ನಿತ್ಯ ಎಳೆನೀರು ಕುಡಿದರೆ ದೇಹಕ್ಕೆ ಇಷ್ಟೆಲ್ಲ ಲಾಭವಾಗುತ್ತೆ ಎಂದು ತಿಳಿದರೆ, ಈಗಿನಿಂದಲೇ ಇದನ್ನು ಕುಡಿಯಲು ಶುರುಮಾಡ್ತೀರ…!

0
1197

Kannada News | Health tips in kannada

ಸಾಮಾನ್ಯವಾಗಿ ಜನ ಸಿನಿಮಾ ನೋಡಲು ಹೋದಾಗ ಅಥವಾ ಎಲ್ಲಾದರೂ ಸೈಟ್ ಸೀಯಿಂಗ್ ಎಂದು ಹೊರಗಡೆ ಹೋದಾಗ ತಂಪು ಪಾನೀಯ ಸೇವಿಸುತ್ತಾರೆ. ಆದರೆ, ತಂಪು ಪಾನೀಯ ಅಥವಾ ಕೂಲ್ ಡ್ರಿಂಕ್ಸ್ ಸೇವಿಸಿದರೆ ದೇಹಕ್ಕೆ ಹಾನಿಯಾಗುತ್ತದೆ. ಅದಕ್ಕೆ, ನೈಸರ್ಗಿಕವಾದ ಕೂಲ್ ಡ್ರಿಂಕ್ಸ್ ಸೇವಿಸಿ, ಯಾವುದು ಅದು ನ್ಯಾಚುರಲ್ ಕೂಲ್ ಡ್ರಿಂಕ್ಸ್, ನೀವೇ ನೋಡಿ.

ಸುಮಾರು ವರ್ಷಗಳಿಂದ ನಮ್ಮ ಹಿರಿಯರು ಕುಡಿಯುತ್ತ ಬಂದಿರುವ ನ್ಯಾಚುರಲ್ ಕೂಲ್ ಡ್ರಿಂಕ್ಸ್ ಯಾವುದು ಗೊತ್ತೆ, ಅದು “ಎಳೆನೀರು”. ಹೌದು, ಕೋಲಾ, ಪೆಪ್ಸಿ, ಸ್ಪ್ರೈಟ್, ಮೌಂಟೇನ್ ಡಿವ್ ಇತ್ಯಾದಿ ಹಾನಿಕಾರಕ ರಾಸಾಯನಿಕದಿಂದ ಮಾಡಿದ ಕೂಲ್ ಡ್ರಿಂಕ್ಸ್ ಕುಡಿಯುವ ಬದಲು ಎಳೆನೀರನ್ನು ಕುಡಿದರೆ ಏನೆಲ್ಲ ಲಾಭವಾಗುತ್ತದೆ ಎಂದು ನಾವು ನಿಮಗೆ ತಿಳಿಸುತ್ತೇವೆ.

ನಿತ್ಯ ಎಳೆನೀರನ್ನು ಕುಡಿಯುವುದರಿಂದ ದೇಹಕ್ಕಾಗುವ ಹತ್ತು ಲಾಭಗಳು:
ನೈಸರ್ಗಿಕ ತಂಪು ನೀಡುತ್ತದೆ:
ಎಳೆನೀರು ಬಿಸಿಲಿನ ತಾಪದಿಂದ ದೇಹಕ್ಕಾಗುವ ಹಾನಿಯನ್ನು ಕಡಿಮೆ ಮಾಡಿ ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಇದನ್ನು ಕುಡಿಯುದರಿಂದ ನೀರು ಕುಡಿಯುವ ಹತ್ತರಷ್ಟು ಲಾಭವಾಗುತ್ತದೆ.

ಏಜಿಂಗ್ ಕಡಿಮೆಗೊಳಿಸುತ್ತದೆ:
ಎಳೆನೀರು ಕುಡಿಯುವುದರಿಂದ ಚರ್ಮದ ಮೇಲೆ ಸುಕ್ಕುಗಳು ಬರುವುದು ಕಡಿಮೆಯಾಗುತ್ತದೆ. ವಯಸ್ಸು ಕಡಿಮೆಯಾದಂತೆ ಕಾಣಿಸುತ್ತದೆ, ಇದರಿಂದ ಚರ್ಮ ಕಾಂತಿಯುತವಾಗಿರುತ್ತದೆ.

ಮಕ್ಕಳ ಆರೋಗ್ಯಕ್ಕೆ:
ತಾಯಿ ಹಾಲಿನಲ್ಲಿ ಇರುವ ಲಾಕ್ಟಿಕ್ ಆಸಿಡ್ ಎಳೆನೀರಿನಲ್ಲಿ ಸಹ ಇರುತ್ತದೆಂದು ಸಂಶೋಧನೆಯಿಂದ ತಿಳಿದುಬಂದಿದೆ. ಅದಕ್ಕೆ, ಎಳೆನೀರನ್ನು ಮಕ್ಕಳಿಗೆ ಕುಡಿಸಿದರೆ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಕರಿಸುತ್ತದೆ.

ಜೀರ್ಣಶಕ್ತಿ:
ಏಳು ದಿನಗಳ ಕಾಲ, ನಿತ್ಯ ಖಾಲಿ ಹೊಟ್ಟೆಯಲ್ಲಿ ಎಳೆನೀರನ್ನು ಕುಡಿಯುದರಿಂದ ಅತಿಯಾಗಿ ಕಾಡುವ ಅಜೀರ್ಣ ಸಮಸ್ಯೆಯನ್ನು ದೂರಮಾಡಿ, ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ.

ಅಸಿಡಿಟಿ:
ನಿತ್ಯ ಎಳೆನೀರನ್ನು ಕುಡಿಯುದರಿಂದ ದೇಹಡದಲ್ಲಿರುವ ಅಧಿಕ ಆಮ್ಲವನ್ನು ತಟಸ್ಥ ಮಾಡುತ್ತದೆ. ಇದರಿಂದ ಅತಿಯಾಗಿ ಕಾಡುವ ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ.

ಚರ್ಮದ ಕಾಂತಿಗೆ:
ಚರ್ಮ ಒಣಗಿ ಡೆಡ್ ಸ್ಕಿನ್ ತೊಂದರೆ ಅನುಭವಿಸುತ್ತಿರುವರು ಎಳೆನೀರನ್ನು ಒಂದು ವಾರದ ಕಾಲ ಕುಡಿದರೆ, ಡೆಡ್ ಸ್ಕಿನ್ ಸಮಸ್ಯೆ ನಿವಾರಣೆಯಾಗಿ ಚರ್ಮ ಕಾಂತಿಯುತವಾಗಿರುತ್ತದೆ.

ಮೂತ್ರಪಿಂಡದ ಕಲ್ಲುಗಳು:
ಎಳನೀರು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ನಿವಾರಣೆಯಾಗಿ ಮೂತ್ರಪಿಂಡ ಅಥವಾ ಕಿಡ್ನಿಯಲ್ಲಿನ ಕಲ್ಲುಗಳು ಕ್ರಮೇಣ ಕಡಿಮೆಯಾಗುತ್ತವೆ.

ತಲೆನೋವು:
ದೇಹಕ್ಕೆ ಅಗತ್ಯವಾಗಿ ಬೇಕಾದ ಫೈಬರನ್ನು ಎಳನೀರು ನೀಡುತ್ತದೆ. ಇದಲ್ಲದೆ ಡೀಹೈಡ್ರೇಷನ್‌ನಿಂದ ಬರುವ ತಲೆನೋವು ಕಡಿಮೆ ಮಾಡುತ್ತದೆ.

Watch:

ಗರ್ಭಿಣಿಯರಿಗೆ:
ಗರ್ಭಿಣಿಯರು ನಿತ್ಯ ಎಳನೀರನ್ನು ಕುಡಿಯುವುದರಿಂದ ಗರ್ಭಕೋಶದಲ್ಲಿರುವ ಸಮಸ್ಯೆಗಳು ಕಡಿಮೆಯಾಗಿ, ಮಗು ಆರೋಗ್ಯವಾಗಿ ಬೆಳೆಯುತ್ತದೆ.

ಕೊಬ್ಬು ಕರಗಿಸುತ್ತದೆ:
ಒಂದು ವಾರ ಖಾಲಿ ಹೊಟ್ಟೆಯಲ್ಲಿ ನಿತ್ಯ ನಿಯಮಿತವಾಗಿ ಎಳನೀರು ಕುಡಿದರೆ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆ. ಇದು ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ.

Also read: ಮೈದಾ ಎಂಬ ಅತೀ ಭಯಂಕರ ವಿಷ!