯಮಾನ.

Related image

ಸಾಹಿತ್ಯ, ಸಂಗೀತ, ಸಂಸ್ಕೃತಿ, ರಂಗಭೂಮಿ, ಜಾನಪದ, ಶಿಕ್ಷಣ, ಕುಟುಂಬ, ವೈಯಕ್ತಿಕ ಸಂಬಂಧ, ಸ್ನೇಹ, ಪ್ರೀತಿ, ಪ್ರೇಮ ಹೀಗೆ ಪ್ರತಿಯೊಂದೂ ವ್ಯಾಪಾರೀಕರಣ ಇಲ್ಲವೇ ಔದ್ಯೋಗಿಕ ರೂಪ ಪಡೆದುಕೊಂಡಿರುವ ಈ ಹೊತ್ತಿನಲ್ಲಿ ಸ್ವಾತಂತ್ರ್ಯ ದಿನಗಳಲ್ಲಿನ ಹೋರಾಟ ಹಾದಿಯನ್ನು ನೆನಪುಮಾಡಿಕೊಳ್ಳಲು ಸಾಧ್ಯವೇ? ಈ ಜನಾಂಗಕ್ಕೆ ಅದರ ಮಹತ್ವ ಅರುಹಿದರೂ. ಅದು ಮನದೊಳಗೆ ಇಂಗಬಹದೇ ಎಂಬುದು ಈ ಹೊತ್ತಿನ ಮತ್ತೊಂದು ಪ್ರಶ್ನೆ.

Related image

ಸಂಬಂಧಗಳೇ ಇಲ್ಲದಂತಹ ಸ್ಥಿತಿಯಲ್ಲಿ ಸಮಾಜ ಓಡುತ್ತಿದೆ. ಅದಕ್ಕೆ ಹಂಗಿನ ಅರಿವಿಲ್ಲ. ಹಸಿವು ಈಗ ದೂರ. ಹಸಿವಿದ್ದಾಗ ಹಂಗು, ಸ್ನೇಹ, ಪ್ರೀತಿ, ಸಂಬಂಧ, ನೆಂಟರಿಷ್ಟರು ಮತ್ತೊಂದು ಮಗದೊಂದು.. ಆದರೆ, ಅದೆಲ್ಲವನ್ನೂ ದಾಟಿ `ಪಿಜಿ’ ಎಂಬ ಮನೆಯೊಳಗೆ ಎಲ್ಲವೂ ಸ್ವಾತಂತ್ರ್ಯದ ಹೆಸರಿನಲ್ಲಿ ದಕ್ಕುತ್ತಿರುವಾಗ, ಸೂರ್ಯನ ಝಳಕ್ಕೆ ನೀರು ಆವಿ ಆಗುವಂತೆಯೇ, ನಗರೀಕರಣದ ಕಾವು ಮತ್ತು ಸಂವಹನದ ಜೋರಿನಲ್ಲಿ ನೈತಿಕತೆ, ಮಾನವೀಯ ಸಮಾಜದ ಲಕ್ಷಣಗಳು ಕೂಡ ಅಷ್ಟೇ ವೇಗವಾಗಿ ಮಾಯವಾಗುತ್ತಿವೆ.

Image result for Urbanization

ಅದಕ್ಕಿಂತಲೂ ದುರಂತದ ಸಂಗತಿ ಎಂದರೆ ಮೋಸದ ಮುಖವಾಡ ರಾಚತೊಡಗಿದೆ. ಮಾನವ ಸಹಜವಾದ ವರ್ತನೆಯೇ ಮಾಯವಾಗುತ್ತಿದೆ. ಇಂತಹ ದಿನಗಳಲ್ಲಿ ಜನಪರ ನಿಲುವುಗಳ ಬಗ್ಗೆ ಹೋರಾಟ ಎಂಬ ಶಬ್ದಗಳಿಗೆ ಜಾಗವೇ ಇಲ್ಲದಂತಾಗಿರುವುದಂತೂ ನಿತ್ಯ ಸತ್ಯ. ಇದೇ ನಮ್ಮ ಸ್ವಾತಂತ್ರ್ಯವೇ? ನಾವು ಕಟ್ಟಿಕೊಂಡು ವ್ಯವಸ್ಥೆಯಲ್ಲಿ ನಾವಷ್ಟೇ ಬಂಧಿಯಾಗಿ ಬದುಕುವುದೇ ಸ್ವಾತಂತ್ರ್ಯವೇ? ಹಾಗಾದಲ್ಲಿ ಸ್ವಾತಂತ್ರ್ಯ ಎಂದರೇ ಏನು? ಈ ಸ್ವಾತಂತ್ರ್ಯಕ್ಕಾಗಿ ಹೋರಾಟದ ಅವಶ್ಯಕತೆಯಾದರೂ ಯಾಕಿತ್ತು ಎಂಬ ಜಿಜ್ಞಾಸೆ ಈಗಿನ ಕಾಲಮಾನದ ಜ್ವಲಂತ ಪ್ರಶ್ನೆ.