ಉತ್ತರ ಕರ್ನಾಟಕದ ಪಲ್ಯಗಳಲ್ಲಿ ಅತೀ ಬೇಡಿಕೆಯ ಬದನೇಕಾಯಿ ಎಣಗಾಯಿ ಪಲ್ಯ ಮಾಡುವ ವಿಧಾನ

0
1852

ಬೇಕಾಗುವ ಸಾಮಗ್ರಿಗಳು.

 • ಚಿಕ್ಕ ಬದನೇಕಾಯಿ ೫-೬
 • ಈರುಳ್ಳಿ
 • ಎಣ್ಣೆ
 • ಅರಿಶಿನ
 • ಉಪ್ಪು ಸ್ವಲ್ಪ
 • ಸಾಸಿವೆ ಸ್ವಲ್ಪ
 • ಟೊಮೇಟೊ
 • ಖಾರದ ಪುಡಿ
 • ಶೇಂಗಾ ಪುಡಿ ೪-೫ ಟೇಬಲ್ ಚಮಚ (ಕಡಲೇಕಾಯಿ ಬೀಜದ ಪುಡಿ)
 • ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ

 • ೧/೨ ಈರುಳ್ಳಿ ಯನ್ನು ಚಿಕ್ಕದಾಗಿ ಮತ್ತು ಇನ್ನು ಅರ್ಧ ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿಕೊಳ್ಳಿ.
 • ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ಮೇಲಿನ ತೊಟ್ಟು ತೆಗೆದು, ಮೊದಲು ಅರ್ಧ ನಂತರ ಇನ್ನರ್ದ ಭಾಗಗಳನ್ನಾಗಿ ಮಾಡಿ. (ಪೂರ್ತಿಯಾಗಿ ಹೆಚ್ಚದೆ, ಅದರೊಳಗಡೆ ಮಸಾಲೆಯನ್ನು ತುಂಬುವಂತೆ ಕಟ್ ಮಾಡಿ ಕೊಳ್ಳಿ.) ಸೂಚನೆ: ಹೆಚ್ಚಿದ ಬದನೆಕಾಯಿಯನ್ನು ನೀರಿನಲ್ಲಿ ಇಡಿ, ಕಪ್ಪಾಗದೆ ಇರುವುದಕ್ಕೆ.
 • ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಗೆ ಚಿಕ್ಕದಾಗಿ ಹೆಚ್ಚಿಕೊಂಡ ಟೊಮೇಟೊ, ಕಡಲೆಬೀಜದ ಪುಡಿ, ಉಪ್ಪು, ಖಾರದ ಪುಡಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಹಾಕಿ ಚೆನ್ನಾಗಿ ಕಲಸಿಡಿ. ಇದನ್ನು ಬದನೆಕಾಯಿಯಲ್ಲಿ ತುಂಬಿಡಿ.
 • ಒಂದು ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ, ಕಾದ ನಂತರ ಅದಕ್ಕೆ ಸಾಸಿವೆ, ಅರಿಶಿನ ಹಾಗು ಉದ್ದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
 • ಈಗ ಮಸಾಲೆ ತುಂಬಿದ ಬದನೆಕಾಯಿಯನ್ನು ಹಾಕಿ, ಮೇಲೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಲು ಬಿಡಿ.
 • ಬೆಂದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಬದನೇಕಾಯಿ ಎಣಗಾಯಿ ಪಲ್ಯ ಸವಿಯಲು ಸಿದ್ದ. ಇದನ್ನು ಜೋಳದ ರೊಟ್ಟಿಯ ಜೊತೆ ತಿನ್ನಿರಿ. ಅದರ ಸವಿಯನ್ನು ಸವಿಯಿರಿ.