ನೀವು ನಿತ್ಯ ಸಾಮಾನ್ಯವಾಗಿ ಎದುರಿಸುವ ಈ ಸಮಸ್ಯೆಗಳನ್ನು ಎಷ್ಟು ಸುಲಭವಾಗಿ ಪರಿಹರಿಸಬಹುದು ಗೊತ್ತೇ?

0
894

Kannada News | kannada Useful Tips

ನಾವು ನಿತ್ಯ ಬಳಸುವ ವಸ್ತುಗಳಿಗೆ ಅಕಸ್ಮಾತಾಗಿ ದೋಷವುಂಟಾದರೆ ಅಥವಾ ಕೆಟ್ಟರೆ ಆಕಾಶವೇ ತಲೆ ಮೇಲೆ ಬಿದ್ದಹಾಗೆ ಆಗುತ್ತದೆ ಅಲ್ವಾ. ಅದು ಅಡುಗೆ ಮನೆಯ ವಸ್ತುವಾಗಿರಬಹುದು ಅಥವಾ ನೀವು ನಿತ್ಯ ಬಳಸುವ ಕೈಗಡಿಯಾರವಾಗಿರಬಹುದು. ಇನ್ನು ನೀವು ನಿತ್ಯ ಸಾಮಾನ್ಯವಾಗಿ ಎದುರಿಸುವ ಇಂತಹ ಸಮಸ್ಯೆಗಳು ಮತ್ತು ಅದಕ್ಕೆ ಸೂಕ್ತ ಪರಿಹಾರವನ್ನು ನಾವು ತಿಳಿಸುತ್ತೇವೆ ನೋಡಿ.

ಟ್ಯಾಪ್ ಅಥವಾ ನಲ್ಲಿ ಸೋರುತ್ತಿದ್ದರೆ:

ಟ್ಯಾಪ್ ಕೆಟ್ಟಾಗ ರಾತ್ರಿ ನಿಶ್ಯಬ್ದ ವಾದಾಗ ನೀರು ಬೀಳುತ್ತಿದ್ದರೆ ಮನೆಯಲ್ಲಿ ಮಲಗಲು ತುಂಬಾನೇ ಕಿರಿಕಿರಿ ಉಂಟಾಗುತ್ತದೆ. ಇನ್ನು ಸರಿಯಾದ ಸಮಯಕ್ಕೆ ಪ್ಲಮ್ ಬರ್ ಅಥವಾ ನಲ್ಲಿ ರಿಪೇರಿ ಮಾಡುವವನು ಬರದ್ದಿದರೆ ಅದು ಇನ್ನು ಕಷ್ಟ, ಇದಕ್ಕೆ ಒಂದು ಸುಲಬ್ಭಾ ಪರಿಹಾರವಿದೆ ನೋಡಿ.

ನೀರು ಸೊರ್ತಾ ಇದೆ ಅಂದರೆ ಸ್ಕ್ರೂ ಸಡಿಲ ಆಗಿರಬೇಕು ಇಲ್ಲಾ ವಾಶರ್ ಹಾಳಾಗಿರಬೇಕು ಎಂದರ್ಥ. ಅದಕ್ಕೆ ನಲ್ಲಿ ಒಪನ್ ಮಾಡಿ ಸ್ವಲ್ಪ ಟೈಟ್ ಮಾಡಿ ನಂತರ ಪೈಪ್ ಅಂಗಡಿಗೆ ಹೋಗಿ ಒಂದು ಹೊಸ ವಾಶರ್ ತಂದು ಫಿಟ್ ಮಾಡಿ ಹಾಗು ಸದಾ ನಲ್ಲಿಯನ್ನು ತಿರುಗಿಸಿ.

ಹೊರಗಿನಿಂದ ಬಾಗಿಲು ಲಾಕ್ ಆದರೆ:

ಇದು ಊಹಿಸಲು ಭಯ ತರಿಸುವಂತಹ ಸಂದರ್ಭ, ಒಂದು ವೇಳೆ ಮನೆಯಲ್ಲಿ ಯಾರು ಇರದ್ದಿದಾಗ ಡೋರ್ ಲಾಕ್ ಆದರೆ ದೇವರೇ ಗತಿ ಅಲ್ವಾ? ಇದಕ್ಕೆ ಒಂದು ಪರಿಹಾರ ವಿದೆ, ಇದನ್ನು ಬಳಸಿ ಯಾರ ಸಹಾಯವಿಲ್ಲದೆ ಬಾಗಿಲು ಮುರಿಯದೆ ಲಾಕ್ ಓಪನ್ ಮಾಡಬಹುದು.

ಮೊದಲು ಬಾಗಿಲಿನ ಲಾಕ್ ನಲ್ಲಿ ಸಣ್ಣದಾಗಿರೋ ಕಿಂಡಿ ಅಥವಾ ತೂತು ಇದೆಯಾ ನೋಡಿ ನಂತರ ಅದರ ಒಳಗಡೆ ನೇರವಾಗಿರೋ ಪೇಪರ್ ಕ್ಲಿಪ್ ಹಾಕಿ ಇನ್ನೊಂದು ಕಡೆಯಿಂದ ತಕ್ಷಣ ತಿರುಗಿಸಿ ಬಿಡಿ. ಕೂಡಲೇ ಲಾಕ್ ಒಪನ್ ಆಗತ್ತೆ. ಒಂದು ವೇಳೆ ಆಗದ್ದಿದರೆ ಲಾಕ್ ಫ್ರೇಮ್ ಅನ್ನು ನಿಧಾನವಾಗಿ ತಿರುಗಿಸಿ ಸ್ಕ್ರೂ ಸಡಿಲ ಮಾಡಿ ಲಾಕ್ ಓಪನ್ ಆಗುತ್ತೆ.

ಇರುವೆ, ನೊಣ ಮತ್ತು ಕೀಟಗಳ ಸಮಸ್ಯೆ:

ಯಾವುದೇ ಸೀಸನ್ ಎನ್ನದೆ ಕಾಡುವ ಇರುವೆ, ನೊಣ ಮತ್ತು ಕೀಟಗಳನ್ನು ಓಡಿಸಲು ಮನೆಯಲ್ಲಿ ಒಂದಿಷ್ಟು ಕೀಟನಾಶಕ ಪೌಡರ್ ಅಥವಾ ಯಾವುದಾದರು ಪೇಸ್ಟಿ ಸೈಡ್ ಇಟ್ಟುಕೊಳ್ಳಿ. ಇರುವೆ, ನೊಣ, ಜಿರಳೆ ಹೆಚ್ಚಾಗಿ ಕಂಡುಬರುವ ಮೂಲೆಗಳಲ್ಲಿ ಮತ್ತು ಇತರೆ ಪ್ರದೇಶದಲ್ಲಿ ಇದನ್ನು ಹಾಕಿ, ಆರಾಮಗಿರಿ.

ಮೈಕ್ರೋ ಓವೆನ್ ನಲ್ಲಿ ಹೊಗೆ:

ಇದು ಮೈಕ್ರೋ ಓವೆನ್ ಬಳಸುವ ಪ್ರತಿಯೊಬ್ಬರೂ ಒಂದಲ್ಲ ಒಂದಿನ ಅನುಭವಿಸುವ ಸಮಸ್ಯೆ. ಹೋಗೆ ಬಂದಾಗ ಹೆದರದೆ ಈ ಸಲಹೆಯನ್ನು ಪಾಲಿಸಿ. ಹೊಗೆ ಬಂದಾಗ ಒಂದಿಷ್ಟು ಗಟ್ಟಿಯಾದ ಅಡುಗೆ ಸೋಡಾ ಹಾಕಿ. ಇದನ್ನು ಆಹಾರ ಬಿಸಿಯಾಗುತ್ತಿರುವಾಗಲು ಹೊಗೆ ಬಂದರೆ ಹಾಕಿ ನೋ ಟೆನ್ಷನ್.

ಟಯರ್ ಪಂಕ್ಚರ್:

ನಿತ್ಯ ಕೆಲಸಕ್ಕೆ ಹೋಗಲು ಅನುಕೂಲವಾಗಲಿ, ಸ್ವಲ್ಪ ಸಮಯವೂ ಉಳಿಯುತ್ತೆ ಅಂತ ಅಥವಾ ಕೆಲಸದಿಂದ ರಿಲೀಫ್ ಆಗಲು ವಾರಾಂತ್ಯದಲ್ಲಿ ಹೊರಗೆ ಹೋದಾಗ ನಿಮ್ಮ ವಾಹನದ ಟಯರ್ ಪಂಕ್ಚರ್ ಆದರೆ? ಅದನ್ನು ಯಾಕೆ ನೆನೆಸ್ತೀರಾ, ಅಂತೀರಾ? ಏನು ಚಿಂತೆ ಇಲ್ಲ, ಸದಾ ನಿಮ್ಮ ಜೊತೆ ಜ್ಯಾಕ್, ಡೀಸೆಂಟ್ ಸ್ಪೇರ್, ಲೆಗ್ ರೆಂಚು ಇಟ್ಟುಕೊಂಡಿರಿ, ಇದನ್ನು ಬಳಸಿ ಗಾಡಿ ಸೈಡಿಗೆ ಹಾಕಿ ಆರಾಮಾಗಿ ಟೈಯರ್ ಬದಲಿಸಿಕೊಳ್ಳಿ.

ಗಾಯವಾದಾಗ:

ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಚಾಕುವಿನಿಂದ ಕೈಗೆ ಗಾಯವಾಗುವುದು ಅಥವಾ ಕೈಗೆ ಎಣ್ಣೆ ಸಿಡಿಯುವುದು, ಏನಾದರು ಕತ್ತರಿಸುವಾಗ ಕತ್ತರಿಯಿಂದ ಕೈಗೆ ಗಾಯವಾಗುವುದು ಸಾಮಾನ್ಯ, ಆಗ ಹೆದರದೆ, ಸುಟ್ಟ ಗಾಯ ಆಗಿದ್ದರೆ ತಕ್ಷಣ ತಣ್ಣಗಿನ ನೀರು ಹಾಕಿ ಅಮೇಲೆ ಬರ್ನಾಲ್ ಕ್ರೀಮ್ ಹಚ್ಚಿ. ಚಾಕುವಿನಿಂದ ಗಾಯ ಆಗಿದ್ದರೆ ರಕ್ತ ನಿಲ್ಲಲು ಅರಿಶಿನ ಹಚ್ಚಿ, ಸುತ್ತಲು ಗಟ್ಟಿಯಾಗಿ ಬಟ್ಟೆ ಕಟ್ಟಿ ನಂತರ ಕ್ಲಿನಿಕ್ ಗೆ ಹೋಗಿ ಚಿಕಿತ್ಸೆ ಪಡೆಯಿರಿ.

ಮೊಟ್ಟೆ ಕೈ ಜಾರಿ ಬಿದ್ದರೆ:

ಮೊಟ್ಟೆ ಕೈ ಜಾರಿ ಕೆಳಗೆ ಬಿದ್ದರೆ ಅದನ್ನು ಸ್ವಚ್ಛ ಮಾಡುವುದು ದೊಡ್ಡ ಸವಾಲಿನ ಕೆಲಸ, ಎಷ್ಟು ತೊಳೆದರು ಸ್ವಚ್ಛವೇ ಆಗುವುದಿಲ್ಲ ಅಲ್ವಾ? ಈಗ ಅದರ ಬಗ್ಗೆ ಚಿಂತೆ ಬೇಡ ಮೊಟ್ಟೆ ಬಿದ್ದ ಜಾಗದಲ್ಲಿ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಹೊತ್ತು ಬಿಡಿ ಅದು ಗಟ್ಟಿಯಾದ ನಂತರ ಸುಲಭವಾಗಿ ಕ್ಲೀನ್ ಮಾಡಿಬಿಡಿ.

Also Read: ಸದೃಢ ಆರೋಗ್ಯದ ಅಮೂಲ್ಯ ಉಪಾಯಗಳು!!