ಕೈ ತೊಳೆಯಲು ಹ್ಯಾಂಡ್-ವಾಷ್ ಬಳಸುತ್ತಿದ್ದೀರ, ಹಾಗಿದ್ದರೆ ಈ ಹೊಸ ಸಂಶೋಧನೆ ಓದಿ, ನಿಮಗೆ ಆಘಾತಕಾರಿ ವಿಷಯ ತಿಳಿಯುವುದು..

0
1198

ಕಟ್ಟೆಚ್ಚರ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಹ್ಯಾಂಡ್‌ವಾಶ್ ಬಳಸುತ್ತಿದ್ದೀರಾ?

ಕೈಗಳು ಸ್ವಚ್ಛವಾಗಿ ಇರಬೇಕು, ಬಾಯಿ ದುರ್ವಾಸನೆ ಬಾರದಂತೆ ಇರಬೇಕು ಎಂದು ಟಿವಿಗಳಲ್ಲಿ ಬರುವ ಜಾಹೀರಾತುಗಳಿಂದ ದೊಡ್ಡ ಅಪಾಯವೇ ಕಾದಿದೆಯಂತೆ. ಟಿವಿಗಳಲ್ಲಿ ಇವರು ಮಾಡುವ ಗದ್ದಲ ಅಷ್ಟಿಷ್ಟಲ್ಲ. ಮುಖ್ಯವಾಗಿ “ಬಂಟಿ ನಿನ್ನ ಸೋಪು ಸ್ಲೋನಾ” ಎಂದು ಬರುವ ಆಡ್‌ ಬಹಳಷ್ಟು ಮಂದಿ ಮೇಲೆ ತುಂಬಾ ಪ್ರಭಾವ ಬೀರಿರುತ್ತದೆ. ಕೈಗಳನ್ನು ನಿತ್ಯ ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು, ಆ ರೀತಿ ಮಾಡದಿದ್ದರೆ ಸೋಂಕು ತಗಲುತ್ತದೆ ಎಂದು ಟಿವಿಗಳಲ್ಲಿ ಹ್ಯಾಂಡ್‌ವಾಶ್ ಜಾಹೀರಾತುಗಳಿಗೇನು ಕೊರತೆಯಿಲ್ಲ.

ಆರೋಗ್ಯವಾಗಿ ಇರುವುದು ತಪ್ಪಲ್ಲ. ಒಳ್ಳೆಯದೇ ಅಲ್ಲವೆ. ಆದರೆ ಆಂಟಿ ಬ್ಯಾಕ್ಟೀರಿಯಾ ಸೋಪುಗಳು, ದ್ರಾವಣಗಳ ಬಳಕೆ ಅಸಲಿಗೆ ಮೋಸ ತರುತ್ತವೆ ಎಂದು 200ಕ್ಕೂ ಅಧಿಕ ಮಂದಿ ಮೇಲೆ ತಜ್ಞರು ನಡೆಸಿದ ಸಂಶೋಧನೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ “ಎನ್ವಿರಾನ್‌ಮೆಂಟಲ್ ಹೆಲ್ತ್ ಪರ್ಸ್‌ಪೆಕ್ಟೀವ್” ನಿಯತಕಾಲಿಕೆಯಲ್ಲಿ ಹಲವು ಮುಖ್ಯವಾದ ವಿಷಯಗಳನ್ನು ವಿವರಿಸಲಾಗಿದೆ. ಹ್ಯಾಂಡ್‌ವಾಶ್ ಸೋಪುಗಳು, ಲಿಕ್ವಿಡ್‌ಗಳ ಪ್ರಯೋಜನ ಶೂನ್ಯವೆಂದು, ದೀರ್ಘಕಾಲದಲ್ಲಿ ಇವುಗಳಿಂದ ತೊಂದರೆ ತಪ್ಪಿದ್ದಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಇವುಗಳಿಂದ ಮುಖ್ಯವಾಗಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರಿಗೆ ಹಾನಿ ಕಾದಿದೆ ಎಂದು ತಿಳಿಸಿದ್ದಾರೆ. ಈ ಸೋಪುಗಳು, ಲಿಕ್ವಿಡ್‌ಗಳಲ್ಲಿ ಆಂಟಿ ಬ್ಯಾಕ್ಟೀರಿಯಾ ರಾಸಾಯನಿಕಗಳು ಗರ್ಭಿಣಿಯರ ಹೊಟ್ಟೆಯಲ್ಲಿನ ಮಗುವಿನ ಬೆಳವಣಿಗೆಗೆ ಕಾರಣವಾಗುವ ಅನೇಕ ಹಾರ್ಮೋನ್‌ಗಳು, ಇತರೆ ರಾಸಾಯನಿಕ ಪ್ರಕ್ರಿಯೆಗಳನ್ನು ಪ್ರಭಾವಿಗೊಳಿಸುತ್ತದೆ ಎಂದಿದೆ. ಅವರ ದೈಹಿಕ, ಮಾನಸಿಕ ಬೆಳವಣಿಗೆ ಮೇಲೂ ಪ್ರಭಾವ ಬೀರುತ್ತದೆಯಂತೆ. ಅಷ್ಟೇ ಅಲ್ಲದೆ ರೋಗ ನಿವಾರಣೆ, ಸೋಂಕು ನಿರೋಧಿಸುವಲ್ಲಿ ಸಾಮಾನ್ಯ ಸೋಪುಗಳಿಗಿಂತ ಇವು ಹೆಚ್ಚು ಪ್ರಭಾವ ಉಂಟು ಮಾಡುತ್ತವೆ ಎಂಬುದರ ಬಗ್ಗೆ ವೈಜ್ಞಾನಿಕ ಕಾರಣಗಳು ಸಿಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಾಗಾಗಿಯೇ ಅಮೆರಿಕ ಸರಕಾರ ಕಳೆದ ವರ್ಷ ಇವನ್ನು ನಿಷೇಧಿಸಿದೆ ಎಂದು ಆ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದಾರೆ. ಕೇವಲ ಆಂಟಿ ಬ್ಯಾಕ್ಟೀರಿಯಲ್ ಸೋಪುಗಳು, ಲಿಕ್ವಿಡ್ ಮಾತ್ರ ಅಲ್ಲದೆ ಆಂಟಿ ಬ್ಯಾಕ್ಟೀರಿಯಾ ರಾಸಾಯನಿಕಗಳಿಂದ ತಯಾರಾಗುತ್ತಿರುವ ಲಂಚ್ ಬಾಕ್ಸ್‌ಗಳು, ವ್ಯಾಯಾಮ ಮ್ಯಾಟ್‌ಗಳಂತಹವುಗಳಿಂದಲೂ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸುತಿದ್ದಾರೆ ತಜ್ಞರು. ಹಾಗಾಗಿ ಬಿ ಕೇರ್‌ಫುಲ್.