ಹೃತಿಕ್ ರೋಷನ್ ಎಂದರೆ ಪಂಚಪ್ರಾಣ ಎಂದ ಹೆಂಡತಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ.!

0
248

ಸಂಸಾರದಲ್ಲಿ ಮಾತಿನ ಯಡವಟ್ಟು ಏನೆಲ್ಲಾ ಮಾಡುತ್ತೆ ಎನ್ನುವುದಕ್ಕೆ ಹಲವು ಘಟನೆ ನೋಡಿದರೆ ತಿಳಿಯುತ್ತೆ, ಅದರಲಿ ಅನೈತಿಕ ಸಂಬಂಧಕ್ಕೆ ಹಲ್ಲೆ, ಮರ್ಡರ್-ಗಳು ನಡೆಯುತ್ತಾನೆ ಇವೆ. ಇಂತಹದೇ ಒಂದು ಘಟನೆ ನಡೆದಿದ್ದು ಗಂಡ ಹೆಂಡತಿಯನ್ನು ಚಾಕು ಇರಿದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಮುಖ್ಯ ಕಾರಣದ ಕೇಳಿದರೆ ಮನೆಯಲ್ಲಿ ಹೆಂಡತಿಯಾಗಲಿ ಗಂಡನಾಗಲಿ ಮಾತನಾಡುವ ವೇಳೆ ಎಚ್ಚರಿಕೆ ಇಂದ ಇರುವುದು ಒಳ್ಳೆಯದು ಅನಿಸುತ್ತೆ, ಏಕೆಂದರೆ ನಟ ಹೃತಿಕ್ ರೋಷನ್ ಮೇಲೆ ಹೆಂಡತಿಗೆ ಕ್ರಶ್ ಇದೆ ಎನ್ನುವ ವಿಷಯ ತಿಳಿದು ಪತಿ ಈ ಕೊಲೆ ಮಾಡಿದ್ದಾನಂತೆ.

Also read: ಪ್ರೀತಿ ಪ್ರೇಮದ ನಾಟಕವಾಡಿ ಬರೋಬ್ಬರಿ 14 ಯುವಕರಿಗೆ ಚಳ್ಳೆಹಣ್ಣು ತಿನಿಸಿ ಲಕ್ಷಾಂತರ ಹಣ ಸುಲಿಗೆ ಮಾಡಿದ ಲೇಡಿ ವಕೀಲೆ.!

ಹೌದು ವರ್ಲ್ಡ್ ಸೆಕ್ಸಿ ಮೆನ್ ಎನ್ನುವ ಬಿರುದು ಪಡೆದ ಬಾಲಿವುಡ್ ನಟ ಹೃತಿಕ್ ರೋಷನ್ ಡ್ಯಾನ್ಸ್, ಆತನ ಮೈಕಟ್ಟು, ಹೈಟ್, ಅಭಿನಯಕ್ಕೆ ಲಕ್ಷಾಂತರ ಯುವತಿಯರು ಮರುಳಾಗಿದ್ದಾರೆ. ಅದರಂತೆ ಸಹಜವಾಗಿ ಎಲ್ಲ ಯುವತಿಯರಿಗೆ ನೆಚ್ಚಿನ ಹೀರೋ ಒಬ್ಬರು ಇರುತ್ತಾರೆ. ಹಾಗೆಯೇ ಡೊನ್ನೆ ಡೊಜೋಯ್ ಎನ್ನುವ ವಿವಾಹಿತೆ ಹೃತಿಕ್ ರೋಷನ್ ಬಗ್ಗೆ ಅತಿಯಾಗಿ ಆಕರ್ಷಿತಳಾಗಿದ್ದು ಈ ವಿಷಯ ತಿಳಿದು ಆಕೆಯ ಗಂಡ ಚಾಕುವಿನಿಂದ ಇರಿದು ಕೊಂದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಇದು ವಿಚಿತ್ರವಾಗಿದ್ದರು ಭಾರತದ ಮೂಲದ ಡೊನ್ನೆ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಆಕೆಗೆ ಹೃತಿಕ್ ರೋಷನ್ ಎಂದರೆ ಪಂಚಪ್ರಾಣ. ಸದಾ ಆತನ ಜಪವನ್ನೇ ಮಾಡುತ್ತಿದ್ದ ಆಕೆಯ ವರ್ತನೆಯಿಂದ ಬೇಸತ್ತಿದ್ದ ಗಂಡ ಆಕೆಯನ್ನು ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Also read: ಒಂದೇ ಪ್ರೀತಿಗೆ ಮೂರು ಹೆಣ; ಓದುವುದು ಬಿಟ್ಟು ಲವ್ ಅಂತ ತಿರುಗುವ ಯುವಕ- ಯುವತಿಯರೇ ಎಚ್ಚರ.! .

ದಿನೇಶ್ವರ್ ತನ್ನ ಪತ್ನಿಯನ್ನು ತುಂಬಾನೇ ಪ್ರೀತಿಸುತ್ತಿದ್ದನು. ಆದರೆ ಆಕೆ ಮಾಡುತ್ತಿದ್ದ ಕೆಲಸ ಆತನಿಗೆ ಇಷ್ಟವಿರಲಿಲ್ಲ. ಇತ್ತ ಡೊನ್ನೆ ನೋಡಲು ಸುಂದರವಾಗಿದ್ದು, ಆಕೆ ಯಾವಾಗಲೂ ಸಂಪಾದನೆ ಮಾಡುತ್ತಿದ್ದಳು. ಇದರಿಂದ ದಿನೇಶ್ವರ್ ಆಕೆಯ ಮೇಲೆ ಹೊಟ್ಟೆಕಿಚ್ಚು ಪಡುತ್ತಿದ್ದನು. ದಿನೇಶ್ವರ್ ಯಾವಾಗಲೂ ಡೊನ್ನೆಯನ್ನು ನಿಂದಿಸುತ್ತಿದ್ದನು, ಹೊಡೆಯುತ್ತಿದ್ದನು ಹಾಗೂ ಕೊಲೆ ಮಾಡುವ ಬೆದರಿಕೆ ಕೂಡ ಹಾಕುತ್ತಿದ್ದನು. ಆದರೆ ಡೊನ್ನೆ ತನ್ನ ಪತಿಯ ಬೆದರಿಕೆಗೆ ಹೆದರುತ್ತಿರಲಿಲ್ಲ ಎಂದು ಡೊನ್ನೆ ಸ್ನೇಹಿತ ರಾಡ್ನಿ ತಿಳಿಸಿದ್ದಾನೆ. ಡೊನ್ನೆ ಓಝೋನ್ ರಸ್ತೆಯಲ್ಲಿರುವ ಜೆಮಿನಿ ಅಲ್ಟ್ರಾ ಲಾಂಜ್‍ನಲ್ಲಿ ಬಾರ್ ಟೆಂಡರ್ ಆಗಿ ಕೆಲಸ ಮಾಡುತ್ತಿದ್ದಳು.

ಡೊನ್ನೆ ಹಾಗೂ ದಿನೇಶ್ವರ್ ಓಝೋನ್ ಪಾರ್ಕಿನ ವೈಟ್‍ಲಾ ಸ್ಟ್ರೀಟ್‍ನಲ್ಲಿರುವ ಆಲ್ಬರ್ಟ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಆದರೆ ಎರಡು ವಾರಗಳ ಹಿಂದೆ ಡೊನ್ನೆ ಅಲ್ಲಿಂದ ಹೊರಬಂದು ಬೇರೆ ಕಡೆ ವಾಸಿಸುತ್ತಿದ್ದಳು. ಶುಕ್ರವಾರ ಡೊನ್ನೆ ತನ್ನ ಪತಿ ದಿನೇಶ್ವರ್ ಜೊತೆ ಸಿನಿಮಾ ನೋಡಲು ಓಝೋನ್ ಪಾರ್ಕಿನ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಳು. ಈ ವೇಳೆ ದಿನೇಶ್ವರ್ ಪತ್ನಿ ಡೊನ್ನೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಡೊನ್ನೆಯ ಸಹೋದರಿಗೆ ಮೆಸೇಜ್ ಮಾಡಿ ಹತ್ಯೆ ಮಾಡಿರುವ ವಿಷಯವನ್ನು ತಿಳಿಸಿದ್ದಾನೆ. ಅಲ್ಲದೆ ಅಪಾರ್ಟ್‌ಮೆಂಟ್‌ನ ಕೀಯನ್ನು ಹೂ ಕುಂಡದ ಕೆಳಗಿಡಲಾಗಿದೆ ಎಂದು ಕೂಡ ಡೊನ್ನೆ ಸಹೋದರಿಗೆ ಮೆಸೇಜ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾನೆ.

Also read: ಪ್ರಪಂಚದಲ್ಲಿಯೇ ವಿಚಿತ್ರ ಪ್ರೀತಿ; ವಿಮಾನವನ್ನೇ ಪ್ರೀತಿಸುತ್ತಿರುವ ಮಹಿಳೆ, ಅದರ ಜೊತೆಗೆ ದೈಹಿಕ ಸಂಪರ್ಕವನ್ನು ಹೊಂದಿದ್ದಾಳಂತೆ.!

ಹಾಗೆಯೇ ಸಂಜೆ ಸುಮಾರು 7.30ಕ್ಕೆ ಡೊನ್ನೆ ಸಹೋದರಿ ಸ್ಥಳಕ್ಕೆ ತಲುಪಿ ಹೂಕುಂಡ ಕೆಳಗಿಟ್ಟಿದ್ದ ಕೀ ಅನ್ನು ತೆಗೆದುಕೊಂಡು ಮನೆಯೊಳಗೆ ಪ್ರವೇಶಿಸಿದ್ದಾಳೆ. ಈ ವೇಳೆ ಅಲ್ಲಿ ಡೊನ್ನೆ ಮೃತದೇಹ ಪತ್ತೆಯಾಗಿದ್ದು, ತಕ್ಷಣ ಆಕೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಇತ್ತ ದಿನೇಶ್ವರ್ ಹೊವಾರ್ಡ್ ಬೀಚಿಗೆ ಹೋಗಿ ಅಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.