ಇಸ್ಪೀಟ್ ಜೂಜಾಟದಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಭೂಪ; ಇಸ್ಪೀಟ್-ನಲ್ಲಿ ಗೆದ್ದ ಸ್ನೇಹಿತರು ಮಹಿಳೆಗೆ ಏನ್ ಮಾಡಿದರು ಗೊತ್ತಾ??

0
653

ಇತ್ತೀಚಿಗೆ ಜನರು ಜೂಜಾಟದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಓಸಿ, IPL, ಮಟ್ಕ ಸೇರಿದಂತೆ ಇಸ್ಪೀಟ್ ಆಡಿ ಮನೆ, ಆಸ್ತಿ, ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲಿ ಇಸ್ಪೀಟ್ ಆಟವಂತು ಜನರನ್ನು ಚರ್ಮ ಸಮೇತ ಸುಲಿಯುತ್ತಿದೆ. ಕೆಲವರಂತೂ ಇರುವ ಉದ್ಯೋಗ ಬಿಟ್ಟು ಇಸ್ಪೀಟ್ ಆಡಿಯೇ ಜೀವನ ಸಾಗಿಸುತ್ತಿದ್ದರೆ ಇನ್ನೂ ಕೆಲವರು ಆಟವಾಡದೆ. ಇಸ್ಪೀಟ್ ಆಡುವರಿಗೆ ದಿನದ ಬಡ್ಡಿಯಂತೆ ಹಣ ನೀಡಿ ಹಣ ಗಳಿಸಿದರೆ ಆಡಿದವರು ಮಾತ್ರ ರಸ್ತೆಗೆ ಬರುವಂತೆ ಆಗಿದೆ. ಇಂತಹದೆ ಚಟಕ್ಕೆ ಬಿದ್ದ ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಯನ್ನೇ ಇಸ್ಪೀಟ್ ಜೂಜಾಟದಲ್ಲಿ ಕಟ್ಟಿ ಸೋತು ಹೆಂಡತಿಯನ್ನೇ ಕಳೆದುಕೊಂಡಿದ್ದಾನೆ.

Also read: ಸಣ್ಣ ವಿಚಾರಕ್ಕೆ ಜಗಳವಾಡಿ ಗಂಡನ ಮನೆ ಬಿಟ್ಟು ಬಂದಿದ್ದ ಹೆಂಡತಿಯನ್ನು ಸಂಸಾರ ಮಾಡಲು ಕರೆದಿದ್ದಕ್ಕೆ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಹೆಂಡತಿ.!

ಇಸ್ಪೀಟ್ ಆಟದಲ್ಲಿ ಹೆಂಡತಿಯನ್ನೇ ಇಟ್ಟ?

ಹೌದು ತಮ್ಮ ಜೀವನಕ್ಕೆ ಇಸ್ಪೀಟ್ ಎಲ್ಲ ಎಂದು ಆಟವಾಡುತ್ತಿರುವ ಉತ್ತರ ಪ್ರದೇಶದ ವ್ಯಕ್ತಿ ಕೊನೆಗೆ ಹೆಂಡತಿಯನ್ನೇ ಪಣಕ್ಕಿಟ್ಟು ಸೋತಿದಕ್ಕೆ ಆತನ ಸ್ನೇಹಿತರು ಆಕೆಯ ಬಟ್ಟೆ ಹರಿದು, ಅತ್ಯಾಚಾರಕ್ಕೆ ಯತ್ನಿಸಿ ದುಷ್ಟತನ ಮರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೆ. 15ರಂದು ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು. ನಶೆಯಲ್ಲಿದ್ದ ಪತಿ ಮನೆಯಲ್ಲೇ ನಾಲ್ವರು ಸ್ನೇಹಿತರ ಜೊತೆ ಜೂಜಾಟ ಆಡುತ್ತಿದ್ದನು. ಈ ವೇಳೆ ಹಣ ಖಾಲಿಯಾದ ಮೇಲೆ ಪತ್ನಿಯನ್ನು ಆಟದಲ್ಲಿ ಪಣಕಿಟ್ಟಿದ್ದನು. ಆದರೆ ಆಟದಲ್ಲಿ ಸೋತ ಮೇಲೆ ಪತ್ನಿಯನ್ನು ಸ್ನೇಹಿತರಿಗೆ ಬಿಟ್ಟುಕೊಟ್ಟಿದ್ದನು. ಆಗ ಆತನ ಸ್ನೇಹಿತರು ಪತಿಯ ಮುಂದೆಯೇ ಮಹಿಳೆಯ ಬಟ್ಟೆ ಹರಿದು, ಅತ್ಯಾಚಾರ ಎಸಗಲು ಮುಂದಾಗಿದ್ದಾರೆ. ಇದನ್ನು ನೋಡಿದ ಗಂಡ ಸುಮನ್ನೇ ಕುಳಿತ್ತಿದ್ದನು ಎಂದು ದೂರಿನಲ್ಲಿ ತಿಳಿದಿದೆ.

ಆಟದಲ್ಲಿ ಗೆದ್ದ ವ್ಯಕ್ತಿ ಸ್ನೇಹಿತರು ಮಹಿಳೆಗೆ ಲೈಂಗಿಕವಾಗಿ ಒತ್ತಾಯ ಮಾಡಿದ್ದಾರೆ. ಇದಕ್ಕೆ ಒಪ್ಪದ ಮಹಿಳೆಯನ್ನು ತಳಿಸಿ ಬಟ್ಟೆಯನ್ನು ಹರಿದು ನಗ್ನಗೊಲಿಸಿದ್ದಾರೆ. ನಂತರ ಅವರಿಂದ ತಪ್ಪಿಕೊಂಡ ಮಹಿಳೆ ಅಡುಗೆ ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆದರು ಬಿಡದ ಪಾಪಿಗಳು ಬಾಗಿಲು ಮುರಿಯಲು ಮುಂದಾಗಿದ್ದಾರೆ. ಇದನ್ನು ನೋಡಿ ಭಯಗೊಂಡ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮಾಹಿತಿ ತಿಳಿದ ಬಳಿಕ ಮನೆಗೆ ಬಂದ ಪೊಲೀಸರು ಪತಿಯ ಜೊತೆಗೆ ನಾಲ್ವರು ಸ್ನೇಹಿತರನ್ನು ಹಾಗೂ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Also read: ದೇಶದಲ್ಲಿ ಮೊದಲ ಬಾರಿಗೆ ‘ಹೂಸು ಬಿಡುವ ಸ್ಪರ್ಧೆ’; ಗೆದ್ದವರಿಗಿದೆ ಭಾರಿ ಬಹುಮಾನ, ನೀವೂ ಭಾಗವಹಿಸಬಹುದು ಹೇಗೆ ಅಂತ ಈ ಮಾಹಿತಿ ನೋಡಿ.!

ಪೊಲೀಸ್ ಸ್ಟೇಷನ್ ಅಲ್ಲಿವೂ ಕೂಡ ಮಹಿಳೆಗೆ ಮೋಸ ಮಾಡಿದ್ದು, ಪೊಲೀಸರು ಆರೋಪಿಗಳಿಂದ ಹಣ ಪಡೆದು ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ಇದು ಪತಿ-ಪತ್ನಿ ಜಗಳವೆಂದು ಎಫ್‍ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. ಈ ಬಗ್ಗೆ ಮಹಿಳೆ ಹಿರಿಯ ಅಧಿಕಾರಿಗಳ ಬಳಿ ದೂರು ನೀಡಿದಾಗ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗುತ್ತದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಬರಿ ಇಸ್ಪೀಟ್ ಆಟಕ್ಕೆ ಹೆಂಡತಿಯನ್ನೇ ಬೇರೆಯರಿಗೆ ಕೊಟ್ಟ ಗಂಡ ಎಷ್ಟೊಂದು ಆಟಕ್ಕೆ ಮಗ್ನನಾಗಿದ್ದಾನೆ ಎನ್ನುವುದು ಸ್ಥಳಿಯರ ಅಕ್ರೋಷವಾಗಿದೆ.

ಇಂತಹ ಘಟನೆಗಳು ಹಲವು ಕಡೆ ನಡೆಯುತ್ತಾನೆ ಇರುತ್ತೆ ಆದರೆ ಮರ್ಯಾದೆಗೆ ಹೆದರಿ ಬೆಳಕಿಗೆ ಬರೋದಿಲ್ಲ, ಇದೊಂದು ದೊಡ್ಡ ಮೋಸದ ಆಟವೆಂದು ತಿಳಿದರು ಜನರು ತಮ್ಮ ಆಸ್ತಿಯ ಜೊತೆಗೆ ಹೆಂಡತಿ ಮಕ್ಕಳನ್ನು ಮಾರಾಟಕ್ಕೆ ಇಟ್ಟು ತಮ್ಮ ಚಟವನ್ನು ತಿರಿಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ತಿಳಿದರು ಪೊಲೀಸರು ಹಣ ಪಡೆದು ಮತಷ್ಟು ಆಟವಾಡಲು ನೆರವಾಗುತ್ತಿರುವುದು ಯಾವ ಮಾನವಿತೆ ಎನ್ನುವುದು ಸಂತ್ರಸರ ಪ್ರಶ್ನೆಯಾಗಿದೆ.