ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನುವ ಜನರಿಗೆ ಬಿಗ್ ಶಾಕಿಂಗ್ ನ್ಯೂಸ್; ಕತ್ತಲಲ್ಲಿ 30 ನಿಮಿಷ ಮೊಬೈಲ್ ನೋಡಿದ್ರೆ ಏನ್ ಆಗುತ್ತೆ ಗೊತ್ತ??

0
1628

ಮೊಬೈಲ್ ಬಂದಾಗಿಂದ ಜನರ ಕೈಯಲ್ಲಿ ಏನಿಲ್ಲ ಎಂದರು ಮೊಬೈಲ್ ಅಂತು ಬೇಕೇಬೇಕು. ಮೊದಲು ಮೊಬೈಲ್ ಮಾತನಾಡಲು ಬಳಕೆ ಮಾಡುತ್ತಿದರು ಈಗ ಇಂಟರ್ನೆಟ್ ಬಳಕೆಯಿಂದ ಪ್ರತಿಯೊಬ್ಬರೂ ಮೊಬೈಲ್-ನಲ್ಲಿ ಇರುತ್ತಾರೆ. ದಿನದ ಅರ್ಧದಷ್ಟು ಸಮಯವನ್ನು ಮೊಬೈಲ್-ನಲ್ಲಿ ಕಳೆಯುತ್ತಾರೆ. ಹಗಲು ಮಾತ್ರವಲ್ಲದೆ ರಾತ್ರಿವೇಳೆಯಲ್ಲಿವೂ ಹೆಚ್ಚು ಮೊಬೈಲ್ ಬಳಕೆ ಮಾಡುವುದು ಸಹಜವಾಗಿದೆ ಆದರೆ ರಾತ್ರಿಯ ಕತ್ತಲಲ್ಲಿ ಲೈಟ್ ಆಫ್ ಮಾಡಿಕೊಂಡು ಮೊಬೈಲ್ ಬಳಕೆ ಮಾಡಿದರೆ ಎಷ್ಟೊಂದು ಅಪಾಯಗಳಿವೆ ನೋಡಿ.

Also read: ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರೆಯೆ?? ಹಾಗಿದ್ದರೆ ಈ ಸುಲಭ ಮಾರ್ಗದಿಂದ ಅಭ್ಯಾಸವನ್ನು ತಪ್ಪಿಸಿ..

ರಾತ್ರಿ ಮೊಬೈಲ್ ಬಳಕೆ ಸರಿನಾ?

ಹೌದು ರಾತ್ರಿವೇಳೆ ಅಥವಾ ಕತ್ತಲಲ್ಲಿ ಕೇವಲ 30 ನಿಮಿಷಗಳು ಮೊಬೈಲ್ ಪರದೆಯನ್ನು ನೋಡುವುದು ಅತ್ಯಂತ ಅಪಾಯಕಾರಿ ಎಂಬುದು ಇತ್ತೀಚಿನ ಸಂಶೋಧನೆ ಒಂದರಲ್ಲಿ ಸಾಬೀತಾಗಿದೆ. ಅಮೇರಿಕನ್ ಫೌಂಡೇಶನ್ ಸಂಶೋಧನೆಯ ಪ್ರಕಾರ, ನಾವು ಮೊಬೈಲ್ ಪರದೆಯಲ್ಲಿ ದೈನಂದಿನ ಮಂದ ಬೆಳಕಿನಲ್ಲಿ 30 ನಿಮಿಷಗಳು ಕೆಲಸ ಮಾಡಿದರೆ, ನಂತರ ನಮ್ಮ ಕಣ್ಣುಗಳು ಶುಷ್ಕವಾಗುತ್ತವೆ. ಜೊತೆಗೆ ಕಣ್ಣುಗಳ ರೆಟಿನಾದಲ್ಲಿ ಕೆಟ್ಟ ಪರಿಣಾಮ ಕಂಡುಬರುತ್ತದೆ. ಹೆಚ್ಚು ಜನರು ನಿದ್ರೆ ಮಾಡುವ ಮೊದಲು ಅಥವಾ ಕತ್ತಲಿನಲ್ಲಿ ಮೊಬೈಲ್ ಬಳಸುತ್ತಾರೆ. ಇದು ಕಣ್ಣುಗಳು ಮತ್ತು ಮಿದುಳಿನ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ನಾವು ಮೊಬೈಲ್ ಪರದೆಯಲ್ಲಿ ದೈನಂದಿನ ಮಂದ ಬೆಳಕಿನಲ್ಲಿ 30 ನಿಮಿಷಗಳು ಕೆಲಸ ಮಾಡಿದರೆ, ಅಥವಾ ಈ ದಿನಚರಿಯನ್ನು ದೀರ್ಘಕಾಲದವರೆಗೆ ಇಟ್ಟು ಕೊಳ್ಳುವುದರಿಂದ, ಕಣ್ಣಿನ ದೃಷ್ಟಿ ಕಡಿಮೆಯಾಗುತ್ತದೆ ಎಂಬುದನ್ನು ಈ ಸಂಶೋಧನೆ ತಿಳಿಸಿದೆ.

ಏನೆಲ್ಲಾ ತೊಂದರೆಗಳು?

ನಿದ್ರೆಯ ಮೇಲೆ ಪರಿಣಾಮ:
ಸುಮಾರು 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ವಿಷಯವನ್ನು ತಿಳಿಸಲಾಗಿದ್ದು, ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಾನಸಿಕ ಒತ್ತಡಕ್ಕೆ ಪರಿಣಾಮ:
ಈ ವರದಿಯ ಪ್ರಕಾರ ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು. ಎಂದು ತಿಳಿಸಿದೆ.

ದಾಂಪತ್ಯ ಜೀವನದ ಮೇಲೆ ಪರಿಣಾಮ:
ಮೊಬೈಲ್‌ ಅನ್ನು ಬ್ಯಾಗ್‌ನಲ್ಲಿ ಇಡುವುದಕ್ಕಿಂತ ಜೇಬಿನಲ್ಲಿ ಇಡುವುದರಿಂದ ಆಗುವ ಸಮಸ್ಯೆಗಳು ಹೆಚ್ಚಿವೆ. ಜೇಬಿನಲ್ಲಿ ಮೊಬೈಲ್ ಇದ್ದಾಗ ಅದರ ರೇಡಿಯೇಷನ್ ದೇಹದಲ್ಲಿ ಮೇಲೆ 7 ಪಟ್ಟು ಅಧಿಕ ಬಿದ್ದು, ಡಿಎನ್‌ಎ ಸಂರಚನೆಯಲ್ಲಿ ವ್ಯತ್ಯಾಸ ಉಂಟಾಗಿ ಗಡ್ಡೆ ಬೆಳೆಯುವುದು, ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ನರಗಳನ್ನು ಅಶಕ್ತಗೊಳಿಸುತ್ತೆ:
ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಇದು ಅವರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದು ಸಂಶೋಧನೆ ಹೇಳಿದೆ.

ವಯಕ್ತಿಕ ಜೀವನದ ಮೇಲೆ ಪರಿಣಾಮ:
ಜನರು ಪ್ರತಿನಿತ್ಯವೂ ಯಾವುದಾದರು ತೊಂದರೆಗೆ ಸಿಲುಕುವುದು ಈ ಮೊಬೈಲ್-ಗಳ ಬಳಕೆಯಿಂದ ಎಂದರೆ ಅಲ್ಪ ಮಟ್ಟಿಗೆ ತಪ್ಪಾಗಲಾರದು. ಏಕೆಂದರೆ ವಯಕ್ತಿಕ ಸಮಸ್ಯೆಗಳು ಎನಿದರು ಮನೆಯವರ ಅಥವಾ ಪ್ರೀತಿ ಪಾತ್ರರಿಗೆ ತಿಳಿಯುತ್ತಿತು, ಆದರೆ ಮೊಬೈಲ್ ಬಳಕೆ ಮಾಡುವುದರಿಂದ ಜನರು ಯಾವ ರೀತಿಯ ವರ್ತನೆ ಮಾಡುತ್ತಾರೆ ಎನ್ನುವುದು ತಿಳಿಯುತ್ತಿಲ್ಲ, ಇದರಿಂದ ಎಲ್ಲರೂ ಅವರವರ ಕೆಲಸದಲ್ಲಿ ತೊಡಗಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲದಂತೆ ಆಗಿದೆ.

Also read: ಮೊಬೈಲ್ ಎಷ್ಟೊಂದು ಉಪಯುಕ್ತ ಎನ್ನುವರಿಗೆ ಆಘಾತ; ಹೆಚ್ಚು ಮೊಬೈಲ್ ಬಳಕೆ ಮಾಡಿದರೆ ನಿದ್ರೆ ರೋಗ, ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ ಕಾರಣವಂತೆ!!