ಜೀವನದಲ್ಲಿ ಪ್ರತಿಯೊಬ್ಬರೂ ಯಶಸ್ವಿಯಾಗಬೇಕೆಂಬ ಆಶಯ ಇದ್ದೇ ಇರುತ್ತೆ, ಇಲ್ಲಿ ಹೇಳಿರೋ ಚಾಣಕ್ಯ ನೀತಿ ಓದಿ ಪಾಲನೆ ಮಾಡಿ ಯಶಸ್ಸು ಸಿಕ್ಕೇ ಸಿಗುತ್ತೆ!!

0
2797

ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ, ಪ್ರಾಚೀನ ಭಾರತ ಕಂಡ ಓರ್ವ ಶ್ರೇಷ್ಠ ವಿದ್ವಾಂಸ ಮತ್ತು ಬುದ್ಧಿವಂತ. ಚಾಣಕ್ಯ ಅಂದು ನುಡಿದ ಹಿತವಚನಗಳೆಲ್ಲಾ ಚಾಣಕ್ಯನ ನೀತಿಗಳ ರೂಪದಲ್ಲಿ ಇಂದು ನಮಗೆ ಲಭ್ಯವಿದೆ. ಬನ್ನಿ, ಜೀವನದಲ್ಲಿ ಹೊಸತೇನಾದರೊಂದನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ಸು ಕಾಣಬೇಕೆಂದರೆ ಯಾವ ರೀತಿಯ ನೀತಿ ಯನ್ನು ಪಾಲಿಸಬೇಕು ಎನ್ನುವುದನ್ನು ವಹಿಸಬೇಕೆಂಬುದನ್ನು ಚಾಣಕ್ಯ ತಿಳಿಸಿರುವ ನೀತಿಗಳನ್ನು ಮುಂದೆ ಓದಿ….

Also read: ಮಹಿಳೆಯರ ಬಗ್ಗೆ ಚಾಣಕ್ಯ ಹೇಳಿರುವ ಈ ಮಾತುಗಳು ಖಂಡಿತ ಆಶ್ಚರ್ಯವನ್ನು ಉಂಟುಮಾಡುತ್ತವೆ..

ಕೆಟ್ಟ ಕೆಲಸ ಮಾಡುವವರಿಂದ ದೂರವಿರಿ

ಜೀವನದಲ್ಲಿ ಕೆಟ್ಟ ಸಂಗತಿಗಳನ್ನು ಮಾಡುವ ಜನರ ಕೊರತೆಯಿಲ್ಲ. ಸಾಮಾನ್ಯವಾಗಿ ದೈಹಿಕ ಸಮಸ್ಯೆಗಳಿಂದ ಹೊರತುಪಡಿಸಿ, ಜನರು ಮನಸ್ಸಿನೊಂದಿಗೆ ಆಡುವ ದುಷ್ಟರಾಗಿರುತ್ತಾರೆ. ಅಂತಹ ಜನರಿಂದ ದೂರವಿರಿ.

ಇತರರಿಗೆ ನೋವುಂಟು ಮಾಡುವವನು

ಉದ್ದೇಶಪೂರ್ವಕವಾಗಿ (ಅಥವಾ ಅನುದ್ದೇಶಪೂರ್ವಕವಾಗಿ) ಇತರರಿಗೆ ಹಾನಿಯನ್ನುಂಟು ಮಾಡುವ ಜನರಿದ್ದಾರೆ ಮತ್ತು ಯಾವುದೇ ಅನುಮಾನವನ್ನೂ ತೋರಿಸುವುದಿಲ್ಲ. ಅಂತಹ ಜನರನ್ನು ಒಮ್ಮೆ ಕ್ಷಮಿಸಬಹುದಾಗಿದೆ, ಆದರೆ ಅವರು ಒಂದೇ ವಿಷಯವನ್ನು ಮತ್ತೊಮ್ಮೆ ಪುನರಾವರ್ತಿಸುವುದಾದರೆ, ಅದು ಬದಲಾಗದ ವ್ಯಕ್ತಿತ್ವ ಲಕ್ಷಣವಾಗಿದೆ – ಅಂತಹ ಜನರನ್ನು ನಿಮ್ಮ ಸುತ್ತಮುತ್ತಲಿನ ಪರಿಸರದಿಂದ ದೂರವಿಡಬೇಕು.

ಧನಾತ್ಮಕ ಚಿಂತನೆ

ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮುನ್ನ ಕೆಲವು ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು. ಅವೆಂದರೆ ಕೆಲಸ ಪ್ರಾರಂಭಿಸುವ ಸಮಯ, ಸ್ಥಳ, ಇದಕ್ಕೆ ತಗಲುವ ವೆಚ್ಚ ಮತ್ತು ನಿಮ್ಮ ಈ ಕೆಲಸಕ್ಕೆ ನೆರವು ನೀಡುವವರು. ಧನಾತ್ಮಕ ಚಿಂತನೆ ಮಾಡುವುದು ಹೇಗೆ?

Also read: ವಿಷ,ಭಯ,ಅಸೂಯೆ, ದ್ವೇಷ ಅಂದ್ರೆ ಏನು ಅಂದಿದ್ದಕ್ಕೆ ಚಾಣಕ್ಯ ಕೊಟ್ಟ ಉತ್ತರ ಕೇಳಿದ್ರೆ ನೀವು ಖಂಡಿತ ಬದಲಾಗುತ್ತಿರ…!

ಸಾಮರ್ಥ್ಯ

ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ಆ ಕೆಲಸ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿದೆಯೇ ಅರಿತುಕೊಳ್ಳಬೇಕು. ಏಕೆಂದರೆ ಸಾಮರ್ಥ್ಯಕ್ಕೆ ಮೀರಿದ ಕೆಲಸವನ್ನು ಪ್ರಾರಂಭಿಸಿದ ಬಳಿಕ ಭಾರೀ ತೊಂದರೆಗೆ ಒಳಗಾಗಬಹುದು.

ನಿಮ್ಮ ನಾಲಿಗೆಯ ಮೇಲೆ ನಿಯಂತ್ರಣ

ಯಾವುದೇ ಹೊಸ ಕೆಲಸ ಯಶಸ್ವಿಯಾಗುವುದು ಅಥವಾ ವಿಫಲವಾಗುವುದು ಎರಡೂ ನಿಮ್ಮ ನಾಲಿಗೆಯ ಮೇಲಿನ ಹಿಡಿತವನ್ನು ಅವಲಂಬಿಸಿದೆ. ಗ್ರಾಹಕರೊಂದಿಗೆ ಉತ್ತಮವಾಗಿ ಮಾತನಾಡಿ ವಿಶ್ವಾಸ ಗಳಿಸುವ ಮೂಲಕ ಹೊಸ ಕೆಲಸ ಯಶಸ್ಸು ಪಡೆಯುತ್ತಾ ಸಾಗುತ್ತದೆ.

ದೇಹ ಸುಸ್ಥಿತಿಯಲ್ಲಿರಬೇಕು

ನಿಮ್ಮ ದೇಹದ ಆರೋಗ್ಯ ಭಗವಂತನ ನೀಡಿರುವ ಅದ್ಭುತ ಕೊಡುಗೆಯಲ್ಲಿ ನಮ್ಮ ಶರೀರವೂ ಒಂದು. ಯಾವುದೇ ಹೊಸ ಕೆಲಸ ಪ್ರಾರಂಭಿಸುವ ಮುನ್ನ ನಿಮ್ಮ ದೇಹ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.

Also read: ಮಹಾನ್ ವ್ಯಕ್ತಿ ಚಾಣಕ್ಯನಿಂದ ಈಗಿನ ರಾಜಕಾರಣಿಗಳು ಕಲಿಯಬೇಕಾದದ್ದು ಸಾಕಷ್ಟಿದೆ!!

ಕೆಲಸ ಮಾಡುವ ಸ್ಥಳದಲ್ಲಿ ಕುಳಿತುಕೊಳ್ಳುವ ರೀತಿ

ಕೆಲಸದಲ್ಲಿ ಯಶಸ್ಸಿಗಾಗಿ ಎಂದಿಗೂ ನಿಮ್ಮ ಬೆನ್ನು ಮುಖ್ಯದ್ವಾರಕ್ಕೆ ಎದುರಾಗಿರುವಂತೆ ಕೆಲಸದ ಸ್ಥಳದಲ್ಲಿ ಕುಳಿತುಕೊಳ್ಳಬಾರದು. ಅಂದರೆ ಗ್ರಾಹಕ ಪ್ರಧಾನ ಬಾಗಿಲಿನ ಮೂಲಕ ಒಳಬಂದಾಗ ಸ್ವಾಗತಿಸುವವರ ಮುಖವನ್ನು ಸ್ಪಷ್ಟವಾಗಿ ಕಾಣುವಂತಿರಬೇಕು. ಕೆಲಸದಲ್ಲಿ ಯಶಸ್ಸಿಗಾಗಿ ಬೆನ್ನು ಗೋಡೆ ಅಥವಾ ಇನ್ನಾವುದಾದರೂ ದೃಢ ವಸ್ತುವಿನ ಆಧಾರ ಪಡೆದಿರಬೇಕು. ಇದು ಸಾಧ್ಯವಾಗದಿದ್ದರೆ ಇನ್ನೋರ್ವ ವ್ಯಕ್ತಿಯ ಬೆನ್ನಿಗೆ ಬೆನ್ನು ತಾಗಿರುವಂತೆ ಕುಳಿತುಕೊಳ್ಳಬೇಕು.