Freshers ಗಳಿಗೆ ಉಪಯುಕ್ತ ಮಾಹಿತಿ

0
1371

Kannada News | kannada Useful Tips

Useful information for BE, B Tech, BCA,MCA Freshers BE, B Tech, BCA,MCA ಪ್ರೆಶರ್ ಗಳಿಗೆ ಉಪಯುಕ್ತ ಮಾಹಿತಿ ಅಂದುಕೊಳ್ಳುತ್ತೆನೆ.

ಮಾಡಲೇಬೇಕಾದ ಸಲಹೆಗಳು :

1. Naukri, Monster, ಹಾಗೂ Shine job portal ಗಳಲ್ಲಿ ಪ್ರತಿದಿನ ಬೆಳಿಗ್ಗೆ 8 ರಿಂದ 10 ಗಂಟೆಯ ಒಳಗೆ resume update ಮಾಡಿ.
2. ಬೆಂಗಳೂರಿನಲ್ಲಿರುವ IT start-up ಕಂಪನಿಗಳ list ಮಾಡಿಕೊಂಡು ಖುದ್ದಾಗಿ ಹೋಗಿ openings ಕೇಳಿ,openings ಇಲ್ಲವಾದಲ್ಲಿ resume ಕೊಟ್ಟು ಬನ್ನಿ.
3. Facebook ನಲ್ಲಿ Kannadigarige Udyoga, Bangalore Job Seekers,MRA Job Seekers,Bangalore off Campus ಎಂಬ pageಗಳಿವೆ ಅವುಗಳಲ್ಲಿ ಪ್ರತಿ ದಿನದ walkin ಬಗ್ಗೆ ಮಾಹಿತಿ ಹಾಕುತ್ತಾರೆ, ಆ ಪೇಜ್ ಗಳಿಗೆ join ಆಗಿ.
4) MNC ಕಂಪನಿಗಳ walkin drive ಗಳಿದ್ದರೆ ತಪ್ಪದೆ ಹೋಗಿ ಬನ್ನಿ.
5) MNCಗಳಲ್ಲಿ referral driveಗಳ ಮಾಹಿತಿ ಸಿಕ್ಕಾಗ, Facebook, LinkedInನಂತ ಸಾಮಾಜಿಕ ತಾಣಗಳಿಗೆ ಹೋಗಿ ಆ ಕಂಪನಿಯ ವ್ಯಕ್ತಿಯಗಳೊಂದಿಗೆ ವಿಚಾರಿಸಿ ರೆಫರ್ ಮಾಡಲು ವಿನಂತಿಸಿಕೊಳ್ಳಿ.
6) ನೀವು ಯಾವುದಾದರೂ Programming Languageನಲ್ಲಿ weak ಆಗಿದ್ದಲ್ಲಿ ಅಥವಾ ಹೆಚ್ಚಿನ ಆಸಕ್ತಿ ಇದ್ದರೆ Course ಸೇರಿಕೊಳ್ಳಿ .

“ಒಳ್ಳೆಯ ಕೆಲಸವನ್ನು ಯಾವತ್ತು ಮುಂದಕ್ಕೆ ಹಾಕಬೇಡಿ”.

ಕಡ್ಡಾಯವಾಗಿ ಮಾಡಲೇಬಾರದುದು :

1) ಫ್ರೆಂಡ್ಸ್ ಬರಲಿಲ್ಲ ಎಂದು ಯಾವದೇ interview ತಪ್ಪಿಸಿಕೊಳ್ಳುವದು ಅವಶ್ಯವಿಲ್ಲ. “ಇದು ನಿಮ್ಮ ಜೀವನ ನಿಮ್ಮ ಗೆಳೆಯರದ್ದಲ್ಲ”.
2) ದುಡ್ಡು ಕೇಳುವ ಕಂಪನಿ ಹಾಗೂ Consultancy ಗಳಿಗೆ ಯಾವತ್ತೂ ಹೋಗಬೇಡಿ. ನಿಮ್ಮ ಹತ್ತಿರವೇ ದುಡ್ಡು ಕೇಳುವ ಕಂಪನಿಗಳು ನಿಮಗೆ ಹೇಗೆ ಕೆಲಸ ಕೊಡೋಕೆ ಸಾಧ್ಯ? ಸ್ವಲ್ಪ ಯೋಚಿಸಿ ನೋಡಿ.
3) ‘Backdoor’ ಎಂಬ ಸುಳಿಗೆ ಯಾವತ್ತು ಸಿಲುಕಬೇಡಿ, ಅದೆಲ್ಲ ಶುದ್ದ ಸುಳ್ಳು ,

ನಿಮ್ಮ ಮೊದಲ ಕೆಲಸ ಮತ್ತು ಸಂಬಳ ನಿಯತ್ತು ಮತ್ತು ಸ್ವಾಭಿಮಾನದಾಗಿರಬೇಕೇ ಹೊರತು ದುಡ್ಡಿನಿಂದ ಕೊಂಡಿರುವದಾಗಿರಬಾರದು.

Also Read: ಮೋದಿ ಸರ್ಕಾರ ಬಂದಾಗಿನಿಂದ ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗ್ತಿದೆ ಅನ್ನೋರಿಗೆ ಇದನ್ನು ತೋರಿಸಿ, 1.5 ಕೋಟಿ ಉದ್ಯೋಗಗಳು ಸೃಷ್ಟಿಯಾಗ್ತಿವೆ..