ಸಾಮಾನ್ಯವಾಗಿ ಕಾಡುವ ತಲೆನೋವಿಗೆ ಸರಳ ಉಪಾಯಗಳು

0
1714

೧) ಓಂ ಕಾಳಿನ ಚೂರ್ಣವನ್ನು ಅನ್ನದ ಬಸಿ ಗಂಜಿಯೊಂದಿಗೆ ಮಿಶ್ರ ಮಾಡಿ ಹಣೆಗೆ ಲೇಪಿಸಿದ್ದಲ್ಲಿ ತಲೆನೋವು ಮಾಯವಾಗುತ್ತದೆ.
೨) ತುಂಬಿಸೊಪ್ಪಿನ ರಸಕ್ಕೆ ಬೆಳ್ಳುಳ್ಳಿ ರಸ ಸೇರಿಸಿ ಹಣೆಗೆ ಲೇಪಿಸಿದ್ದಲ್ಲಿ ತಲೆನೋವು ಶಮನವಾಗುತ್ತದೆ.

೩)ದಾಲ್ಚಿನ್ನಿಯನ್ನು ನಿಂಬೆರಸದಲ್ಲಿ ತೇದು ಗಂಧ ತೆಗೆದು ಹಣೆ ಕೆನ್ನೆಗಳಿಗೆ ಲೇಪಿಸುವುದು.
೪) ನಿಂಬೆಹಣ್ಣಿನ ಸಿಪ್ಪೆಯನ್ನು ನುಣ್ಣಗೆ ಅರೆದು ಹಣೆಗೆ ಪಟ್ಟು ಹಾಕಿದರೆ ಬಿಸಿಲಿನಿಂದ ಬರುವ ತಲೆನೋವು ಶಮನವಾಗುತ್ತದೆ.

೫) ಏಲಕ್ಕಿ ಚೂರ್ಣವನ್ನು ಚಿಟಿಕೆ ಮೂಗಿಗೆ ಏರಿಸಿದ್ದಲ್ಲಿ ಒಳ್ಳೆ ಪರಿಹಾರ ಕಂಡು ಬರುತ್ತದೆ.
೬) ಹುಣಸೆ ಹಣ್ಣಿನ ರಸದಲ್ಲಿ ಸಕ್ಕರೆ ಬೆರೆಸಿ ಪಾನಕದಂತೆ ಸೇವಿಸಿದರೆ ಆರಾಮಾಗುತ್ತದೆ.

೭) ಒಣಶುಂಠಿಯನ್ನು ನೀರಿನಲ್ಲಿ ತೇದು ಗಂಧ ತೆಗೆದು ಹಣೆಗೆ ಲೇಪಿಸಿ ಹಬೆಯ ಶಾಖವನ್ನು ತೆಗೆದುಕೊಂಡಲ್ಲಿ ತಲೆ ನೋವು ಕಡಿಮೆಯಾಗುತ್ತದೆ.
೮) ಈರುಳ್ಳಿಯನ್ನು ಚೆನ್ನಾಗಿ ಅರೆದು ಅಂಗಾಲಿಗೆ ಹಚ್ಚಿ ವಿಶ್ರಮಿಸುವುದು.

೯) ಬೇವಿನ ಎಲೆಗಳ ರಸವನ್ನು ಒಂದೆರಡು ಟೀ ಸ್ಪೂನ್ ಸೇವಿಸುವುದು.
೧೦) ಸೇಬಿನ ಹಣ್ಣಿನ ಹೋಳುಗಳಿಗೆ ಉಪ್ಪು ಸವರಿ ಅಗಿದು ತಿನ್ನಬೇಕು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840