ವೈರಲ್ ಆಗುತ್ತಿದೆ.. ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಹಂತಕರ ಜೊತೆ ಸಚಿವ ಯು ಟಿ ಖಾದರ್ ಇರುವ ಫೋಟೋ

0
439

UT-Khadar-food-murderer-goes-viral | Kannada News

ಮೊದಲು ಕೊಲೆಯಾದವನ ಜೊತೆ.. ಈಗ ಹಂತಕರ ಜೊತೆಗಿನ ಫೋಟೋ ವೈರಲ್..

ಹೌದು ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಜೊತೆ ಈ ಮುಂಚೆ ಸಚಿವ ಯು ಟಿ ಖಾದರ್ ರವರು ಊಟ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು..

ಇದೀಗ ಅದೇ ಇಲ್ಯಾಸ್ ಕೊಲೆ ಆರೋಪದ ಪ್ರಮಖ ಆರೋಪಿಗಳ ಜೊತೆಗಿರುವ ಖಾದರ್ ರವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಓಡಾಡುತ್ತಿದೆ..

ಇತ್ತೀಚೆಗೆ ಕಳೆದ ಜನವರಿ 13 ರಂದು ಫ್ಲಾಟ್ ಒಂದರಲ್ಲಿ ಕೊಲೆಗೀಡಾಗಿದ್ದ ಇಲ್ಯಾಸ್ ಉಳ್ಳಾಳ ದ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ ಜೊತೆಗೆ ಸಚಿವ ಯು ಟಿ ಖಾದರ್ ರವರ ಆಪ್ತನೆಂದು ಗುರುತಿಸಿಕೊಂಡಿದ್ದ…

ಇಲ್ಯಾಸ್ ಕೊಲೆ ಆರೋಪದಡಿಯಲ್ಲಿ ಪ್ರಮುಖ ಆರೋಪಿಗಳಾಗಿ ಬಂಧಿಸಲ್ಪಟ್ಟಿರುವ ದಾವೂದ್, ಸಮೀರ್, ಉಸ್ಮಾನ್ ರವರ ಜೊತೆ ಸಚಿವರ ಫೋಟೊ ಹರಿದಾಡುತ್ತಿದೆ..

ಅರೋಪಿ ಉಸ್ಮಾನ್ ಹೆಗಲಿನ ಮೇಲೆ ಯು ಟಿ ಖಾದರ್ ಕೈ ಹಾಕಿಕೊಂಡಿರುವುದರಿಂದ ಬಹಳ ಆಪ್ತರೆಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ..‌ ಪ್ರಕರಣ ಶುರುವಾದಾಗಿನಿಂದ ಒಂದಿಲ್ಲೊಂದು ಫೋಟೋಗಳ ಮೂಲಕ ಕುತೂಹಲ ಹೆಚ್ಚುತ್ತಿದೆ ಎನ್ನಬಹುದು.

Also read:ರಾಜ್ಯದಲ್ಲಿ ಸರಿಣಿ ಹತ್ಯೆಗಳು ನಡೆಯುತ್ತಲೇ ಇವೆ, ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಂಪೂರ್ಣ ವಿಫಲವಾಗಿದೆ: ಬಿ.ಎಸ್.ವೈ.