ಮೊಟ್ಟೆಯ ಶೆಲ್-ಗಳಿಂದಾಗುವ ಉಪಯೋಗಗಳನ್ನು ತಿಳಿದರೆ ಮೊಟ್ಟೆ ಬದಲು ಶೆಲ್-ಗಳನ್ನೇ ಉಪಯೋಗಿಸ್ತೀರ…

0
640

ದಿನಕೊಂದು ಮೊಟ್ಟೆ ತಿಂದರೆ ಮನುಷ್ಯ ತುಂಬ ಗಟ್ಟಿಯಾಗಿರುತ್ತಾನೆಂಬ ಮಾತಿದೆ ಆದರೆ ಮೊಟ್ಟೆಯ ಜೊತೆ ಮೊಟ್ಟೆಯ ಚಿಪ್ಪು ಅಂದರೆ ಆದರೆ ಶೆಲ್ ಕೂಡ ಅಷ್ಟೇ ಆರೋಗ್ಯಕರ ಗುಣಹೊಂದಿದೆ ಯಾವು ಯಾವುವು ಎಂಬುದನ್ನು ನೀವೇ ನೋಡಿ.

Also read: ಮೊಟ್ಟೆಯಲ್ಲಿರುವ ಔಷಧೀಯ ಗುಣಗಳನ್ನು ತಿಳಿದರೆ ಈಗಿನಿಂದಲೇ ಮೊಟ್ಟೆ ತಿನ್ನೋಕೆ ಶುರು ಮಾಡ್ತೀರ..

1. ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ, ಇದು ತೂಕ ಇಳಿಸಲು ಸಹಕಾರಿಯಾಗುತ್ತದೆ.

2. ಮೊಟ್ಟೆಯ ಹಳದಿ ಭಾಗದಲ್ಲಿ ತುಂಬ ಕೊಬ್ಬಿನ ಅಂಶ ಇರುವುದರಿಂದ, ಇದನ್ನು ತಿನ್ನುವುದರಿಂದ ಅಪೌಷ್ಟಿಕತೆ ದೂರವಾಗುತ್ತದೆ.

3. ಮೊಟ್ಟೆಯ ಶೆಲ್‌ ಕೂಡ ಉಪಯೋಗಕಾರಿ ಅದನ್ನು ಕಸದ ಬುಟ್ಟಿಗೆ ಹಾಕಿ ಎಸೆಯಬೇಡಿ, ಮೊಟ್ಟೆಯ ಶೆಲ್ಲನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಅವುಗಳನ್ನು ಗಿಡದ ಬುಡಕ್ಕೆ ಅದರಲ್ಲಿ ಹಾಕಿ 750-800 mgs ಕ್ಯಾಲ್ಸಿಯಂ ಇರುತ್ತದೆ.

4. ಮೊಟ್ಟೆಯ ಶೆಲ್ಲನ್ನು ಗಿಡಗಳಿಗೆ ಹಾಕುವುದರಿಂದ ಸಾಕಷ್ಟು ಉಪಯೋಗವಿದೆ, ಮೊಟ್ಟೆಯ ಶೆಲ್ಲನ್ನು ಗಿಡದ ಸುತ್ತ ಹರಡಿಸಿದರೆ ಅಲ್ಲಿಯ ಮಣ್ಣಿಗೆ ಕ್ಯಾಲ್ಷಿಯಂ ಸಿಗುತ್ತದೆ. ಮೊಟ್ಟೆಯ ಶೆಲ್‌ ಗಿಡದ ಸುತ್ತ ಹರಡಿಸಿದರೆ ಅದು ಕೀಟಗಗಳು ಬಾರದ ಹಾಗೆ ತಡೆಯುತ್ತದೆ, ಮಣ್ಣಿನಲ್ಲಿ ಇದನ್ನು ಹಾಕಿದರೆ ಮಣ್ಣು ಕೂಡ ತಂಪಾಗಿರಲು ನೆರವಾಗುತ್ತದೆ.

5. ಒಣಗಿದ ಮೊಟ್ಟೆಯ ಶೆಲ್ಲನ್ನು ಒನಕೆಯಿಂದ ಕುಟ್ಟಿ, ನಂತರ ಮೊಟ್ಟೆಯ ಬಿಳಿ ಭಾಗದಲ್ಲಿ ಈ ಪುಡಿ ಹಾಕಿ.

6. ಇದನ್ನು ಮುಖದ ಚರ್ಮ ಬಿಗಿಗೊಳಿಸಲು ಮತ್ತು ಮುಖದ ಕಾಂತಿ ಹೆಚ್ಚಿಸಲು ಬಳಸಬಹುದು.

7. ಸೇಬು ಸಿಡೆರ್ ವಿನೆಗಾರ್ನಲ್ಲಿ ಮೊಟ್ಟೆಯ ಚಿಪ್ಪನ್ನು ಹಾಕಿ ಒಂದೆರಡು ದಿನಗಳ ಕಾಲ ನೆನಯಲು ಬಿಡಿ ಅದನ್ನು ನಂತರ ಅದನ್ನು ಚರ್ಮದ ತುರಿಕೆ ಇರುವ ಜಾಗಕ್ಕೆ ಹಾಕಿದರೆ ತುರಿಕೆ ಕಡಿಮೆಯಾಗುತ್ತದೆ.

8. ಕ್ಯಾಲ್ಸಿಯಂ ಮಾತ್ರೆಯ ಬದಲು ಮೊಟ್ಟೆಯ ಶೆಲ್ಲನ್ನು ಕೇವಲ 8 ನಿಮಿಷಗಳ ಕಾಲ 350 ಡಿಗ್ರಿಯಲ್ಲಿ ಬೇಯಿಸಿ ನಂತರ ತಣ್ಣಗಾದ ಮೇಲೆ ನಿಮ್ಮ ಇಷ್ಟದ ಜ್ಯುಸ್ನಲ್ಲಿ ಹಾಕಿ ಕುಡಿಯಿರಿ.

Also read: ಬೇಯಿಸುವಾಗ ಮೊಟ್ಟೆ ಒಡೆಯಬಾರದು ಅಂದ್ರೆ ಏನು ಮಾಡಬೇಕು…?