ಯಾರ್ರೀ ಹೇಳಿದ್ದು ಉತ್ತರ ಕರ್ನಾಟಕ ಬೇರೆ ದಕ್ಷಿಣ ಕರ್ನಾಟಕಗಳು ಬೇರೆ ಅಂತ ?

0
1545

ಉತ್ತರ ದಕ್ಷಿಣ ಭಾಗಗಳು ತಾಯಿ ಭುವನೇಶ್ವರಿಯ ಎರಡು ಕಣ್ಣುಗಳಿದ್ದಂತೆ , ಹೌದು ಉತ್ತರ ಕರ್ನಾಟಕ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಆದರೆ ಜನರ ನಡುವೆ ಯಾವುದೇ ಬೇದ ಭಾವಗಳಿಲ್ಲ.

ನುಡಿಗಾಗಿ ಗುಡಿಕಟ್ಟಿ ಪೂಜಿಸಿದ ಏಕೈಕ ನಾಡು ನಮ್ಮದು!

img_l_c

ಬೆಂಗಳೂರು ಹೇಗೋ ಉಳಿದ ಎಲ್ಲಾ ಜಿಲ್ಲೆಗಳು ಸಹ ಹಾಗೆಯೇ , ಗಂಡು ಮೆಟ್ಟಿದ ನಾಡು , ದಾಸ ಶರಣರ ಬೀಡು , ಪಂಪ ಜನ್ನ ಪೊನ್ನ ,ಕುಮಾರವ್ಯಾಸ ,ಕುವೆಂಪು ,ಬೈರಪ್ಪ ಹೀಗೆ ನಾಡ ಏಳಿಗೆಗಾಗಿ ಎಲ್ಲಾ ಭಾಗದ ಜನರು ಶ್ರಮಿಸಿದ್ದಾರೆ, ನಾವೆಲ್ಲರೂ ಒಂದೇ ಎಂದು ಸಾಬೀತು ಪಡಿಸುವ ಕೆಲವು ನಿದರ್ಶನಗಳು ನಿಮ್ಮ ಮುಂದೆ.

c90a11d3-255b-47bc-8eee-b555f87272f8

ಇದು 1973-74 ರ ಚಿತ್ರ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಉತ್ತರ ಕರ್ನಾಟಕ ಭೀಕರ ಬರಗಾಲಕ್ಕೆ ತುತ್ತಾಗಿತ್ತು.
ಕಾವೇರಿಗಾಗಿ ಬೀದಿಗಿಳಿದು ಉಗ್ರರೂಪ ತಾಳುವ ಮಂಡ್ಯದ ರೈತರು ಮತ್ತೊಬ್ಬರ ಕಷ್ಟಕ್ಕೆ ಕರಗುವ, ಮರುಗುವ ಹೃದಯವಂತರು ಎನ್ನುವುದನ್ನು ಸಾಬೀತುಪಡಿಸಿದ ಕ್ಷಣವದು.

ಮಂಡ್ಯದ ರೈತರು ಅಂದಿನ ಕೈಗಾರಿಕಾ ಸಚಿವ ಎಸ್.ಎಂ.ಕೃಷ್ಣ ಮತ್ತು ಮುಖ್ಯಮಂತ್ರಿ ದೇವರಾಜ ಅರಸರ ಸಮ್ಮುಖದಲ್ಲಿ ಆ ಭಾಗದ ಜಾನುವಾರುಗಳಿಗೆ ಸುಮಾರು ಲಾರಿ ಲೋಡು ನೆಲ್ಲನ್ನು ಉದಾರವಾಗಿ ನೀಡಿ ಸಹಕರಿಸಿದ್ದರು . ಅವರೂ ರೈತರೇ ಅಲ್ಲವೇ? ಅವರಿಗೆ ಕಷ್ಟವಿರುವುದಿಲ್ಲವೇ ?

ಇದು ಈ ಕ್ಷಣದಲ್ಲಿ ನೆನಪಿಗೆ ಬಂದದ್ದೇಕೆಂದರೆ, ರಾಜ್ಯದಲ್ಲಿ ಈಗಲೂ 150 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲವಿದೆ, ಜನರಿರಲಿ ಜಾನುವಾರುಗಳಿಗೆ ನೀರು ನಿಡಿ ಸಿಗದಂತಾಗಿದೆ, ಮಾರುವಂತಹ ಸಂದರ್ಭ ಸೃಷ್ಟಿಯಾಗಿದೆ.

ಕಾವೇರಿ ಹೋರಾಟದ ಸಮಯ ರಾಜ್ಯದ ನಾನಾ ಭಾಗದ ಜನರು ಸೇರಿ ನಡೆಸಿದ ಹೋರಾಟ , ಕಾವೇರಿ ಹೋರಾಟ ಕೇವಲ ಮಂಡ್ಯ,ಮೈಸೂರು , ಮದ್ದೂರು , ರಾಮನಗರ ,ಬೆಂಗಳೂರಿಗೆ ಸೀಮಿತವಾಗಿರಲಿಲ್ಲ .

ಮಹದಾಯಿ ಹೋರಾಟ ಕೇವಲ ಉತ್ತರ ಕರ್ನಾಟಕದ ಭಾಗಗಳಿಗೆ ಸೀಮಿತವಾಗಿರಲಿಲ್ಲ  ಅಂತೆಯೇ ಕೊಡಗಿಗೆ ರೈಲು ಬೇಡ, ಪಶ್ಚಿಮ ಘಟ್ಟಗಳ ಭಾರಿ ಅರಣ್ಯ ಸಂಪತ್ತು ಲೂಟಿ ಈ ವಿಷಯಗಳಲ್ಲೂ ಎಲ್ಲಾ ಭಾಗದ ಜನರು ತಮ್ಮ ಒಕ್ಕೊರಲಿನಿಂದ ಬೆಂಬಲವನ್ನು ಸೂಚಿಸಿದ್ದಾರೆ .
ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಕರ್ನಾಟಕ ಭಾಗದ ಜನರು ಒಂದಾಗಿದ್ದರೆ ಚಂದ , ಒಗ್ಗಟ್ಟಿನಲ್ಲಿ ಬಲವಿದೆ ಅಲ್ಲವೇ ?

ಅಂದಿನ ಆ ಚಿತ್ರಗಳು, ಇಂದು ಸಂಕಷ್ಟಕ್ಕೀಡಾದವರ ನೆರವಿಗೆ ದಾರಿ ಮಾಡಿಕೊಡಬಹುದೆ ಎಂಬ ಸಣ್ಣ ಆಸೆಯಷ್ಟೆ….

karnatakamap1

ಕರ್ನಾಟಕ ಒಂದೇ !!