ಉತ್ತರ ಪ್ರದೇಶದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜೀನ್ಸ್, ಟೀ ಶರ್ಟ್ ನಿಷೇಧ

0
420

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸರ್ಕಾರಿ ಕಚೇರಿಗಳಲ್ಲಿ ಸಿಗರೇಟು, ಗುಟ್ಕಾ ನಿಷೇಧವಾಗಿದ್ದವು. ಈಗ ಶಾಲಾ ಕಾಲೇಜುಗಳಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಗಳನ್ನು ಧರಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ಶಾಲಾ ಕಾಲೇಜುಗಳಿಗೆ ಅಸಭ್ಯವಾಗಿ ಬಟ್ಟೆ ಹಾಕಿಕೊಂಡು ಬರುವುದನ್ನೂ ನಿಷೇಧಿಸಲಾಗಿದೆ.

 

ಉತ್ತರ ಪ್ರದೇಶದಲ್ಲಿ ಒಟ್ಟು 158 ಸರ್ಕಾರಿ ಶಾಲೆಗಳಿವೆ, 331 ಅನುದಾನಿತ ಶಾಲೆಗಳಿವೆ. ಈ ಶಾಲೆಗಳೂ ಸೇರಿದಂತೆ ರಾಜ್ಯದ ಎಲ್ಲಾ ಕಾಲೇಜಗಳು, ವಿಶ್ವ ವಿದ್ಯಾಲಯಗಳಿಗೆ ಈ ನಿಯಮ ಅನ್ವಯವಾಗಲಿದೆ

ಕೇವಲ ವಿದ್ಯಾರ್ಥಿನಿಯರಿಗಷ್ಟೇ ಅಲ್ಲ, ಈ ವಿದ್ಯಾ ಸಂಸ್ಧೆಗಳಲ್ಲಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೂ ಈ ನಿಯಮ ಅನ್ವಯ ಆಗಲಿದೆ.

 

ಅಷ್ಟೇ ಅಲ್ಲದೆ, ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸಿದ್ದು, ಆಯಂಟಿ ರೋಮಿಯೋ ಸ್ಕ್ವಾಡ್ ರಚಿಸಿದ್ದು, ರೈತರ ಸಾಲ ಮನ್ನಾ ಮಾಡಿದ್ದು ಮುಂತಾದ ನಿರ್ಧಾರಗಳು ಜನರ ಮನ ಗೆದ್ದಿದ್ದವು.

 

ಆದರೆ, ಈಗ ಮಹಿಳೆಯರಿಗೆ ಜೀನ್ಸ್ ಪ್ಯಾಂಟ್, ಟೀ ಶರ್ಟ್ ನಿಷೇಧದ ನಿರ್ಧಾರ ವಿವಾದ ಹುಟ್ಟುಹಾಕಬಹುದು ಹಾಗೂ ವಿರೋಧ ಪಕ್ಷಗಳ ವಾಗ್ದಾಳಿಗೂ ಕಾರಣವಾಗಬಹುದು ಎಂದು ಹೇಳಲಾಗಿದೆ.